ಬೆಂಗಳೂರು
ಭೂ ಕಂದಾಯ ಸುಧಾರಣಾ ತಿದ್ದುಪಡಿ ಎರಡನೆ ವಿದೇಯಕ ರೈತರ ಪಾಲಿಗೆ ಮರಣ ಶಾಸನ ಎಂದು ವಿಧಾನನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತ ಚರ್ಚೆಯ ಮೇಲೆ ಮಾತನಾಡಿದ ಅವರು, ಹಳ್ಳಿಗಾಡಿನ ಆರ್ಥಿಕತೆ ಹಾಳಾಗಲಿದೆ. ರೈತರನ್ನು ದಿವಾಳಿ ಅಂಚಿಗೆ ನೂಕಲಿದೆ. ದೇವರಾಜ ಅರಸರ ಕಾಲದ ಕಾಯಿದೆಯ ಆತ್ಮವನ್ನೆ ಕೊಲ್ಲಲಿದೆ. ಕಾಯಿದೆ ವಿರುದ್ಧ ರೈತರು ಮತ್ತು ಕಾರ್ಮಿರಕರು ಸಿಡಿದೆದ್ದಾರೆ. ಇದಕ್ಕಾಗಿ ಇದೇ 28 ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ. ಇದು ನಿಜಕ್ಕೂ ದುರುದ್ಧೇಶದ ತಿದ್ದುಪಡಿ ಮಸೂದೆಯಾಗಿದೆ, ಜನ ವಿರೋಧಿಯಾಗಿದೆ ಎಂದರು.
ಇದಕ್ಕೆ ಮೊದಲು ಕಂದಾಯ ಸಚಿವ ಆರ್. ಆಶೋಕ್ ಮಾತನಾಡಿ, ಸಣ್ಣ ಹಿಡುವಳಿ ರೈತರ ಹಿತ ಕಾಡಾಡುವ ಸದುದ್ದೇಶದಿಂದ ಕಾಯಿದೆ ತರಲಾಗಿದೆ. ಕೃಷಿಯತ್ತ ಒಲವು ಇರುವ ಜನರಿಗೆ ಬಹಳ ಅನುಕೂಲವಾಗಲಿದೆ. ಬೀಳುಬಿಟ್ಟ ಜಮೀನು ಉಪಯೋಗ ಮಾಡಲು ಪ್ರಯೋಜನ ವಾಗಲಿದೆ. ನಾಡಿನ ಸಮಗ್ರ ಅಭಿವೃದ್ದಿಯ ಹಿನ್ನೆಲೆಯಲ್ಲಿ ಕಾಯಿದೆ ತರಲಾಗುತ್ತಿದೆ ಎಂದು ಸರಕಾರದ ಕ್ರಮವನ್ನು ಬಲವಾಗಿ ಸಮರ್ಥನೆ ಮಾಡಿಕೊಂಡರು. ಆಡಳಿತ ಮತ್ತು ವಿರೋಧಿ ಸದಸ್ಯರ ನಡುವೆ ಕೆಲ ಕಾಲ ಮಾತಿಕ ಚಕಮಕಿಯೂ ನಡೆಯಿತು .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ