ಕುಂದಾಪುರ:
ನಗರdಲ್ಲಿ ಬುಧವಾರ ಸುರಿದ ಭಾರಿ ಮಳೆಗೆ ಹೆದ್ದಾರಿ ಮತ್ತು ಇತರೆ ರಸ್ತೆಗಳಲ್ಲಿ ಉಂಟಾದ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು, ವಾಹನ ಚಾಲಕರು, ಮತ್ತು ಸಾರ್ವಜನಿಕರು ಕಂಗಾಲಾದರು.
ಮಳೆಯಿಂದಾಗಿ ಚರಂಡಿಗೆ ಸಂಪರ್ಕ ಇಲ್ಲದ ಕಾರಣ ರಸ್ತೆಯಲ್ಲೇ ನೀರು ಹರಿದು ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು. ನೆಹರೂ ಮೈದಾನದಲ್ಲಿ ಮೂರು ದಿನದ ಹಿಂದೆ ಬಿದ್ದ ಮರವನ್ನು ಇನ್ನೂ ತೆರವು ಮಾಡಿಲ್ಲ. ನೆಹರೂ ಮೈದಾನದಲ್ಲಿ ನೀರು ನಿಂತು ಕೆರೆಯಂತಾಗಿದೆ ಅಲ್ಲೇ ಪಕ್ಕದ ಹಾಸ್ಟೆಲ್ ಎದುರು ಕೂಡಾ ಮೈದಾನದಲ್ಲಿ ನೀರು ಸಂಗ್ರಹವಾಗಿತ್ತು.
ನೆಹರೂ ಮೈದಾನದ ಪಕ್ಕದಲ್ಲೇ ಇರುವ ಸರ್ವಿಸ್ ರಸ್ತೆಯಲ್ಲೂ ನೀರು ಸಂಗ್ರಹವಾಗಿ ಸಾರ್ವಜನಿಕರಿಗ ತುಂಬಾ ತೊಂದರೆಯಾಗಿತ್ತು. ಶಾಸ್ತ್ರಿ ಸರ್ಕಲ್ , ಫ್ಲೈಓವರ್ , ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ನೀರು ನಿಂತಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆಯಂತೂ ಇದಕ್ಕೂ ತನಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
