ಲೈನ್‍ಮನ್‍ಗಳ ಕಾರ್ಯ ಶ್ಲಾಘನೀಯ

ಹುಳಿಯಾರು

     ಲಾಕ್‍ಡೌನ್ ಸಂದರ್ಭಲ್ಲಿ ಅಧಿಕಾರಿಗಳು, ವೈದ್ಯರು, ಪೊಲೀಸರು, ದಾದಿಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್ ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಇವರಂತೆಯೆ ಲೈನ್‍ಮನ್‍ಗಳೂ ಸೇರಿದಂತೆ ಎಲ್ಲ ಬೆಸ್ಕಾಂ ಸಿಬ್ಬಂದಿ 24*7 ಕೆಲಸದಲ್ಲಿ ತೊಡಗಿದ್ದಾರೆ.

     ಬಿಸಿಲಿನ ತಾಪ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಫ್ಯಾನ್, ಕೂಲರ್, ಟಿವಿ ನಿರಂತರವಾಗಿ ಓಡುತ್ತಲೇ ಇರಬೇಕು. ಅದರಲ್ಲೂ ರಾತ್ರಿ ಸಂದರ್ಭದಲ್ಲಿ ಒಂದು ನಿಮಿಷ ವಿದ್ಯುತ್ ಕಡಿತಗೊಂಡರೂ ಕಷ್ಟ. ಇಂಥ ಕಷ್ಟಗಳಿಂದ ಜನರನ್ನು ಪಾರು ಮಾಡಿ ನೆಮ್ಮದಿಯಿಂದ ಮನೆಯಲ್ಲೆ ಸುರಕ್ಷಿತವಾಗಿರಲು ಸಮರ್ಪಕ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕೆ ಬೆಸ್ಕಾಂ ಸಿಬ್ಬಂದಿಯ ತೆರೆಯ ಹಿಂದಿನ ಶ್ರಮ ಪ್ರಶಂಸನೀಯ.

     ಲಾಕ್‍ಡೌನ್ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಬಿಲ್ ಸಂಗ್ರಹ ಮಾಡಿ ನಂತರದ ಸಮಯದಲ್ಲಿ ಇತರೆ ಕೆಲಸ ಮಾಡುತ್ತಿದ್ದ ಲೈನ್‍ಮನ್‍ಗಳು ಈಗ ಜಂಗಲ್ ಕಟಿಂಗ್, ಲೂಸ್‍ವೈರ್ ಟೈಟ್ ಮಾಡುವುದು, ಕಟ್ಟಾದ ಜಂಪ್ ಸರಿಪಡಿಸುವುದು, ಸುಟ್ಟ ಟಿಸಿ ಮೇಲೆತ್ತುವುದು, ಟಿಸಿಯಲ್ಲಿ ಓವರ್ ಲೋಡ್ ಆಗಿರುವ ಸಂದರ್ಭದಲ್ಲಿ ಜಂಪ್ ತೆಗೆಯಬೇಕು. ವೈರ್‍ಗಳ ಮಧ್ಯೆ ಫೇಸ್ಹÀರ್ ಹಾಕುವುದು, ಹೀಗೆ ಸಮರ್ಪಕ ವಿದ್ಯುತ್ ನೀಡುವ ಸಲುವಾಗಿ ನಿರಂತರ ವಿದ್ಯುತ್ ಕೆಲಸಗಳಲ್ಲಿ ತೊಡಗಿರುತ್ತಾರೆ.

      ಒಟ್ಟಾರೆ ಲಾಕ್‍ಡೌನ್ ನೆಪದಲ್ಲಿ ಎಲ್ಲರೂ ಮನೆಯಲ್ಲಿರುವಾಗ ಇವರು ಮಾತ್ರ ಮಳೆ, ಬಿಸಿಲೆನ್ನದೆ ಕಂಬದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವಘಡಗಳಿಂದ ಜನರನ್ನು ರಕ್ಷಿಸಲು ಕೈಗೊಳ್ಳುವ ಮುಂಜಾಗ್ರತಾ ಕ್ರಮ ಹಾಗೂ ರೈತರ ಹೊಲಗಳಿಗೆ ವಿದ್ಯುತ್ ಪೂರೈಸುವ ವ್ಯವಸ್ಥೆಯನ್ನೂ ಸಿಬ್ಬಂದಿ ನಿರ್ವಹಿಸುತ್ತಿರುವುದು, ಅದರಲ್ಲೂ ಕೊರೊನಾ ಸಂದರ್ಭದ ಕಾರ್ಯ ಶ್ಲಾಘನೀಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link