ಬೆಂಗಳೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ದೀಪಗಳ ಉದ್ಯಾನವನವನ್ನು ಸ್ಥಾಪನೆ ಮಾಡಲಾಗಿದೆ. ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಪ್ರವಾಸೋದ್ಯಮ ಇಲಾಖೆ ಒಂದು ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಿಸಿದೆ.
ಇದರಿಂದಾಗಿ ಮೈಸೂರಿನ ರಾತ್ರಿ ಸೌಂದರ್ಯ ಮತ್ತಷ್ಟು ಇಮ್ಮಡಿಗೊಂಡಿದೆ. ಚೀನಾ ಪರಿಣಿತರ ಸಹಕಾರದಿಂದ ಇದೇ ಮೊದಲ ಬಾರಿಗೆ ಇಂಗ್ಲೆಂಡ್ – ನೆರ್ದಲ್ಯಾಂಡ್‍ನಲ್ಲಿರುವ ದೀಪಗಳ ಉದ್ಯಾನವನದ ಮಾದರಿಯಂತೆ ಮೈಸೂರಿನಲ್ಲೂ ಉದ್ಯಾನವನವನ್ನು ಪ್ರಾರಂಭಿಸಲಾಗಿದ್ದು , ಇದಕ್ಕೆ 5 ಸಾವಿರ ಎಲ್‍ಇಡಿ ಬಲ್ಪ್‍ಗಳನ್ನು ಬಳಕೆ ಮಾಡಲಾಗಿದೆ. ಜಂಬೂಸವಾರಿ, ಮಹಿಷಾಸುರ ಮರ್ದಿನಿ, ಡೊಳ್ಳುಕುಣಿತ, ಪೂಜಾ ಕುಣಿತ ಮಾದರಿಗಳು ಸ್ಥಳೀಯ ಮತ್ತು ದೇಶಿಯ ಪ್ರವಾಸಿಗರನ್ನು ಸೆಳೆಯುತ್ತಿವೆ.