ಹಾವೇರಿ :
ನಗರದ ಕೆ.ಪಿ.ಟಿ.ಸಿ.ಎಲ್. ಸಮುದಾಯ ಭವನದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೌಕರರ ಸಹಕಾರ ಸಂಘದ 40ನೇ ವರ್ಷದ ಸರ್ವಸದಸ್ಯರ ಮಹಾಸಭೆ ಜರುಗಿತು.
ಮಹಾಸಭೆಯನ್ನು ಹಾವೇರಿ ವೃತ್ತದಅಧೀಕ್ಷಕಇಂಜಿನೀಯರ(ವಿ) ಎಮ್.ಬಿ.ಪಾಟೀಲ ದೀಪ ಬೆಳಗಿಸಿ ಉದ್ಘಾಟಿಸಿ ಮತನಾಡಿದ ಅವರು ಸಹಕಾರಿ ಸಂಘಗಳ ಆಡಳಿತ ಮಂಡಳಿಯಲ್ಲಿ ಬದ್ದತೆ ಮತ್ತು ಪ್ರಾಮಾಣಿಕತೆಇದ್ದಾಗ ಸಂಘ ಹೆಮ್ಮರವಾಗಿ ಬೆಳೆಯಲು ಸಾದ್ಯ. ಇದಕ್ಕೆದೇಶ ಮತ್ತು ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಕಾರಿ ಸಂಘಗಲಾದ ನಂದಿನಿ,ಅಮೂಲ್,ಅಕಷಯ ಪಾತ್ರೆಯಂತಹ ಸಂಸ್ಥೆಗಳು ಮಾದರಿಯಾಗಿವೆ. ಸದಸ್ಯರಿಗೆ ಸಹಾಯ ಹಸ್ತ ಚಾಚುತ್ತಲೇಆಪತ್‍ಬಾಂಧವ ರೀತಿಯಲ್ಲಿ ನೇರವಿಗೆ ಬರಬೇಕು ಎಂದು ಪಾಟೀಲರು ಹೇಳಿದರು.
ಅದ್ಯಕ್ಷತೆ ವಹಿಸಿದ್ದ ನೌಕರರ ಪತ್ತಿನ ಅಧ್ಯಕ್ಷರಾದ ವಿಜಯಕುಮಾರ ಮುದುಕಣ್ಣನವರ ಮಾತನಾಡಿ ಒಂದು ಸಹಕಾರಿ ಸಂಘ ಚೆನ್ನಾಗಿದೆಎಂದರೆಅದರಲ್ಲಿಯ ಸದಸ್ಯರು ಪ್ರಜ್ಞಾವಂತರು ಮತ್ತು ತಿಳುವಳಿಕೆ ಉಳ್ಳವರು ಇದ್ದಾರೆಂದುಅರ್ಥ. ಕಠೀಣ ಪ್ರಸಂಗಗಳಲ್ಲಿ ಆರ್ಥಿಕ ನೇರವು ನೀಡುವ ಸಹಕಾರಿ ಸಾಲಗಳು ಸದಸ್ಯನಉನ್ನತಿಗೆ ಸಹಾಯವಾಗಬೇಕು ಹೊರತು ಹೊರೆಯಾಗಬಾರದೆಂದು ಎಂದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯೂ.ಸಿ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದಒಟ್ಟು 33 ನೌಕರರ ಮಕ್ಕಳಿಗೆ ತಲಾ 3000 ರಂತೆ ಪ್ರೋತ್ಸಾಹಧನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ಅತೀ ಹೆಚ್ಚು ಅಂಕ ಪಡೆದ ಸಿದ್ದಾರ್ಥ ಜಿ. ದಾರವಾಡ ಮತ್ತು ಪೂಜಾಗುಡ್ಡಣ್ಣನವರ ಅವರುಗಳಿಗೆ ದಿವಂಗತ ನಿರ್ಮಲಾ ಹೊಳಲ ಸ್ಮರಣೆಯ ಪುರಸ್ಕಾರವನ್ನು ಹಿರಿಯ ನಿವೃತ್ತ ನೌಕರಬಿ.ವಿ ಹೊಳಲ ಮಾಡಿದರು.
ಇತ್ತಿಚೆಗೆ ನೌಕರ ಸಂಘದ ಸಂಘಟನಾ ಕಾರ್ಯದರ್ಶೀಯಾಗಿ ನಾಮಕರಣಗೊಂಡಎಚ್.ಎಸ್.ಬಸವರಾಜಯ್ಯಕೇಂದ್ರ ಸಮಿತಿ ಸದಸ್ಯರಾದಎ.ಎಚ್.ಸಾಳುಂಕೆ, ಮಾಜಿ ಸಂಘಟನಾ ಕಾರ್ಯದರ್ಶಿ ಸಿ.ಎನ್ ಬಡ್ನಿ ಹಾಗೂ ಅಧೀಕ್ಷಕಇಂಜಿನೀಯರಎಮ್.ಬಿ.ಪಾಟೀಲರನ್ನು ಸಭೆ ಸನ್ಮಾನಿಸಿತು.
ಸಮಾವೇಶವನ್ನು ಉದ್ದೇಶಿಸಿ ಲಿಂಗದಳ್ಳಿ ಸಂಸ್ಥಾನ ಮಠದ ವೀರಭಧ್ರ ಶಿವಾಚಾರ್ಯ ಸ್ವಾಮಿಗಳು,ಮಾಜಿ ಸಂಘಟನಾ ಕಾರ್ಯದರ್ಶಿ ಸಿ.ಎ ಕೂಡಲಮಠ, ಲೆಕ್ಕಾಧಿಕಾರಿಗಳಾಧ ಟಿ.ಕೆಲಮಾಣಿ, ಮಹಮ್ಮದಅಮಾನುಲ್ಲಾ, ಎಮ್.ಎಸ್.ಕೂಮ್ಮೂರ ಮುಂತಾದವರು ಮಾತನಾಡಿದರು.
ಸಹಕಾರಿ ಸಂಘದ ವಿವಿದ ಲೆಕ್ಕ ಪತ್ರಗಳನ್ನು ಗಣೇಶಎಸ್.ಬಿ, ಬಸವರಾಝಕೋಟಿ ಶಿವಪ್ರಕಾಶ ಶೆಟ್ಟರ, ಎಚ್.ಸಿ ಮರಿದ್ಯಾಮಣ್ಣವರ ಮಂಡಿಸಿದರು.ಆರಂಭದಲ್ಲಿ ಸುಮಿತ್ರಾ ಪ್ರಾರ್ಥನೆ ಹಾಡಿದರು. ಬಸವರಾಜಕೋಟಿ ಮತ್ತುಎ.ಕೆಯಮನೂರಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿಎಸ್.ಬಿ ಹೊಳೆಯಣ್ಣನವರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ