ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಅಂತ್ಯಗೊಂಡ ವಕೀಲರ ಹೋರಾಟ

ಕುಣಿಗಲ್

   ನ್ಯಾಯಾಲಯದ ಜಾಗವನ್ನ ವ್ಯಾಪಾರಸ್ತರು ಒತ್ತುವರಿ ಮಾಡಿಕೊಂಡಿರುವ ಸ್ಥಳವನ್ನ ತೆರವು ಮಾಡಿಸುವಂತೆ ಒತ್ತಾಯಿಸಿ ವಕೀಲರು ನಡೆಸುತ್ತಿದ್ದ ಹೋರಾಟ ಇಂದು ಸಂಜೆ ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಅಂತ್ಯಗೊಂಡಿದೆ.

  ತಾಲ್ಲೂಕು ವಕೀಲರ ಸಂಘವು ನೆಡೆಸುತ್ತಿರುವ ಹೋರಾಟ ಇನ್ನೂ ಉಪಶಮಗೊಂಡಂತೆ ಕಾಣುತ್ತಿಲ್ಲ ಎಂದು ನಾಗರೀಕರ ವಲಯದಲ್ಲಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಶುಕ್ರವಾರ ಜಿಲ್ಲಾ ನ್ಯಾಯಾಧೀಶರಾದ ರಾಘವೇಂದ್ರ ಬಾದಾಮಿಕರ್ ಅವರು ಆಗಮಿಸಿ ವಾರದಿಂದ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆಗೆ ನಿರತರಾಗಿದ್ದ ವಕೀಲರೊಂದಿಗೆ ಸಂಪೂರ್ಣ ಮಾಹಿತಿಯನ್ನ ಪಡೆದ ನಂತರ ಜಿಲ್ಲಾ ನ್ಯಾಯಾಧೀಶರು ನಾಲ್ಕುವಾರ ಸಮಯವನ್ನು ಕೊಡಿ ಅಷ್ಟು ಅವಧಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

   ನ್ಯಾಯಾಲದ ಆದೇಶಕ್ಕೆ ಸ್ಪಂಧಿಸದ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಮತ್ತು ವಕೀಲರನ್ನ ನಿಂಧಿಸಿ ಅವಮಾನಿಸಿದ ಅಂಗಡಿ ಮಾಲೀಕನ ಮೇಲೆ ಪ್ರಕರಣ ದಾಖಲಿಸುವ ಬಗ್ಗೆಯು ತಿಳಿಸಿದ ಅವರು ವಕೀಲರು ಕಲಾಪಗಳಿಂದ ಹೊರಗುಳಿ ಯುವುದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತದೆ. ನ್ಯಾಯಾಲಯದ ಭೂಮಿ ವೀಚಾರ ನ್ಯಾಯಾಲಕ್ಕೂ ಸಂಬಂಧಿಸಿದ್ದರಿಂದ ಕಾನೂನು ಕ್ರಮವನ್ನ ಶೀಘ್ರವಾಗಿ ಕೈಗೊಳ್ಳುವ ಭರವಸೆಯನ್ನ ನೀಡಿದರು.

    ಈ ಸಂದರ್ಭದಲ್ಲಿ ಕುಣಿಗಲ್ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರುಗಳು ಹಾಗೂ ತಾಲ್ಲೂಕು ದಂಡಾಧಿಕಾರಿ ಪುರಸಭಾ ಸಿ.ಒ. ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಗುರುವಾರ ವಕೀಲರು ನ್ಯಾಯಾಲಯದ ಆವರಣದಲ್ಲಿ ಧರಣಿ ಕುಳಿತಿರುವ ಸ್ಥಳಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಉಪವಿಭಾಗಾಧಿಕಾರಿ ಶಿವಕುಮಾರ್ ಭೇಟಿ ನೀಡಿ ನಡೆಸಿದ ಮಾತು ಕತೆಯು ವಿಫಲಗೊಂಡಿತ್ತು.

      ಸ್ಥಳಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡುತ್ತಾ,ವಕೀಲರು ತಮ್ಮಗಳ ಆಸ್ತಿ,ಜಮೀನಿಗಾಗಿ ಹೋರಾಟ ನಡೆಸುತ್ತಿಲ್ಲ,ಸಾರ್ವಜನಿಕ ಆಸ್ತಿಯನ್ನ ಉಳಿಸಲು ಈ ಹೋರಾಟ ನಡೆಸುತ್ತಿದ್ದು,ಇವರ ಹೋರಾಟಕ್ಕೆ ನಮ್ಮ ಬೆಂಬಲ ಇದ್ದು,ವಿವಾದವನ್ನ ಅಧಿಕಾರಿಗಳು ಬಗೆಹರಿಸಿ ಸರ್ಕಾರಿ ಜಾಗವನ್ನ ಸಾರ್ವಜನಿಕರ ಅನುಕೂಲಕ್ಕಾಗಿ ಉಳಿಸುವಂತಹ ಕೆಲಸವನ್ನ ಮಾಡಬೇಕಾಗಿದೆ ಎಂದರು.

    ಉಪವಿಭಾಗಾಧಿಕಾರಿ ಶಿವಕುಮಾರ್ ಭೇಟಿ ಮಾಡಿ ಧರಣಿ ನಿರತ ವಕೀಲರಿಂದ ಮನವಿ ಸ್ವೀಕರಿಸಿ ಕಾನೂನು ಪ್ರಕಾರ ಒಂದು ತಿಂಗಳು ಕಾಲಾವಕಾಶ ನೀಡಿದರೆ ಸಂಬಂಧ ಪಟ್ಟ ದಾಖಲೆಗಳನ್ನ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು ಇದಕ್ಕೆ ಸೊಪ್ಪಾಕದ ವಕೀಲರು ಪ್ರತಿಭಟನೆಯ ತೀವ್ರತೆಯನ್ನ ಹೆಚ್ಚಿಸಿ ಅಮರಣಾಂತ ಉಪವಾಸ ಕೈಗೊಂಡಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರು ಶುಕ್ರವಾರ ಆಗಮಿಸಿ ಪ್ರತಿಭಟನಾ ನಿರತ ವಕೀಲರನ್ನ ಮನವೊಲಿಸಿದ ನಂತರ ವಕೀಲರು ಪ್ರತಿಭಟನೆಯನ್ನ ಕೈಬಿಟ್ಟಿದ್ದಾರೆ.

     ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಹುಚ್ಚೇಗೌಡ, ವಕೀಲರುಗಳಾದ ಸಿಂಗಯ್ಯ, ಕೆ.ಎಂ. ತಿಮ್ಮಪ್ಪ, ಎ.ಆರ್.ರಂಗಸ್ವಾಮಿ, ಕೆ.ಹೆಚ್.ದಯಾನಂದ್, ಲಕ್ಷ್ಮಣ್, ಕೆ.ಎಸ್. ನಿಸಾರ್‍ಅಹಮದ್, ಚಂದ್ರಶೇಖರ್, ರಾಜೇಶ್, ಪ್ರಕಾಶ್, ರವಿಕುಮಾರ್, ಸಿಂಗ್ರಿಗೌಡ, ಸತೀಶ್, ರಾಮಚಂದ್ರಪ್ರಸಾದ್ ಸತ್ಯನಾರಾಯಣ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap