ಹಾನಗಲ್ಲ :
ಪಟ್ಟಣದ ಚಪ್ಪರ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಕಾಶ ದೇಸಾಯಿ ಬಂಧುಗಳು ಹಾಗೂ ಮಹಿಳಾ ದಿವ್ಯ ಜೀವನ ಸಂಘದ ಸಹಯೋಗದಲ್ಲಿ ವಿಜಯದಶಮಿ ಅಂಗವಾಗಿ ನವದುರ್ಗೆಯರ (ಕುಮಾರಿಕಾ) ಪೂಜೆಯನ್ನು ಸಡಗರ ಸಂಭ್ರಮದಿಂದ ನೆರವೇರಿಸಿದರು. ಕುಮಾರಿಯರಾದ ಅನುಷಾ ದೇಶಪಾಂಡೆ, ಸೌಜನ್ಯ ಕುಲಕರ್ಣಿ, ಸಾಕ್ಷಿ ಚಿನ್ನಮುಳಗುಂದ, ಶ್ರಾವಣಿ ಪರಾಂಡೆ, ಭಾವನಾ ರಾಜಪುರೋಹಿತ, ಸ್ಮತಿ ಕುಂದಾಪೂರ, ಅದಿತಿ ಪೂಜಾರ, ಸಿರಿ ದೇಶಪಾಂಡೆ, ತೇಜಸ್ವಿನಿ ಪೂಜಾರ, ಜಯಲಕ್ಷ್ಮೀ ಜೋಶಿ ಅವರು, ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಟಾ, ಕುಶ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಗಾತ್ರಿಯರ ವೇಷದಲ್ಲಿ ಭಕ್ತರ ಮನ ತಣಿಸಿದರು.
ಮಹಿಳಾ ದಿವ್ಯ ಜೀವನ ಸಂಘದ ಅಧ್ಯಕ್ಷೆ ಬನು ಚಿನ್ನಮುಳಗುಂದ ಅವರ ನೇತೃತ್ವದಲ್ಲಿ ಉಪಾಧ್ಯಕ್ಷೆ ಪಾರ್ವತಿಬಾಯಿ ಕಾಶೀಕರ, ಛಾಯಾ ದೇಶಪಾಂಡೆ, ವಿದ್ಯಾ ದೇಸಾಯಿ, ಇಂಧುಮತಿ ಜೋಶಿ, ಲಲಿತಾ ದೇಸಾಯಿ, ದಮಯಂತಿ ದೇಶಪಾಂಡೆ, ಲಲಿತಾ ಪರಾಂಡೆ, ಪ್ರೇಮಾ ಬಂಕನಾಳ, ಪದ್ಮಾವತಿ ಚಿನ್ನಮುಳಗುಂದ, ಲೀಲಾ ಗುಡಿ, ಲತಾ ಬಂಕನಾಳ ಮೊದಲಾದವರು ಕುಮಾರಿಯರಿಗೆ ಪೂಜೆ ಸಲ್ಲಿಸಿ ಉಡಿ ತುಂಬಿದರು. ಪೂಜಾ ಕಾರ್ಯವನ್ನು ಹಮ್ಮಣ್ಣ ಕುಲಕರ್ಣಿ ಹಾಗೂ ಗುರುರಾಜ ದೇಸಾಯಿ ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ