ಭಾರತದಲ್ಲಿ ಮೋದಿ ಸರ್ವಾಧಿಕಾರಕ್ಕೆ ಬ್ರೇಕ್: ಪ್ರಜಾಪ್ರಭುತ್ವ ಸಂವಿಧಾನ ಬಚಾವ್ ಸಂಘಟನೆ ಪಣ

ಬಳ್ಳಾರಿ

         ಕಳೆದ ಉಪ ಲೋಕಸಭಾ ಸಮರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಗ್ರಪ್ಪ ನವರ ಪರವಾಗಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಹುಮತ ಕೊಟ್ಟು ಸಂಸತ್ ಸದಸ್ಯರಾಗಿ ಆಯ್ಕೆ ಮಾಡಿದ್ದಕ್ಕೆ ಶ್ರಮಿಸಿದ ಬಳ್ಳಾರಿಯ ಜನತೆಗೆ ಧನ್ಯವಾದ ಗಳು ತಿಳಿಸಿದರು. ದೇಶದಲ್ಲಿ ಐದು ವರ್ಷಗಳ ಕಾಲಾವಧಿ ಯಲ್ಲಿ ಸರ್ವಾಧಿಕಾರಿ ಧೋರಣೆಯ ಆಡಳಿತ ವ್ಯವಸ್ಥೆ ಇದ್ದು ಇದರಿಂದಾಗಿ ದೇಶದ ಜನತೆಯ ಕಷ್ಟಗಳನ್ನು ತೀರಿಸದೇ ಜನರ ಜೀವನವನ್ನು ದುಷ್ಟರಂತೆ ಸಂಹರಿಸಿ ಬಡತನ ಎಂಬ ಕೂಪಕ್ಕೆ ತಳ್ಳಿಹಾಕಿದ್ದಾರೆ ಎಂದು ಪ್ರಜಾಪ್ರಭುತ್ವ ಸಂವಿಧಾನ ಬಚಾವ್ ಮತ್ತು ಅಖಿಲ ಭಾರತ ವಕೀಲರ ಸಂಘ ಹಾಗೂ ಜಂಟಿ ಸುದ್ದಿಗೋಷ್ಟಿ ಯಲ್ಲಿ ಸಿ ಕೆ ಜಗದೀಶ್ ಆರೋಪಿಸಿದರು.

         ಮಯೂರ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಯವರು ದೇಶದ 543
ಕ್ಷೇತ್ರದಲ್ಲಿ ಮೋದಿ ಗೆ ವೋಟ್ ಕೇಳುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಹಾಕಿ 543 ಕ್ಷೇತ್ರದಲ್ಲಿ ಹೋಗಿ ಅವರೆ ಕೆಲಸವನ್ನು ಮಾಡಲು ಬರುತ್ತಾರೇನು ಎಂದು ಮಾದ್ಯಮದ ಮೂಲಕ ಪ್ರಶ್ನೆ ಮಾಡಿದರು.ಅಂದರೆ ನಿಂತಿರುವ ಇವರು ಯಾರು ಕೂಡ ಕ್ಷೇತ್ರದಲ್ಲಿ ಯೋಗ್ಯತೆ ಉಳಿಸಿಕೊಂಡಿಲ್ಲ ಎಂಬುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಟೀಕಿಸಿದರು,

         ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ರೈತರ, ಕಾರ್ಮಿಕರ, ದೀನ ದಲಿತರ ಉದ್ಧಾರಕ್ಕಾಗಿ ಅವರನ್ನು ಮೇಲೆತ್ತುವ ಸಲುವಾಗಿ ಸೇವೆ ಮಾಡಲು ಬಂದಿದ್ದೇನೆ ಎಂದು ಹೇಳಿದ ಪ್ರಕಾರ ಜನರ ಕಷ್ಟಗಳಿಗೆ ಸ್ಪಂದದಿಸದೆ ಹಾಗೂ ಜನಧನ್ ಖಾತೆಯನ್ನು ಮಾಡಿ
15 ಲಕ್ಷ ರೂಪಾಯಿ ಖಾತೆಗೆ ಹಾಕುತ್ತೇವೆ ಎಂಬುದು ತಿಳಿಸಿದ ಅವರು15 ಪೈಸೆ ಕೂಡ ನೀಡಲಿಲ್ಲ, ಈ ಬಡಾಯಿ ಮೋದಿ ಗೆ ಮತ ಹಾಕಬೇಕೇ ಜನರಿಗೆ ಮಾದ್ಯಮದ ಮುಖಾಂತರ ಸಂದೇಶ ಕೊಟ್ಟರು.

          ಬಡವರ ಹಾಗೂ ದೀನ ದಲಿತ ಮತ್ತು ಕಾರ್ಮಿಕರು ಕೂಡಿಟ್ಟ ಹಣವನ್ನು  ದೋಚಿ ಹಾಕಿದರು. ಇವರಿಗೆ ನಾವು ತಕ್ಕ ಪಾಠ ಕಲಿಸಬೇಕು ಎಂದು ಸವಾಲು ಹಾಕಿದರು, ಮೋದಿ ಸರ್ಕಾರ ಎಸ್ಪಿ ಎಸ್ಟಿ ಕಾಯ್ದೆ ದುರ್ಬಲ ಗೊಳಿಸಲು ಹೊರಟಿರುವ ಹಾಗೂ ಮೀಸಲಾತಿ ಗೆ ದಕ್ಕೆ ತಂದೊಡ್ಡುವ ಪಕ್ಷವನ್ನು ದೇಶದಿಂದ ಹೊರ ಹಾಕುವಂತೆ ಜನತೆಯಲ್ಲಿ ವಿನಂತಿ ಮಾಡಿದರು.

          ಸರ್ಜಿಕಲ್ ಸ್ಟ್ರೈಕ್ ಕೆವಲ ಮೋದಿಯ ಸರ್ಕಾರದಲ್ಲಿ ಮಾತ್ರ ನಡೆದಿಲ್ಲ, ಕಳೆದ ಸರ್ಕಾರದ ಆಡಳಿತದಲ್ಲಿ ಹತ್ತು ಹನ್ನೆರಡು ಬಾರಿ ನಡೆದಿದೆ, ಇದನ್ನು ಅವರು ನಾನೆ ಹೋಗಿ ಮಾಡಿದ್ದೇನೆ ಎನ್ನುವ ರೀತಿಯಲ್ಲಿ ಪ್ರತ್ಯೇಕವಾಗಿ ಬಿಂಬಿಸುವುದು ಸರಿಯಲ್ಲ, ಇದು ಸೇನೆಗೆ ತಂದ ಅಗೌರವ, ಆದರೆ ದೇಶದ ಅತ್ಯುನ್ನತ ಸಂಸ್ಥೆ ಮತ್ತೊಂದು ಬಾರಿ ಅಧಿಕಾರ ಗದ್ದುಗೆ ಹಿಡಿಯಲು ಈ ಸಂಸ್ಥೆಯ ಮೂಲಕ ವಾಮ ಮಾರ್ಗದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮುಖೇನ ಭಯದ ವಾತಾವರಣ ನಿರ್ಮಾಣ ಮಾಡಿ ಹೇಡಿತನವನ್ನು ಪ್ರದರ್ಶಿಸುತ್ತದೆ. ಎಂದು ಲೇವಡಿ ಮಾಡಿದರು.

           ದಿನಾಂಕ ಏಪ್ರಿಲ್ 20 ರಂದು ಶನಿವಾರ ಬೆಳಿಗ್ಗೆ11 ಘಂಟೆಗೆ ಹೆಚ್ಚು ಎಸ್ ದೊರೆಸ್ವಾಮಿ ಯವರ ನೇತೃತ್ವದಲ್ಲಿಮೈತ್ರಿ ಅಭ್ಯರ್ಥಿ ಉಗ್ರಪ್ಪ ನವರ ಪರವಾಗಿ ಬಳ್ಳಾರಿಯ ಜಿಲ್ಲೆಯ ಜನತೆಯಲ್ಲಿ ಸುದ್ದಿಗೋಷ್ಟಿಯ ಮುಖಾಂತರ ಮತಯಾಚನೆ ಮಾಡುವರು ಎಂಬುದು ತಿಳಿಸಿದರು.ಇದರಲ್ಲಿ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ, ಸಾಹಿತಿ ಎನ್ ಡಿ ಯಂಕಮ್ಮ ಪ್ರಗತಿಪರರು,ನಿಷ್ಟಿ ರುದ್ರಪ್ಪ,ಸಿಪಿಐ ಮುಖಂಡ ಶಿವಶಂಕರ್, ರೈತ ಸಂಘದ ಮುಖಂಡ ಮಾಧವ ರೆಡ್ಡಿ, ಚಿಂತಕರು, ಬುದ್ಧಿಜೀವಿಗಳು ಲೇಖಕರು, ಮತದಾರ ಪ್ರಭುಗಳು ಭಾಗವಹಿಸಲಿದ್ದಾರೆ,ಹಾಗೆಯೇ ಗಾಂಧಿ ಭವನದಲ್ಲಿ ಪ್ರಚಾರದ ಸಭೆ ಕೂಡ ನಡೆಯಲಿದೆ ಎಂದರು,ಉಗ್ರಪ್ಪ ನವರು ಒಬ್ಬ ಕಾನೂನು ಪಂಡಿತ, ತಿಳುವಳಿಕೆಯ ವಿಚಾರದಲ್ಲಿ ವಾಗ್ಮಿ ಚಿಂತಕ, ಹೀಗೆ ಹಲವಾರು ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಚತುರ ಅದರ ಜೊತೆಗೆ ರೈತರ ವರದಾನ

           ವಾದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಾವಿರಾರು ಹಳ್ಳಿಗಳಿಗೆ ಲಕ್ಷಾಂತರ ಜನತೆಗೆ ಹಗರಿ ಪ್ರಾಜೆಕ್ಟ್ ಸಮ್ಮತಿ ಸೂಚಿಸಿ ಇದರೊಟ್ಟಿಗೆ ಕೃಷಿ ಕಾಲೇಜ್ ಕೂಡ ಬಳ್ಳಾರಿಯಲ್ಲಿ ನಿರ್ಮಿಸಲು ಆಸಕ್ತಿಯನ್ನು ತೋರಿದ್ದಾರೆ ಇದಕ್ಕಾಗಿ ಅವರನ್ನು ಬೆಂಬಲಿಸುತ್ತದೆ, ಹಾಗೇಯೇ ಟಿ ಜಿ ವಿಠ್ಠಲ್ ಮಾತಾನಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಐದು ವರ್ಷಗಳಲ್ಲಿ ಕಗ್ಗೊಲೆ ಮಾಡಿ ಸಾರ್ವಭೌಮತ್ವ, ಹಾಗೂ ಸಂವಿಧಾನ ರಕ್ಷಣೆಯಲ್ಲಿ ಮೋದಿ ಸೋತು ಹೋದನು, ಎಂದರು. ಈ ಸಂದರ್ಭದಲ್ಲಿ ಟಪಾಲು ಗಣೇಶ್, ಗಂಗಾ ರೆಡ್ಡಿ ಮತ್ತಿತರ ಬುದ್ದಿ ಜೀವಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link