ತುಮಕೂರು

ತುಮಕೂರು ನಗರದ ಶಿರಾಗೇಟ್ ಹೊರವಲಯ ಪಿ.ಎನ್.ಆರ್. ಪಾಳ್ಯದಲ್ಲಿರುವ ತುಮಕೂರು ಮಹಾನಗರ ಪಾಲಿಕೆಗೆ ಸೇರಿದ “ಹೇಮಾವತಿ ನೀರಿನ ಶುದ್ಧೀಕರಣ ಘಟಕ”ದಲ್ಲಿ ಶುಕ್ರವಾರ ರಾತ್ರಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಒಂದು ಮೋಟಾರ್ ಸುಟ್ಟಿರುವ ಘಟನೆ ಜರುಗಿದೆ.
ಶುಕ್ರವಾಗ ರಾತ್ರಿ ಸುಮಾರು 11-30 ರಲ್ಲಿ ಈ ಘಟನೆ ನಡೆದಿದೆ. ದಿಢೀರ್ ಬೆಂಕಿಯ ಪರಿಣಾಮ ಒಂದು ಮೋಟಾರ್ ಸುಟ್ಟುಹೋಗಿದೆ. ಇನ್ನೊಂದು ಮೋಟಾರ್‍ನ ಪ್ಯಾನಲ್ ಬೋರ್ಡ್‍ಗೆ ಹಾನಿ ಉಂಟಾಗಿದೆ. ಪಾಲಿಕೆಯ ನೀರು ಪೂರೈಕೆ ವಿ`Áಗದ ಅಧಿಕಾರಿಗಳು ಶನಿವಾರ ಬೆಳಗ್ಗೆ ಸದರಿ ಸುಟ್ಟು ಹೋಗಿರುವ ಮೋಟಾರ್ ಅನ್ನು ದುರಸ್ತಿಗೆ ಕಳಿಸಿದ್ದು, ಅದು ಮಂಗಳವಾರ ಲಭಿಸಲಿದೆ. ಹಾನಿಗೊಳಗಾಗಿದ್ದ ಪ್ಯಾನಲ್ ಬೋರ್ಡ್ ಅನ್ನು ಸರಿಪಡಿಸಿದ್ದಾರೆ.
ಪರ್ಯಾಯವಾಗಿರುವ ಒಂದು ಮೋಟಾರ್ ಅನ್ನು ಉಪಯೋಗಿಸಲಾಗಿದೆ. ಹೀಗಾಗಿ ಈಗ ನೀರು ಸರಬರಾಜಿಗೆ ಯಾವುದೇ ಸಮಸ್ಯೆ ಆಗಿಲ್ಲ. ಎಂದಿನಂತೆ ನೀರು ಸರಬರಾಜು ಆಗುತ್ತಿದೆ ಎಂದು ಮೂಲಗಳು ಹೇಳಿವೆ.ಈ “ನೀರು ಶುದ್ಧೀಕರಣ ಘಟಕ”ದಲ್ಲಿ 335 ಹೆಚ್.ಪಿ. ಸಾಮರ್ಥ್ಯದ ಒಟ್ಟು ಮೂರು ಮೋಟಾರ್‍ಗಳಿವೆ. ಇವುಗಳಲ್ಲಿ ಎರಡು ಮೋಟಾರ್‍ಗಳು ಸದಾ ಕಾಲ ಚಾಲನೆಯಲ್ಲಿರುತ್ತವೆ. ಇನ್ನೊಂದು ಮೋಟಾರ್ ಅನ್ನು ತುರ್ತು ಸಂದರ್ಭಕ್ಕೆಂದು ಕಾಯ್ದಿರಿಸಲಾಗಿರುತ್ತದೆ.
ಪ್ರತಿ ಮೋಟಾರ್ ಒಂದು ಗಂಟೆಗೆ ಸರಿಸುಮಾರು 1 ಎಂ.ಎಲ್.ಡಿ.ಯಷ್ಟು ನೀರನ್ನು ಪಂಪ್ ಮಾಡಬಲ್ಲದು. 24 ಗಂಟೆಗಳ ಕಾಲವೂ ಚಾಲನೆಯಲ್ಲಿದ್ದರೆ ಒಂದು ಮೋಟಾರ್‍ನಿಂದ ಸುಮಾರು 24 ಎಂ.ಎಲ್.ಡಿ.ಯಷ್ಟು ನೀರು ನಗರಕ್ಕೆ ಪಂಪ್ ಆಗುತ್ತದೆ.
ಎರಡು ಮೋಟಾರ್‍ಗಳು ಚಾಲನೆಯಲ್ಲಿದ್ದರೆ, ಒಂದು ಮೋಟಾರ್ ಅನ್ನು ಮೀಸಲಾಗಿಟ್ಟಿರುತ್ತದೆ. ಯಾವುದೇ ಒಂದು ಮೋಟಾರ್ ಕೆಟ್ಟುಹೋದರೆ, ಮೀಸಲಾಗಿಟ್ಟಿರುವ ಬದಲಿ ಮೋಟಾರ್ ಅನ್ನು ಬಳಸಿಕೊಳ್ಳಲಾಗುವುದು. ಆ ಮೂಲಕ ಒಟ್ಟಾರೆ ಎರಡು ಮೋಟಾರ್‍ಗಳು ಸದಾ ಚಾಲನೆಯಲ್ಲಿರುವಂತೆ ನೋಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
.








