ದಾವಣಗೆರೆ :
ನಾಡ ಹಬ್ಬ ವಿಜಯ ದಶಮಿಯ ಪ್ರಯುಕ್ತ ವಿಶ್ವ ಹಿಂದು ಪರಿಷತ್, ಭಜರಂಗದಳ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದಲ್ಲಿ ಮಹಿಳೆಯರಿಂದ ಬೃಹತ್ ಬೈಕ್ ರ್ಯಾಲಿ ನಡೆಯಿತು.
ನಗರದ ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಹಾಗೂ ವೃತ್ತ ನಿರೀಕ್ಷಕಿ ಕೆ.ನಾಗಮ್ಮ ಅವರಿಂದ ಚಾಲನೆ ಪಡೆದ ಬೈಕ್ ರ್ಯಾಲಿಯು ಎಂಸಿಸಿ ಎ ಬ್ಲಾಕ್, ವಿನೋಬ ನಗರ, ಗುಂಡಿವೃತ್ತ, ವಿದ್ಯಾನಗರ ವೃತ್ತ, ರಿಂಗ್ ರಸ್ತೆಯ ಮುಖಾಂತರ ನಿಟುವಳ್ಳಿಯ ದುರ್ಗಾಂಬಿಕ ದೇವಸ್ಥಾನ, ಇಎಸ್ಐ ಆಸ್ಪತ್ರೆ ರಸ್ತೆ, ಕೆಟಿಜೆ ನಗರ ವೃತ್ತ, ಜಯದೇವ ವೃತ್ತ ಸೇರಿದಂತೆ ಹಲವೆಡೆ ಸಂಚರಿಸಿ ಕೊನೆಗೆ ಪಿಬಿ ರಸ್ತೆಯಲ್ಲಿರುವ ಶ್ರೀಬೀರಲಿಂಗೇಶ್ವರ ದೇವಸ್ಥಾನ ತಲುಪಿ ಮುಕ್ತಾಯವಾಯಿತು.
ಬಿಳಿ ಸಮವಸ್ತ್ರ ಧರಿಸಿ, ತಲೆಗೆ ಕೇಸರಿ ಪೇಟಾ ಸುತ್ತಿದ್ದ ನಾರಿಯರು ಬೈಕ್ ರ್ಯಾಲಿಯ ವಿಶೇಷ ಆಕರ್ಷಣೆಯಾಗಿತ್ತು. ರ್ಯಾಲಿಯಲ್ಲಿ ಭಾಗವಹಿಸಿದ್ದ ಮಹಿಳೆಯರು ಭಾರತ ಮಾತಾಕೀ ಜೈ, ಜೈಶ್ರೀರಾಮ್, ದುರ್ಗಾಮಾತಾಕೀ ಜೈ ಎಂಬ ಘೋಷಣೆಗಳನ್ನು ಕೂಗುವ ಮೂಲಕ ತಮ್ಮಲ್ಲಿರುವ ದೇಶಾಭಿಮಾನವನ್ನು ಅನಾವರಣ ಗೊಳಿಸಿದರು
ಬೈಕ್ ರ್ಯಾಲಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ, ಸವಿತಾ ರವಿಕುಮಾರ್, ಸಹನಾ ಮಂಜುನಾಥ್, ಚೇತನಾ ಕುಮಾರ್, ಶಿಲ್ಪ, ಸರೋಜಾ ದೀಕ್ಷಿತ್, ಪ್ರಮೀಳಾ ಬಣಕಾರ್, ಶಾಂತದೊರೈ, ಮಾಲಾ, ಕೆ.ಬಿ.ಶಂಕರನಾರಾಯಣ, ಎನ್.ರಾಜಶೇಖರ್, ರವೀಂದ್ರ, ಸತೀಶ್ ಪೂಜಾರಿ, ಬಸವರಾಜ್ ಗುಬ್ಬಿ, ಅರುಣ್ ಉಗ್ಗೇಹಳ್ಳಿ, ಮಲ್ಲೇಶ್, ಹರೀಶ್ ಪವಾರ್, ರಾಜೇಶ್ ಆಚಾರ್, ಪ್ರಹ್ಲಾದ್ ತೇಲ್ಕರ್, ಮಲ್ಲಿಕಾರ್ಜುನ್, ಚೇತನ್, ಎಂ.ಮನು ಸೇರಿದಂತೆ ಹಲವರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ