ಶಿಗ್ಗಾವಿ :
ಪ್ರತಿಷ್ಠೇಗಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಇಂತಹ ಕಾಲದಲ್ಲಿ ಅರಳೆಲೆಮಠದ ಶ್ರೀಗಳು ತಮ್ಮ ಹುಟ್ಟುಹಬ್ಬವನ್ನು ಉಚಿತ ಆರೋಗ್ಯ ಶಿಭಿರ, ರಕ್ತದಾನ ಶಿಭಿರವನ್ನು ಆಯೋಜಿಸುವಮೂಲಕ ಧರ್ಮ, ಶಾಸ್ತ್ರ, ಪಕೃರ್ತಿಗೆ ಪೂರಕವಾಗಿ ಆಚರಿಸಿಕೊಳ್ಳುತ್ತಿರುವದು ಅತ್ಯಂತ ಶ್ರೇಷ್ಠ ಕಾರ್ಯಗಳಲ್ಲೊಂದಾಗಿದೆ ಎಂದು ರಾಣೆಬೆನ್ನೂರಿನ ಮದ್ದರಕಿ ಹಿರೇಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ಬಂಕಾಪುರ ಪಟ್ಟಣದ ಅರಳೆಲೆಮಠದ ಸಭಾಭವನದಲ್ಲಿ ನಡೆದ ಲಿಂ.ರುದ್ರಮುನಿ ಶ್ರೀಗಳವರ ಪುಣ್ಯಾರಾಧನೆ, ಶ್ರೀ ಮಠದ ಪಟ್ಟಾದ್ಯಕ್ಷರ ಷಷ್ಠಪೂರ್ತಿ ಸಮಾರಂಭದ ಫುರ್ವ ಭಾವಿ ಸಭೆಯನ್ನು ಉದ್ದೇಸಿಸಿ ಮಾತನಾಡಿದ ಅವರು ಗುರುವಿನ ಗುಲಾಮ ನಾಗುವತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯಂತೆ ಗುರುವಿನ ಋಣವನ್ನು ಭಕ್ತರು ತಿರಿಸಬೇಕಾದರೆ ಗುರುವಿನ ತೂಕದಷ್ಟು ಧನ,ಧಾನ್ಯ,ಕನಕ,ನಾಣ್ಯಗಳ ತುಲಾಭಾರ ಸೇವೆ ಸಲ್ಲಿಸಿದಾಗ ಮಾತ್ರ ಗುರುವಿನ ಋಣವನ್ನು ಕಡಿಮೆಮಾಡಿಕೊಳ್ಳಬಹುದು ಎಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖವಿದೆ.
ಆನಿಟ್ಟಿನಲ್ಲಿ ಫೆಬ್ರುವರಿ ತಿಂಗಳಿನಲ್ಲಿ ನಡೆಯಲಿರುವ ಲಿಂ.ರುದ್ರಮುನಿ ಶ್ರೀಗಳವರ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿಗಳವರ ಷಷ್ಠಪೂರ್ತಿ ಸಮಾರಂಭವನ್ನು ಶ್ರೀ ಮಠದ ಭಕ್ತರು ಬೆಳ್ಳಿ ತುಲಾಭಾರ ಸೇವೆ ಸಲ್ಲಿಸುವಮೂಲಕ ವಿಜೃಂಭಣೆಯಿಂದ ಆಚರಿಸುವಂತೆ ಸಲಹೆ ನೀಡಿದರು.
ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶ್ರೀಗಳು ಮಾತನಾಡಿ ಅನಘ್ರ್ಯ ರತ್ನಗಳಾದ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಹಾಗು ಹುಲ್ಯಾಳ ಯೋಗಾಶ್ರಮದ ಜ್ಞಾನ ನಿಧಿ ಶ್ರೀ ಶಂಭುಲಿಂಗ ಶಿವಾಚಾರ್ಯರಿಗೆ ಶಿವದೀಕ್ಷೆ ನೀಡಿ ಆಧ್ಯಾತ್ಮ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ಕೀರ್ತಿ ಲಿಂ.ರುದ್ರಮುನಿ ಶ್ರೀಗಳವರಿಗೆ ಸಲ್ಲುತ್ತದೆ. ಮಾನವರಿಗೆ ದೇವರ ದರ್ಶನದ ಭಾಗ್ಯ ಕರುಣಿಸಿ ಮುಕ್ತಿ ತೋರಿಸಬಲ್ಲ ಶಕ್ತಿ ಈ ಜಗದಲಿ ಗುರುವಿನಿಂದ ಮಾತ್ರ ಸಾದ್ಯವಿದೆ.
ಆ ನಿಟ್ಟಿನಲ್ಲಿ ಪ್ರಸ್ತುತ ಶ್ರೀ ರೇವಣಸಿದ್ದೇಶ್ವರ ಶ್ರೀಗಳು ಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವದು ಈ ಬಾಗದ ಭಕ್ತರ ಭಾಗ್ಯೋದಯವಾಗಿದೆ. ಶ್ರೀಗಳವರ ಷಷ್ಠಪೂರ್ತಿ ಸಮಾರಂಭಕ್ಕೆ ಬೆಳ್ಳಿ ತೂಲಾಭಾರ ಸೇವೆ ಸಲ್ಲಿಸಲು ನಮ್ಮ ಮಠದಿಂದ ಒಂದು ಲಕ್ಷದಾ ಹನ್ನೊಂದು ಸಾವಿರದಾ ಹನ್ನಂದನೂರಾ ಹನ್ನಂದು ರೂಪಾಯಿಗಳನ್ನು ನೀಡುವದಾಗಿ ಹೇಳಿದರು.
ಪೂರ್ವಭಾವಿ ಸಭೆಗೆ ವಿವಿದ ಭಾಗಗಳಿಂದ ಆಗಮಿಸಿದ ಭಕ್ತರಲ್ಲಿ ಓರ್ವ ಭಕ್ತ ಶ್ರೀಗಳವರ ಷಷ್ಠಪೂರ್ತಿ ಸಮಾರಂಭಕ್ಕೆ ಪಂಚಪೀಠಾದೀಶ್ವರರನ್ನು ಆಹ್ವಾನಿಸಿ ಅಡ್ಡಫಲ್ಲಕ್ಕೀ ಮಹೋತ್ಸವ ನಡೆಸುವದಾದರೆ ಅದರ ಖರ್ಚು ವೆಚ್ಚವನ್ನು ತಾನೇ ಬರಿಸುವದಾಗಿ ಘೋಸಿಸಿದರೆ ಮತ್ತೋರ್ವ ಭಕ್ತ ಬೆಳ್ಳಿ ತೂಲಾಭಾರಕ್ಕೆ ಕಾಲಕೇಜಿ ಬೆಳ್ಳಿ ಕೊಡಿಸಲು ಘೋಸಿಸಿದ. ಭಕ್ತರು ತಮ್ಮ ಯೋಗ್ಯತಾ ಅನುಸಾರವಾಗಿ ವಿವಿದ ಸೇವೆಗಳನ್ನು ಮಾಡಲು ಸ್ವಯಂ ಪ್ರೇರಿತವಾಗಿ ಸಭೆಯಲ್ಲಿ ಘೋಷಣೆ ಮಾಡಿದರು.
ಕುಡಲದ ಶ್ರೀ ಗುರು ಮಹೇಶ್ವರ ಶ್ರೀಗಳು, ಗುಬ್ಬಿ ನಂಜುಂಡ ಪಂಡಿತರಾಧ್ಯ ಶ್ರೀಗಳು, ಗಂಜಿಗಟ್ಟಿ ಶಿವಲಿಂಗೇಶ್ವರ ಶ್ರೀಗಳು ಮಾತನಾಡಿದರು. ಸಮಾರಂಭದಲ್ಲಿ ಶ್ರೀ ರೇವಣಸಿದ್ದೇಶ್ವರ ಶ್ರೀಗಳವರನ್ನು ರುದ್ರಮುನಿ ಸೇವಾ ಸಮಿತಿ ಸದಸ್ಯರು ಹಾಗು ಸರ್ವ ಮಠಾದೀಶರು ಸನ್ಮಾನಿಸಿದರು.
ಡಾ.ಆರ್.ಎಸ್.ಅರಳೆಲೆಮಠ, ಬಂಕಣ್ಣ ಕುರಗೋಡಿ, ಸೋಮಶೇಖರ ಗೌರಿಮಠ, ಮಹೇಶ ಸಾಲಿಮಠ, ಎಂ.ಬಿ.ಉಂಕಿ, ಮಂಜುನಾಥ ಕೂಲಿ, ಸುರೇಶಗೌಡ್ರ ಪಾಟೀಲ, ಮಂಜುನಾಥ ವಳಗೇರಿ, ಬಸವರಾಜ ನಾರಾಯಣಪುರ, ಮಂಜುನಾಥ ಭಾವಿಕಟ್ಟಿ, ಅಶೋಕ ಶೆಟ್ಟರ, ವೀರಣ್ಣ ಸಂಶಿ, ಶಿವಾನಂದ ಮ್ಯಾಗೇರಿ, ಜಗದೀಶ ಹುರಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.