ಮೈಸೂರು:
ಅವರೊಬ್ಬ ಸಂಸದರಾಗುವುದಕ್ಕಿಂತ ಬ್ಲೂ ಫಿಲ್ಮ್ ನಾಯಕನಾಗಿದ್ದರೆ ಚೆನ್ನಾಗಿತ್ತು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುರಿತು ಈ ಮೇಲಿನ ಮಾತುಗಳಿಂದ ತಿವಿದಿದ್ದಾರೆ.ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದ ಲಕ್ಷ್ಮಣ್ “ಪ್ರತಾಪ್ ಸಿಂಹ ತಮ್ಮದೇ ರೋಲ್ ಕಾಲ್ ಗ್ಯಾಂಗ್ ಮಾಡಿಕೊಂಡಿದ್ದಾರೆ. ಸಂಸದರ ನಿಧಿಯ ಶೇ. 10ರಷ್ಟನ್ನು ಲೂಟಿ ಮಾಡುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ “ವರ್ಗಾವಣೆ ದಂಧೆಯನ್ನೂ ನಡೆಸುತ್ತಿರುವ ಸಂಸದ ಸಿಂಹ ಒಬ್ಬ ಸಂಸದನಾಗುವುದಕ್ಕೆ ಅನ್ ಫಿಟ್, ಬದಲಿಗೆ ಬ್ಲೂ ಫಿಲ್ಮ್ ನಾಯಕನಾಗಲು ಲಾಯಕ್ ಇದ್ದಾರೆ. ಅವರ ಹಗರಣಗಳನ್ನು ನಾನು ದಾಖಲೆ ಸಮೇತ ಸಾಭೀತುಪಡಿಸುತ್ತೇನೆ. ನನ್ನ ಮೇಲಿನ ಆರೋಪವನ್ನ ಪ್ರತಾಪ್ ಸಿಂಹ ಸಾಬೀತುಪಡಿಸಲಿ” ಎಂದರು.
“ಚುನಾವಣೆ ಸಮಯದಲ್ಲಿ ಸಂಸದರ ವಿರುದ್ಧ ದೂರು ನೀಡಿದ್ದ ಯುವತಿ ಎಲ್ಲಿ? ಆಕೆಯನ್ನು ಕೊಲೆ ಮಾಡಿಸಿದ್ರಾ? ನನ್ನ ಬಳಿ ಪ್ರತಾಪ್ ಸಿಂಹಗೆ ಸಂಬಂಧ ಪಟ್ಟ ನಾಲ್ಕು ವಿಡಿಯೋ ಇದೆ.. ನನ್ನ ಬಳಿ ಎಲ್ಲಾ ಸಾಕ್ಷಿ ಇದೆ. ಕೋರ್ಟ್ ಅನುಮತಿ ಪಡೆದು ಪ್ರೊಜಕ್ಟರ್ ಅಲ್ಲೆ ಬಿಡುಗಡೆ ಮಾಡುತ್ತೇನೆ” ಎಂದು ಸವಾಲೆಸೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
