ಸಾರಿಗೆ ನೌಕರರ ಪ್ರತಿಭಟನೆ : ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹ

ಚಿತ್ರದುರ್ಗ

    ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಇಂದು ಸಾರಿಗೆ ನೌಕರರು ಜಿಲ್ಲಾಧಿಕಾಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಕಾಲ್ನಡಿಗೆ ಜಾಥಾದ ಮೂಲಕ ಸಾಗಿ ಬಂದ ಪ್ರತಿಭಟನಾ ಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಕಳನ್ನು ಕೂಗಿ ನಂತರ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವ ಸಲ್ಲಿಸಿದರು.

    ಸಾರಿಗೆ ನೌಕರರು ಹಗಲು ರಾತ್ರಿ ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ನಮ್ಮನ್ನು ಪರುಗಣಿಸುತ್ತಿಲ್ಲ. ಸರ್ಕಾರ ಸಾರಿಗೆ ಸಂಸ್ಥೆಯ ಎಲ್ಲಾ ವಿಚಾರಗಳಲ್ಲೂ ನೇರವಾಗಿ ವ್ಯವಹಾರ ನಡೆಸುತ್ತಿದ್ದು, ವರ್ಗಾವಣೆ, ಹೊಸ ಬಸ್ಸುಗಳ ಖರೀದಿ, ನೌಕರರ ವೇತನ ಹೆಚ್ಚಳ, ದರ ನಿರ್ವಹಣೆ, ಪ್ರಯಾಣಿಕರ ಪಾಸ್ ನಿರ್ವಹಣೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಸರ್ಕಾರ ಅನುಮತಿ ಪಡೆಯುವ ಆಗೆ ಮಾಡಲಾಗಿದೆ ಆದರೆ ನಮ್ಮ ಮಾತ್ರ ಸರ್ಕಾರಿ ನೌಕರರು ಎಂದು ಪರಿಗಣಿಸದೆ ಇರುವುದು ದುರಂತದ ಸಂಗತಿ ಎಂದು ತಮ್ಮ ಅಳಲು ತೊಡಿಕೊಂಡರು.

     ವೇತನ ಹೆಚ್ಚಳಕ್ಕೆ ಹಲವು ಬಾರೀ ಮನವಿ ಸಲ್ಲಿಸಿದ್ದರು ಸಹ ಕೇವಲ ಶೇಕಡ 5,10, ಹಾಗೂ 12.5% ರಷ್ಟು ಮಾತ್ರ ಹೆಚ್ಚಳ ಮಾಡಿದ್ದು, ಇದು ಸರ್ಕಾರಿ ನೌಕರರ ವೇತನಕ್ಕಿಂತ ಶೇಕಡ 50% ರಷ್ಟು ಕಡಿಮೆ ವೇತನ ಆಗಿದೆ ಇದರಿಂದ ನಮ್ಮಗಳ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ ಆದ್ದರಿಂದ ಸರ್ಕಾರ ಕೂಡಲೇ ಸಾರಿಗೆ ನಿಗಮದಲ್ಲಿ ಕಾರ್ಯ ನಿರ್ವಹಸುತ್ತಿರುವ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ ವೇತನ ತಾರತಮ್ಯ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿದರು.

 

Recent Articles

spot_img

Related Stories

Share via
Copy link
Powered by Social Snap