ಲೆಕ್ಕಮ್ಮ ಜಾತ್ರೆ

ಹರಪನಹಳ್ಳಿ

         ತಾಲೂಕಿನ ಸುಪ್ರಸಿದ್ದ ಹುಲಿಕಟ್ಟಿ ಗುಳೇದ ಲೆಕ್ಕಮ್ಮ ಜಾತ್ರೆ ಪ್ರತಿ ಎರಡು ವರ್ಷಕ್ಕೊಮ್ಮೆ ಅರಣ್ಯ ಪ್ರದೇಶದಲ್ಲಿ ಜ.15 ರಿಂದ 17 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

        ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಕಳೆದ ಒಂದು ವಾರದಿಂದ ಸಜ್ಜುಗೊಳ್ಳುತ್ತಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾನುವಾರವು ಭರದ ಸಿದ್ದತೆ ಹಾಗೂ ಸ್ವಚ್ಚತೆ ನಡೆಸಿದರು.

          ಜ.15ರಂದು ಹುಲಿಕಟ್ಟಿ ಗ್ರಾಮದ ದೇವಸ್ಥಾನದಲ್ಲಿ ನೆಲಸಿರುವ ಗುಳೇದಲಕ್ಕಮ್ಮ ದೇವಿಯು ಹೋಳೆಗೆ ತೆರಳಿ ಗಂಗಾ ಪೂಜೆಯಿಂದ ಜಾತ್ರೆಯ ವಿಧಿವಿಧಾನಗಳು ಪ್ರಾರಂಭಿಸಲಾಗುತ್ತದೆ. ನಂತರ ರಾತ್ರಿ 12ಕ್ಕೆ ಸಕಲ ವಾದ್ಯಗಳೊಂದಿಗೆ ಮೆರವಣಿಗೆ, ಆಕರ್ಷಕ ಸಿಡಿಮದ್ದುಗಳು ಸ್ವಾಗತದೊಂದಿಗೆ ಬೆಳಗಿನಜಾವ 4ಗಂಟೆಗೆ ಅರಣ್ಯ ಪ್ರದೇಶದಲ್ಲಿನ ದೇವಸ್ಥಾನದಲ್ಲಿ ಪ್ರತಿಸ್ಥಾಪನೆ ಮಾಡಲಾಗುತ್ತದೆ.

         ಜ.16ರಂದು ದೇವಿಗೆ ಭಕ್ತರು ಹರಕೆಯ ಗೋದಿ ಸಸಿಯನ್ನು ಹಾಗೂ ನೈವೆದ್ಯವನ್ನು ಅರ್ಪಿಸಲಿದ್ದಾರೆ. ಕುರಿ ಕೋಳಿಗಳ ಹರಕೆಯನ್ನು ನೀಡುತ್ತಾರೆ. ಜ.17ರಂದು ಪುನಃ ಹುಲಿಕಟ್ಟಿ ಗ್ರಾಮದ ಮೂಲ ದೇವಸ್ಥಾನದ ಸ್ಥಳಕ್ಕೆ ದೇವಿಯು ತೆರಳುವುದರೊಂದಿಗೆ ಜಾತ್ರೆಗೆ ತೆರೆ ಬಿಳಲಿದೆ.

        ಭಾನುವಾರ ಜಾತ್ರಾ ಸ್ಥಳದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸ್ವಂಯ ಸೇವಕರು ಅರಣ್ಯ ಪ್ರದೇಶದಲ್ಲಿರುವ ಗುಳೇದ ಲಕ್ಕಮ್ಮ ದೇವಸ್ಥಾನದ ಸುತ್ತಲು ಸ್ವಚ್ಚತಾ ಕಾರ್ಯ ಕೈಗೊಂಡಿದ್ದರು. ಜಾತ್ರೆಯ ಆಕರ್ಷಣೆಗೆ ಅಂಗಡಿ ಮುಗ್ಗಂಟ್ಟುಗಳು, ಉಯ್ಯಾಲೆ, ತೂಗಮಂಚ, ಜಾಂಯಿಂಟ್ ಮೀಲ್, ಭಕ್ತರ ಟೆಂಟ್‍ಗಳಿಗೆ ನಿವೇಶನ ಸ್ವಚ್ಚಗೊಳಿಸುವ ಕಾರ್ಯ ಸಾಗಿತ್ತು.

        ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಬಿ. ಪರಸುರಾಮಪ್ಪ ಮಾತನಾಡಿ ಸರ್ವ ಜಾತಿ ಜನಾಂಗದವರೂ ಪೂಜಿಸುವ ಗುಳೇದ ಲೆಕ್ಕಮ್ಮ ದೇವಿ ಜಾತ್ರೆ ಈ ಭಾಗದ ಅತ್ಯಂತ ಮಹತ್ವ ಪಡೆದಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು ಜಾತ್ರೆಯ ಪ್ರಯುಕ್ತ ತಾತ್ಕಾಲಿಕವಾಗಿ ಪೆÇೀಲೀಸ್ ಉಪ ಠಾಣೆ, ಉಪ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ವಿದ್ಯುತ್ ಸೌಕರ್ಯ, ನೀರಿನ ವ್ಯವಸ್ಥೆ, ಉತ್ತಮ ರಸ್ತೆ, ತಾತ್ಕಾಲಿಕವಾಗಿ ಬಸ್ ತಂಗುದಾಣ ಸೇರಿದಂತೆ ಮೂಲ ಭೂತ ಸೌಕರ್ಯ ಗಳನ್ನು ಕಲ್ಪಿಸಲಾಗುತ್ತಿದೆ. ಆಗಮಿಸುವ ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತಿದ್ದು. ಭಕ್ತರು ಸ್ವಚ್ಚತೆ ಕಾಪಾಡಬೇಕು, ಎಲ್ಲೆಂದರಲ್ಲಿ ಗಲೀಜು ಮಾಡಬಾರದು, ನೀರನ್ನು ಮೀತವಾಗಿ ಬಳಸಬೇಕು ಎಂದು ಹೇಳಿದರು.

          ಹುಲಿಕಟ್ಟಿ ಗ್ರಾಮದಲ್ಲಿ ದೇವಿಗೆ ಒಂದು ಕೋಟಿ ರೂ.ದಲ್ಲಿ ದೇವಸ್ಥಾನವನ್ನು ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ 40ಲಕ್ಷದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ದೇವಸ್ಥಾನದ ಅಭಿವೃದ್ಧಿಗೆ ತವರು ತಾಲ್ಲೂಕಿನ ಮುಜರಾಯಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರವರು ಸಹ ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ದೇವಸ್ಥಾನದ ಕಟ್ಟಡಕ್ಕೆ ಭಕ್ತರು ಧನ ಸಹಾಯ ನೀಡಿದರೆ 25 ಸಾವಿರಕ್ಕೂ ಹೆಚ್ಚು ಹಣ ನೀಡಿದ ದಾನಿಗಳ ಹೆಸರನ್ನು ನಾಮಫಲಕದಲ್ಲಿ ಕೆತ್ತಿಸಿ ಜಾತ್ರೆಯ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

           ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ ಭಕ್ತರ ಅನುಕೂಲಕ್ಕೆ ದೇವಿಯ ಸುಗಮ ದರ್ಶನಕ್ಕಾಗಿ ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರ ಅನುದಾನದಲ್ಲಿ ದೇವಸ್ಥಾನದ ಸುತ್ತಲೂ ಕಬ್ಬಿಣದ ಗ್ರೀಲ್‍ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಮುಂಜಾಗೃತಗಾಗಿ ಯಾವುದೇ ರೀತಿ ತೊಂದರೆಗಳು ಪತ್ತೆ ಹಚ್ಚಲು ಹಾಗೂ ಸುರಕ್ಷತೆಗಾಗಿ ಮೂರು ಕಡೆಗಳಲ್ಲಿ ಸಿ.ಸಿ.ಕ್ಯಾಮರ್ ಅಳವಡಿಸಲಾಗುತ್ತಿದೆ. 3 ದ್ರೋಣ್ ಕ್ಯಾಮೇರ್ ಕಣ್ಣಗಾವಲು ಇರಲಿದೆ. ಜತೆಯಲ್ಲಿ ಪೋಲಿಸ್ ಹಾಗೂ ಧರ್ಮಸ್ಥಳ ಸಂಘದ ಸ್ವಯಂ ಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಒಂದು ವಾರದಿಂದ ಎಲ್ಲಾ ರೀತಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತಿದ್ದಾರೆ ಆದರೆ ಹಾರಕನಾಳು ಗ್ರಾಪಂನ ಪಿಡಿಓ ಚಂದ್ರನಾಯ್ಕ ಇತ್ತ ಕಡೆ ಗಮನ ಹರಿಸುತ್ತಿಲ್ಲ ಸಂಬಂಧಿಸಿದವರಿಗೆ ಈ ಬಗ್ಗೆ ದೂರು ನೀಡುವುದಾಗಿ ಹೇಳಿದರು.

           ಈ ಜಾತ್ರೆಗೆ ಗಣ್ಯಮಾನ್ಯರಾದ ಮುಜರಾಯಿ ಸಚಿವ ಪಿ.ಟಿ.ಪರಮೆಶ್ವರನಾಯ್ಕ, ಶಾಸಕ ಜಿ.ಕರುಣಾಕರರೆಡ್ಡಿ, ಕಾಂಗ್ರೆಸ್ ಮುಖಂಡರಾದ ಎಂ.ಪಿ.ಲತಾ ಮಲ್ಲಿಕಾರ್ಜುನ, ಜೆಡಿಎಸ್ ಮುಖಂಡ ಎನ್.ಕೊಟ್ರೇಶ್, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಜಿಪಂ, ತಾಪಂ, ಗ್ರಾಪಂನ ಜನಪ್ರತಿನಿಧಿಗಳು ದೇವಿಯ ದರ್ಶನ ಪಡೆಯಲಿದ್ದಾರೆ.ಕುಡಿಯುವ ನೀರಿನ ಎಇಇ ಜಯ್ಯಪ್ಪ, ಜಿಪಂ ಇಂಜಿನಿಯರ್ ಜೆ.ರಮೇಶ್‍ನಾಯ್ಕ, ಪಿ.ಹಾಲೇಶಪ್ಪ, ಬಣಕಾರ ಹೊಳೆಯಪ್ಪ, ಹೋಮೆಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link