ಆಯುಷ್ಮಾನ್ ಭಾರತ ಯೋಜನೆಯ ಪತ್ರಗಳನ್ನು ವಿತರಣೆ

ಹಾನಗಲ್ಲ 

        ಸಾಮಾನ್ಯ ಸ್ಥಿತಿಯ ಕುಟುಂಬಗಳಿಗೂ ಉನ್ನತ ಗುಣಮಟ್ಟದ ಆರೋಗ್ಯ ಚಿಕಿತ್ಸೆಗಳು ಉಚಿತವಾಗಿ ಲಭ್ಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ `ಆಯುಷ್ಮಾನ್ ಭಾರತ’ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಅಂಚೆ ಮೂಲಕ ಎಲ್ಲರ ಮನೆಗೆ ಪತ್ರ ಮುಖೇನ ತಲುಪಲಿವೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

        ಗುರುವಾರ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಕೇಂದ್ರ ಸರ್ಕಾರದಿಂದ ಮಂಜೂರಾದ ಆಯುಷ್ಮಾನ್ ಭಾರತ ಯೋಜನೆಯ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ 72ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ದೇಶದ ಜನತೆಗೆ ಬಹು ದೊಡ್ಡ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗಿನ ಆರೋಗ್ಯ ಚಿಕಿತ್ಸೆಗಾಗಿ ಹಣ ನೀಡಲಿದ್ದಾರೆ. 5 ಲಕ್ಷಗಳಲ್ಲಿ ನೋಂದಣಿ ಶುಲ್ಕ, ವೈದ್ಯರ ಶುಲ್ಕ,ಶಸ್ತ್ರಚಿಕಿತ್ಸೆ, ಔಷಧಿಗಳು, ರೋಗ ಪತ್ತೆ ಪರೀಕ್ಷೆ, ಸ್ಕ್ಯಾನ್, ಎಕ್ಸರೇ ಮಾಡಿಸಬಹುದಾಗಿದೆ.

        ದೀರ್ಘ ಕಾಲದ ರೋಗಗಳಾದ ಹೃದಯದ ಬೈಪಾಸ್ ಸರ್ಜರಿ, ಮಂಡಿ ಚಿಪ್ಪು ಅಳವಡಿಕೆ ಶಸ್ತ್ರಚಿಕಿತ್ಸೆಗೆ ಪ್ರಯೋಜನವಾಗಲಿದೆ. ಈ ಯೋಜನೆಯ ಸೌಲಭ್ಯವನ್ನು ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿಯೂ ನಗದುರಹಿತ ಸೇವೆ ಪಡೆಯಬಹುದು. ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ರಾಷ್ಟ್ರೀಯ ರಕ್ಷಣಾ ಮಿಶನ್ ಭಾಗವಾಗಿರುವ ಆಯುಷ್ಮಾನ್ ಭಾರತ ಯೋಜನೆ 10 ಕೋಟಿ ಕುಟುಂಬಗಳ 50ಕೋಟಿ ಜನರಿಗೆ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.

       ನಂತರ ಅಂಚೆ ಮೂಲಕ ರವಾನೆಯಾದ ಆಯುಷ್ಮಾನ್ ಭಾರತ ಫಲಾನುಭವಿಗಳ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ, ಸದಸ್ಯ ನಾಗಪ್ಪ ಪಿಳ್ಳಿಕಟ್ಟಿ, ವಿರುಪಾಕ್ಷಪ್ಪ, ಅಂಚೆ ನೌಕರ ಮದನ ದೇಶಪಾಂಡೆ ಇತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link