ಹಾನಗಲ
ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ನಾಲ್ಕು ದಿನಗಳು ನಡೆಯುವ ಕಾನೂನು ಸಾಕ್ಷರತಾ ರಥ ಸಂಚಾರದ ವ್ಯವಸ್ಥೆ ಕುರಿತು ಬುಧವಾರ ವಕೀಲರ ಸಂಘದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಮೇ 13 ರಿಂದ 16 ತನಕ ಒಟ್ಟು 12 ಗ್ರಾಮಗಳಲ್ಲಿ ಕಾನೂನು ಸಾಕ್ಷರತಾ ರಥ ಸಂಚಾರ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜನೆ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಪ್ರತಿ ದಿನ 3 ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸುವ ಕುರಿತು ನಿರ್ಧರಿಸಿದ ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತಂಬರಿ ಮತ್ತು ಕಾರ್ಯದರ್ಶಿ ಆರ್.ಎಸ್.ತಳವಾರ ಅವರು ಗ್ರಾಮಗಳ ಆಯ್ಕೆ ನಡೆಸಿದರು.
ಮೊದಲ ದಿನ ಸೋಮವಾರ ಸಾವಸಗಿ, ಬೆಳಗಾಲಪೇಟೆ, ಮಾಸನಕಟ್ಟಿ, ಮಂಗಳವಾರದಂದು ಹೇರೂರ, ಉಪ್ಪಣಶಿ, ಸೋಮಸಾಗರ, ಬುಧವಾರ ಗೆಜ್ಜಿಹಳ್ಳಿ, ಕಲ್ಲಾಪೂರ, ಅಕ್ಕಿಆಲೂರ ಮತ್ತು ಕೊನೆಯ ದಿನವಾದ ಗುರುವಾರದಂದು ಕೊಪ್ಪರಸಿಕೊಪ್ಪ, ಬೈಚವಳ್ಳಿ ಹಾಗೂ ಹಾನಗಲ್ಲಿನಲ್ಲಿ ಕಾರ್ಯಕ್ರಮ ಆಯೋಜನೆಯ ನಿರ್ಣಯ ಕೈಗೊಳ್ಳಲಾಯಿತು.
ಸಿವಿಲ್ ನ್ಯಾಯಾಧೀಶೆ ಫಕ್ಕೀರವ್ವ ಕೆಳಗೇರಿ, ತಹಶೀಲ್ದಾರ್ ಗಂಗಪ್ಪ.ಎಂ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಆರ್.ಎಂ.ಸಾಬೋಜಿ, ಶಿಕ್ಷಣ ಇಲಾಖೆಯ ಎಸ್.ಎಸ್.ಹಿರೇಮಠ, ಪುರಸಭೆ ಅಧಿಕಾರಿ ಎನ್.ಎಸ್.ನಾಗನೂರ, ಪೊಲೀಸ್ ಇಲಾಖೆಯ ಎನ್.ಬಿ.ಹರ್ಲಾಪೂರ, ಸಹಾಯಕ ಸರಕಾರಿ ಅಭಿಯೋಜಕರಾದ ಸೂರ್ಯನಾರಾಯಣ, ಇಂಧುಮತಿ ಪಾಟೀಲ ಸಭೆಯಲ್ಲಿ ಹಾಜರಿದ್ದರು.
ಪ್ರತಿ ಕಾರ್ಯಕ್ರಮದಲ್ಲಿ ತಜ್ಞ ವಕೀಲರಿಂದ ಕಾನೂನು ವಿಷಯಗಳ ಮೇಲೆ ಉಪನ್ಯಾಸ ನೀಡುವ ಯೋಚನೆ ಹೊಂದಲಾಗಿದ್ದು, ಸಂಬಂಧಿಸಿದ ಗ್ರಾಮ ವ್ಯಾಪ್ತಿಯ ವಕೀಲರನ್ನು ನೇಮಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದವು. ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೊತಂಬರಿ, ಕಾರ್ಯದರ್ಶಿ ಆರ್.ಎಸ್.ತಳವಾರ ವಕೀಲರಾದ ಕೆ.ಬಿ.ದೊಡ್ಡಮನಿ, ಮಂಜುನಾಥ ಹುಲ್ಲೂರ, ಎಂ.ವಿ.ಪಾಟೀಲ ಸಿ.ಪಿ.ಜಾಡರ, ಎಸ್.ಬಿ.ಲಕ್ಮಾಪೂರ, ವಿನಾಯಕ ಕುರುಬರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
