ಭಾರತ ಬಂದ್! ಎಡ- ಸಂಘಟನೆಗಳ ಶಕ್ತಿ ಪ್ರದರ್ಶನ

ಹಾವೇರಿ:

          ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮಂಗಳವಾರ – ಬುಧವಾರ ಕರೆ ನೀಡಲಾಗಿದ್ದ ಭಾರತ ಬಂದ್‍ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಎಡ ಪಕ್ಷಗಳು ಶಕ್ತಿ ಪ್ರದರ್ಶನ ಮಾಡಿದವು. ಅದರಲ್ಲೂ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ-ಅಕ್ಷರದಾಸೋಹ ಬಿಸಿಯೂಟ ತಯಾರಕರು ಬೀದಿಗಿಳಿದು ಪ್ರತಿಭಟನೆ ಮಾಡಿ, ಬಳಿಕ ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಭಾರತ ಬಂದ್ ಯಶಸ್ವಿಗೋಳಿಸಿದರು.

           ನಗರದ ಕಾಗಿನೆಲ್ಲಿ ರಸ್ತೆಯಲ್ಲಿರುವ ಮುರುಘಾಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಮೆರವಣಿಗೆ ಸಿದ್ದಪ್ಪ ವೃತ್ತದ ಮೂಲಕ ತಾಲೂಕ ಪಂಚಾಯತ ಆವರಣದಲ್ಲಿರುವ ಸಂಸದರ ಕಚೇರಿಗೆ ಆಗಮಿಸಿ, ಸಂಸದರ ಕಚೇರಿಗೆ ಮುತ್ತಿಗೆ ಹಾಕಿದರು.

          ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಮಾತನಾಡಿ, ಕೇಂದ್ರ ಸರಕಾರ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಯುವ ಮೂಲಕ ಕಾರ್ಮಿಕರನ್ನು ಬೀದಿಗೆ ನೂಕುತ್ತಿದೆ. 1991 ರಲ್ಲಿ ಜಾರಿಗೆ ಬಂದಿರುವ ಆರ್ಥಿಕ ನೀತಿಗಳನ್ನು ಬಹಳ ಬೇಗ ಜಾರಿಗೆ ಮುಂದಾಗಿದೆ. ದೇಶಕ್ಕೆ ಅನ್ನ ನೀಡುವ ರೈತರನ್ನು ಕಾರ್ಮಿಕರನ್ನು ಈ ಸರಕಾರ ಕಡೆಗಣಿಸುತ್ತಿದೆ.

            ಆರ್ಥಿಕ ಸೌರ್ವಭೌಮತೆಗೆ ದಕ್ಕೆ ತರುವಂತ ಕೆಲಸವನ್ನು ಈ ಸರಕಾರ ಮಾಡುತ್ತಿದೆ. ಇಂತಹ ಜನವಿರೋಧಿ ಸರಕಾರದ ನೀತಿಯನ್ನು ಖಂಡಿಸಿ, ಇಂದು ಎಐಟಿಯುಸಿ ಸಂಘಟನೆಯ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಭಾರತ ಬಂದ್‍ಗೆ ಬೆಂಬಲ ನೀಡುವ ಮೂಲಕ ಕೇಂದ್ರದ ಧೋರಣೆಗಳನ್ನು ಖಂಡಿಸಲಾಗುತ್ತಿದೆ.

           ಇನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ಬಿಜೆಪಿ ಸರಕಾರ ಬಂಡವಾಳಶಾಹಿ ಕಂಪನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ಸಾರಿಗೆ ರಂಗವನ್ನು ಕಾರ್ಪೋರೇಟ್ ಸಂಸ್ಥೆಗೆ ಪರಭಾರೆ ಮಾಡಲು 2017ರಲ್ಲಿ ಮೋಟರ್ ವಾಹನ ಮಸೂದೆ ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿದರು.

           ಕೇಂದ್ರ ಸರಕಾರ ಕಾರ್ಮಿಕರಿಗೆ ಮಾಸಿಕ 18000 ರೂ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಜೊತೆಗೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿ ಮಾಡಬೇಕು ಎಂದು ಒತ್ತಾಯಿಸಿದರು.

            ಇನ್ನು ಜಿಲ್ಲೆಯ ದಿ. 4-10-2018 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆದ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಜಿ.ಪಂ.ಅಧ್ಯಕ್ಷರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಈಡೇರಿಸಿಲ್ಲ. ತಮ್ಮ ವ್ಯಾಪ್ತಿಯಲ್ಲಿ ಬರುವ ಬೇಡಿಕೆಗಳನ್ನು ಈಡೇರಿಸಬೇಕು. ಹಾಗೂ ತಪ್ಪಿಸ್ಥತ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ದಿ. 1-4-2018 ರಿಂದ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಬಾಡಿಗೆ ಹಣ ನೀಡಿಲ್ಲ.

             ತಕ್ಷಣ ಬಾಡಿಗೆ ಹಣ ಬಿಡುಬೇಕು. ಇನ್ನು ಕೆಲ ಸರಕಾರಿ ಶಾಲೆಗಳಲ್ಲಿ ಎಲ್‍ಕೆಜಿ ಹಾಗೂ ಯುಕೆಜಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತದೆ. ಆದ್ದರಿಂದ ಈ ನಿರ್ಧಾರದಿಂದ ಹಿಂದೆ ಸರಿದು, ಅಂಗನವಾಡಿಗಳನ್ನು ಪುನಚೇತಗೊಳಿಸಲು ಮುಂದಾಗಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಕನಿಷ್ಠ 18000 ರೂ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಣೆ ಮಾಡಲಾಗಿದೆ. ಅವುಗಳನ್ನು ವಾಪಾಸ್ಸು ಪಡೆದು,ಗುಣಮಟ್ಟದ ಬಟ್ಟೆ ವಿತರಣೆ ಮಾಡಬೇಕು. ಜೊತೆಗೆ ಪ್ರತಿ ಅಂಗನವಾಡಿಗೆ ಗ್ಯಾಸ್ ಸಿಲೆಂಡರ್ ಇಲಾಖೆ ಒದಗಿಸಬೇಕು ಎಂದು ಆಗ್ರಹಿಸಿದರು

           ಬಳಿಕ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾಧ್ಯಕ್ಷ ಜಿ.ಡಿ.ಪೂಜಾರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮೀ ಅಧಿಕಾರಕ್ಕೆ ಬಂದರೆ, ಬಿಸಿಯೂಟ ತಯಾರಕರನ್ನು ಖಾಯಂಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಘೋಷಣೆ ಮಾಡಿದಂತೆ ಖಾಯಂಗೊಳಿಸಬೇಕು.

            ಇನ್ನು ಬಿಸಿಯೂಟ ಸಿಬ್ಬಂಧಿಗಳನ್ನು ಸರಕಾರಿ ಶಾಲಾ ಸಿಬ್ಬಂಧಿಗಳೆಂದು ಆದೇಶ ಮಾಡುವ ತನಕ ಮಾಸಿಕ 10500 ರೂ ವೇತನ ಹೆಚ್ಚಳ ಮಾಡಿ, ಆದೇಶ ಮಾಡಬೇಕು. ಮುಖ್ಯಮಂತ್ರಿ ಕುಮಾರಸ್ವಾಮೀಗಳು ದಿ. 3.12.2018 ರಂದು ಭರವಸೆ ನೀಡಿದಂತೆ ಕೂಡಲೇ ರಾಜ್ಯ ಮಟ್ಟದ ಪದಾಧಿಕಾರಿಗಳ ಸಭೆ ನಡೆಸಿ, ವೇತನ ಹೆಚ್ಚಳದ ಬಗ್ಗೆ ತಿರ್ಮಾನಿಸಬೇಕು. ಇದರ ಜೊತೆಗೆ ನಿವೃತ್ತಿಯಾದ ಹಾಗೂ ನಿವೃತ್ತಿಯಾಗುತ್ತಿರುವ ಬಿಸಿಯೂಟ ತಯಾರಕರಿಗೆ ಮಾಸಿಕ 3000 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಸಂಸದರ ಕಚೇರಿಯಲ್ಲಿ ರಾತ್ರಿ ಕಳೆದ ಬಿಸಿಯೂಟ ನೌಕರರು:

           ಭಾರತ ಬಂದ್ ಹಿನ್ನೇಲೆಯಲ್ಲಿ ಮಂಗಳವಾರ ಆಗಮಿಸಬೇಕಾದ ಬಿಸಿಯೂಟ ನೌಕರರು, ಸೋಮವಾರ ಸಂಜೆ ವೇಳೆ ಸಂಸದರ ಕಚೇರಿಯ ಆವರಣಕ್ಕೆ ಬಂದು ಸೇರಿದರು. ಸುಮಾರು 300 ಅಧಿಕ ಮಹಿಳೆಯರು, ರಾತ್ರಿಯಲ್ಲ ತಾ.ಪಂ.ಆವರಣದಲ್ಲಿರುವ ಸಂಸದರ ಕಚೇರಿ ಮುಂದೆ ಕಳೆಯುವ ಮೂಲಕ ಸಂಸದರಿಗೆ ಬಿಸಿ ಮುಟ್ಟಿಸಿದರು.

ಭಾರತ ಬಂದ್ದ್‍ಗೆ ರೈತ ಮಹಿಳಾ ಘಟಕ ಬೆಂಬಲ:

          ಭಾರತ ಬಂದ್ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಹಿಳಾ ಘಟಕ ಬೆಂಬಲ ನೀಡಿದ್ದು, ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಮಂಜುಳಾ ಅಕ್ಕಿ ಮಾತನಾಡಿ, ಕೇಂದ್ರ ಸರಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೆ ತರುವ ಮೂಲಕ ಜನ ಸಾಮಾನ್ಯರಿಗೆ ಬರೆ ಎಳೆಯುವಂತ ಕೆಲಸ ಮಾಡುತ್ತಿದೆ. ಇಂತಹ ಸರಕಾರದ ನಡೆಯನ್ನು ನಾವು ಖಂಡಿಸಬೇಕಾಗುತ್ತದೆ. ಕಾರ್ಮಿಕರು, ರೈತರು ದೇಶದ ಆರ್ಥಿಕತೆಯ ಎರಡು ಕಣ್ಣುಗಳಂತೆ ಎಂದು ತಿಳಿಸಿದರು.

         ಪ್ರತಿಭಟನೆಯಲ್ಲಿ ಸುನಂದಾ ರೇವಣಕರ, ರಾಜೇಶ್ವರಿ ದೊಡ್ಡಮನಿ, ಲಲಿತಾ ನಾಗನಗೌಡ್ರ, ಲಲಿತಾ ಬುಶೇಟ್ಟಿ, ಜಯಮ್ಮ ದೇಸಳ್ಳಿ, ಸರೋಜಮ್ಮ ಹಿರೇಮಠ, ಯಲ್ಲಮ್ಮ ಮರಡೂರ, ಗುರುನಾಥ ಲಕ್ಮಾಪುರ, ಪರಮೇಶ ಜಡತನಿ, ಜಿ.ವಿ.ಮಂಟೂರ, ನಿರ್ಮಲಾ ಬಂಕಾಪುರಮಠ, ಲತಾ ಹಿರೇಮಠ, ರೇಣುಕಾ ಶಿವಾಜಿ, ಫಾತಿಮಾ ಭೋಗಾವಿ, ಶಾರದಮ್ಮಾ ಹಿರೇಮಠ, ನಾಗರತ್ನಾ ಕುಲಕರ್ಣಿ,ಶೈಲೆಜಾ ಹರನಗಿರಿ, ಇಂದಿರಾ ಮಾಗಳದ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ತಯಾರಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link