ತುರುವೇಕೆರೆ
ತುರುವೇಕೆರೆ ಲಯನ್ಸ್ ಕ್ಲಬ್ ವತಿಯಿಂದ, ಲಯನ್ಸ್ 317 ಎ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಪ್ರಾಂತೀಯ ಸಮ್ಮೇಳನ -ಪ್ರಾಂತ್ಯ 5 ಇದೇ 10 ರಂದು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಜರುಗಲಿದೆ ಎಂದು ಪ್ರಾಂತ್ಯಾಧ್ಯಕ್ಷ ಲ|| ಟಿಎವಿ ಗುಪ್ತಾ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಕಳೆದ 28 ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ತುರುವೇಕೆರೆ ಲಯನ್ಸ್ ಕ್ಲಬ್ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ಕುಣಿಗಲ್ ಹಾಗೂ ನೊಣವಿನಕೆರೆಯಲ್ಲಿ ನೂತನ ಲಯನ್ಸ್ ಕ್ಲಬ್‍ಗಳನ್ನು ಪ್ರಾರಂಭಿಸಿ ಸೇವಾ ಚಟುವಟಿಕೆಗಳ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಈಗಾಗಲೇ 2015 ರಲ್ಲಿ ಒಮ್ಮೆ ಪ್ರಾಂತೀಯ ಸಮ್ಮೇಳನ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿ ಮತ್ತೊಮ್ಮೆ ಪ್ರಾಂತ್ಯೋತ್ಸವಕ್ಕೆ ಸಜ್ಜಾಗಿದೆ.
ಈ ನಿಟ್ಟಿನಲ್ಲಿ ಇದೇ 10 ರ ಭಾನುವಾರ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಬೆಳಗ್ಗೆ 11:30 ಕ್ಕೆ ಸಮ್ಮೇಳನ ಪ್ರಾರಂಭವಾಗಲಿದ್ದು, ದಿವ್ಯ ಸಾನ್ನಿಧ್ಯವನ್ನು ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಭಾಷಣಕಾರರಾಗಿ ರಿ|| ಲೆಪ್ಟಿನೆಂಟ್ ಜನರಲ್ ಡಾ. ಪಿ.ಜಿ.ಕಾಮತ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಡಿ. ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು. ಪ್ರಾಂತ್ಯಾಧ್ಯಕ್ಷ ಟಿಎವಿ ಗುಪ್ತಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ರಾಜ್ಯಪಾಲ ಎಂ.ಅನಿಲ್ ಕುಮಾರ್, ಉಪಜಿಲ್ಲಾ ರಾಜ್ಯಪಾಲರಾದ ವಿ.ನಾಗರಾಜಭೈರಿ, ಜಿ.ಎ.ರಮೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ.ಎಸ್. ದ್ವಾರಕಾನಾಥ್, ಖಜಾಂಚಿ ಕೆ.ಈಶ್ವರನ್, ರೆಜಿನಾಲ್ಡ್ ಶರಾನ್ ಹಾಗೂ ಆತಿಥೇಯ ಸಮಿತಿ ಅಧ್ಯಕ್ಷ ಗಂಗಾಧರ ದೇವರಮನೆ, ಕಾರ್ಯದರ್ಶಿ ಸುನಿಲ್ ಬಾಬು, ಖಜಾಂಚಿ ಬಸವರಾಜು ವಲಯಾಧ್ಯಕ್ಷರಾದ ಟಿ.ವಿ.ಮಹೇಶ್, ನಿರಂಜನ್, ಕರುಣವೀರಕೆಂಪಯ್ಯ, ಡಾ.ನಾಗರಾಜು, ಪಿ.ಹೆಚ್ ಧನಪಾಲ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರಾಂತ್ಯೋತ್ಸವದ ಅಂಗವಾಗಿ ‘ದೇಶದ ಸೈನಿಕರು-ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದೊಂದಿಗೆ ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬ ಹಾಗೂ ಅಂಗ ವೈಫಲ್ಯತೆಗೆ ಒಳಗಾದ ಮಾಜಿ ಯೋಧರನ್ನು ಗುರ್ತಿಸಿ ಆರ್ಥಿಕ ಸಹಾಯ ನೀಡಿ ಸತ್ಕರಿಸಲಾಗುವುದು. ಅಲ್ಲದೆ ವಿಶೇಷವಾಗಿ ಯುದ್ದಕ್ಕೆ ಬಳಸುವ ಶಸ್ತ್ರಾಸû್ರಗಳ ತದ್ರೂಪಿ (ಡೆಮೋ) ಪ್ರದರ್ಶನ ಸಹಾ ಏರ್ಪಡಿಸಲಾಗಿದೆ.ಈ ಸಂದರ್ಭದಲ್ಲಿ ಲ|| ಅಧ್ಯಕ್ಷ ನಂಜೇಗೌಡ, ಎಂ.ಸಿ.ನಟೇಶ್. ಪ್ರದೀಪ್ ಗುಪ್ತಾ, ಮಿಹಿರಾ ಕುಮಾರ್, ಲೋಕೇಶ್, ವಿನಯ್, ವಿರೂಪಾಕ್ಷ, ಪರಮೇಶ್, ಮನು, ಅಭಿ, ಆನಂದ್, ರವಿ, ಮಹೇಶ್, ರಾಮಕೃಷ್ಣ ಸೇರಿದಂತೆ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








