ಮಧುಗಿರಿ: ಸಂಚಾರ ಆರಂಭಿಸಿದ KSRTC

ಮಧುಗಿರಿ :

      ಲಾಕ್ ಡೌನ್ ನಿಂದ ಕಳೆದ 55 ದಿವಸಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆಯ ಬಸ್‍ಗಳು ಮಂಗಳವಾರ ಬೆಳಿಗ್ಗೆ 7 ಗಂಟೆಗೆ ವಿವಿಧ ನಗರಗಳಿಗೆ ಸಂಚಾರ ಪ್ರಾರಂಭಿಸಿದವು.

       ಕೆಲ ದಿನಗಳ ಹಿಂದೆ ಬಸ್ ನಿಲ್ದಾಣದಲ್ಲಿ ಸಾರಿಗೆಯ ಸಿಬ್ಬಂದಿವರ್ಗದವರು ಪ್ರಯಾಣಿಕರ ಅನೂಕೂಲಕ್ಕಾಗಿ ಮುಂಜಾಗರೂಕತೆಯ ಕ್ರಮ ಕೈಗೊಂಡಿದ್ದರು. ವಿವಿಧ ಊರುಗಳಿಗೆ ಪ್ರಯಾಣ ಬೆಳೆಸಲು ಪ್ರಯಾಣಿಕರು ಬೆಳಿಗ್ಗೆ 6 ಗಂಟೆಯಿಂದಲೇ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಮಾಸ್ಕ್ ಧರಿಸಿಕೊಂಡು ಕಾಯುತ್ತಿದ್ದರು. ಆದರೆ ಮಧ್ಯಾಹ್ನದ ವೇಳೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ವಾಗಿತ್ತು. ಮೂರು ಸೀಟ್‍ಗಳಲ್ಲಿ ಇಬ್ಬರು , ಎರಡು ಸೀಟ್‍ಗಳಲ್ಲಿ ಒಬ್ಬರಂತೆ 30 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು.

       ಆರೋಗ್ಯ ಇಲಾಖೆ ಹಾಗೂ ಸಾರಿಗೆ ಸಂಸ್ಥೆಯ ಸಿಬ್ಬಂಧಿಗಳು ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಸರತಿ ಸಾಲಿನಲ್ಲಿ ನಿಂತು ಬಸ್ ಹತ್ತಿದರು. ಹಲವು ದಿನಗಳಿಂದ ಕೆಲಸ ವಿಲ್ಲದೆ ಸುಮ್ಮನಿದ್ದ ಸಾರಿಗೆ ಸಿಬ್ಬಂದಿ ವರ್ಗದವರು ಇಂದು ಬಸ್ ನಿಲ್ದಾಣಗಳಲ್ಲಿ ಕೆಲ ಚಾಲಕರು ಕೈಯಲ್ಲಿ ಲಾಠಿ ಹಿಡಿದು ಕೊಂಡು ಹೊರ ದ್ವಾರದಲ್ಲಿ ಕಾರ್ಯ ನಿರ್ವಹಿಸಿದರು ಬಸ್ ನಿಲ್ದಾಣದಲ್ಲಿದ್ದ ಹೋಟೆಲ್ ಹಾಗೂ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದ ದೃಶ್ಯಗಳು ಕಂಡು ಬಂದವು.

      ಮಧುಗಿರಿ ಘಟಕದಿಂದ ಬೆಂಗಳೂರಿಗೆ 5 , ತುಮಕೂರು 5 , ಶಿರಾ ಮತ್ತು ಪಾವಗಡ ತಲಾ ಒಂದರಂತೆ ಸಾರಿಗೆ ಬಸ್‍ಗಳು ಮಧುಗಿರಿ ಬಸ್ ನಿಲ್ದಾಣದಿಂದ ಸಂಚಾರ ನಡೆಸಿದವು. ಈ ಹಿಂದೆಯೇ ನಿಗಧಿಪಡಿಸಿದ್ದ ಪ್ರಯಾಣದ ದರವನ್ನು ಪಾವತಿಸಿದರು. ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳಸಲು ಸಂಜೆ 4.30 ಹಾಗೂ ತುಮಕೂರು ಗೆ ತರೆಳಲು 6 ಗಂಟೆಗೆ ತೆರಳಲು ವೇಳೆಯನ್ನು ನಿಗಧಿಪಡಿಸಲಾಗಿತ್ತು. ಸಂಜೆಯ ಸಮಯದಲ್ಲಿ ತಹಶೀಲ್ದಾರ್ ಡಾ.ಜಿ.ವಿಶ್ವನಾಥ್, ಪಿಎಸ್‍ಐ ಕಾಂತರಾಜು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.ಕೆಎಸ್‍ಆರ್‍ಟಿಸಿ ಡಿಪೋ ವ್ಯವಸ್ಥಾಪಕರು , ಆರೋಗ್ಯ ಇಲಾಖೆಯ ನಿರೀಕ್ಷಕ ಕೇಶವರೆಡ್ಡಿ , ನರ್ಸ್ ಪುಟ್ಟಮ್ಮ ಹಾಗೂ ಸಾರಿಗೆ ಸಿಬ್ಬಂಧಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap