ರಸ್ತೆ ತೆರವುಗೊಳಿಸಲು ಬಂದಿದ್ದ ವಾಹನಗಳನ್ನು ತಡೆದು ಪ್ರತಿಭಟನೆ…!!

ಮಧುಗಿರಿ

      ಬೈಪಾಸ್ ರಸ್ತೆಯ ನಷ್ಟ ಪರಿಹಾರ ಹಣ ಬಿಡುಗಡೆ ಮಾಡುವವರೆಗೂ ರಸ್ತೆಯನ್ನು ಸಂಚಾರ ಮುಕ್ತ ಮಾಡಲು ಬಿಡುವುದಿಲ್ಲವೆಂದು ಆಗ್ರಹಿಸಿ ರಸ್ತೆ ತೆರವುಗೊಳಿಸಲು ಬಂದಿದ್ದ ಕೆಶಿಪ್ ವಾಹನಗಳನ್ನು ತಡೆದು ಕೆಲ ಕಾಲ ಪ್ರತಿಭಟಿಸಿದರು.

         ಪಟ್ಟಣದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಬೈಪಾಸ್ ರಸ್ತೆಯನ್ನು ರೈತರು ಸಂಚಾರ ರಹಿತ ಮಾಡಿರುವ ಹಿನ್ನೆಲೆಯಲ್ಲಿ ಗುರುವಾರ ಏಕಾಏಕಿ ಅಧಿಕಾರಿಗಳು ತೆರವುಗೊಳಿಸುವ ಸಂದರ್ಭದಲ್ಲಿ ಪುರಸಭಾ ಸದಸ್ಯ ಲಾಲೇಪೇಟೆ ಮಂಜುನಾಥ ಮಾತನಾಡಿ, ರೈತರಿಗೆ ಸರಿ ಸುಮಾರು 1 ಕೋಟಿಗೆ ಹೆಚ್ಚು ಹಣ ನಷ್ಟ ಪರಿಹಾರದ ರೂಪದಲ್ಲಿ ಬರಬೇಕಿದೆ. ಆದರೆ ಅಧಿಕಾರಿಗಳು ರೈತರು ಖಾಲಿ ಆನ್ ಡಿಮ್ಯಾಂಡ್‍ಗೆ ಸಹಿ ಮಾಡದೆ ಇರುವ ಕಾರಣ ಇಲ್ಲಿವರೆಗೂ ಬಿಡುಗಡೆ ಮಾಡಿಲ್ಲ ಎಂಬ ಸಬೂಬು ಹೇಳುತ್ತಾ ಈಗ ಏಕಾಏಕಿ ಅಧಿಕಾರಿಗಳು ರಸ್ತೆಯನ್ನು ವಾಹನಗಳ ಸಂಚಾರ ಮುಕ್ತ ಮಾಡಲು ಬಂದಿರುವುದು ಖಂಡನೀಯ ಎಂದರು.

       ಪ್ರತಿಭಟನೆಯ ಸಂದರ್ಭದಲ್ಲಿ ಕೆಲಕಾಲ ಆರಕ್ಷಕ ವೃತ್ತ ನಿರೀಕ್ಷಕ ದಯಾನಂದ ಸೇಗುಣಸಿ ಹಾಗೂ ಪ್ರತಿಭಟನೆಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಇದೇ ಸಂದರ್ಭದಲ್ಲಿ ರೈತರಾದ ಬಾಲರಾಜು, ರಮೇಶ್, ಮಂಜುನಾಥ, ನಾಗಭೂಷಣ್ ಹಾಗೂ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link