ಬಳ್ಳಾರಿ
ನಗರದ ಕರುಮಾರೆಮ್ಮ ಗುಡ್ಡದಲ್ಲಿರುವ ಮತ್ತು ಬಳ್ಳಾರಿ ನಗರದ ಸುಮಾರು ಅರ್ಧ ಭಾಗಕ್ಕೆ ಕುಡಿಯುವ ನೀರು ಪೋರೈಸುತ್ತಿರುವ ಮದರ ಟ್ಯಾಂಕನ ನೀರು ಸೋರಿಕೆಯಾಗುತ್ತಿದ್ದು ಪಕ್ಕದ ಕಾಲನಿ ಮತ್ತು ಪಾರ್ಕಗಳಲ್ಲಿ ಹರಿದು ಪೋಲಾಗುತ್ತಿದೆ.ಇದು ಸೊಳ್ಳೆಗಳ ತಾಣ ನಿರ್ಮಾಣವಾಗಲು ಸಹಕಾರಿಯಾಗುತ್ತಿದೆ.
ಕುಡಿಯಲು ನೀರು ಸರಿಯಾಗಿ ಸಿಗದಿದ್ದರೂ ಈ ತರಹ ವ್ಯರ್ಥವಾಗುತ್ತಿರುವದು ಬೇಜಾರಿನ ವಿಷಯ.ಬಳ್ಳಾರಿಯಲ್ಲಿ ಪಾರ್ಕುಗಳು ಸಿಗೋದು ಕಷ್ಟ ಅಂತಾಹುದರಲ್ಲಿ ರಾಘವ ಕಲ್ಯಾಣ ಕಾಲನಿಯಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ಪಾರ್ಕಿನಲ್ಲಿ ಈ ನೀರೆಲ್ಲಾ ಹರಿದು ಪಾರ್ಕಿನ ಅರ್ಧ ಭಾಗ ಹಾಳಾಗಿದ್ದು ವಾಕಿಂಗ್ ಪಾಥ್ , ಬ್ಯಾಡ್ಮಿಂಟನ್ ಕೊರ್ಟ ವಿರೂಪಗೊಂಡಿದ್ದು ಅಲ್ಲಿನ ನಿವಾಸಿಗಳಿಗೆ ಅನಾನುಕೂಲವಾಗಿದೆ .
ಹೊಸದಾಗಿ ಪಾರ್ಕುಗಳು ನಿರ್ಮಾಣವಾಗುವದೆ ಕಷ್ಟ ಅಂತಾದರಲ್ಲಿ ನಿರ್ಮಾಣಗೊಂಡ ಪಾರ್ಕುಗಳು ಹಾಳಾಗುತ್ತಿರುವದು ಎಷ್ಟು ಸರಿ.ಪದೇ ಪದೇ ಈ ರೀತಿಯಾಗಿ ನೀರು ಪೋಲಾಗುತ್ತಿರುವದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದೆ.ಸಂಬಂದ ಪಟ್ಟವರು ಈ ಕಡೆ ಗಮನ ಹರಿಸಲು ಕೋರಿಕೆ.