ಗುತ್ತಲ
ಕುಡಿಯುವ ನೀರಿಗೂ ಮಧ್ಯಕ್ಕೂ ವ್ಯತ್ಯಾಸವನ್ನು ಅರಿಯದ ರೀತಿಯಾಗಿರುವುದು ಮತ್ತು ಮಧ್ಯ ಪ್ಯಾಕೆಟ್‍ಗಳ ಮಧ್ಯಯೇ ಕುಡಿಯುವ ನೀರಿನ ಟ್ಯಾಂಕ್ ಇರುವುದನ್ನು ಕಾಣಬಹುದು ಸಮೀಪದ ನೆಗಳೂರು ಗ್ರಾಮದಲ್ಲಿ.ಇಂದು ನೀರಿಗಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಹಾಹಾಕಾರವಿದ್ದು ಹನಿ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದರೆ. ಸಮೀಪದ ನೆಗಳೂರು ಗ್ರಾಮದಲ್ಲಿ ಗ್ರಾಮಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಟ್ಯಾಂಕ್ ಪಕ್ಕದಲ್ಲಿ ಕುಡುಕರು ಕುಡಿಯುವ ಮಧ್ಯದ ಪ್ಯಾಕೆಟ್ ರಾಶಿ ರಾಶಿಯಾಗಿ ಬಿದ್ದಿವೆ.
ಸಮೀಪದ ನೆಗಳೂರ ಗ್ರಾಮದ ಪ್ರವಾಸಿ ಮಂದಿರ ಹಾಗೂ ಕೋಡಿ ದುರ್ಗಾದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆ ಬಳಿಯಿರುವ ಕುಡಿಯುವ ನೀರಿನ ಟ್ಯಾಂಕಿನ ಸುತ್ತಲು ಕುಡಿದು ಬಿಸಾಕಿರುವ ಮಧ್ಯದ ಪಾಕೀಟುಗಳ ಹಾವಳಿಯಿಂದ ನೀರನ್ನು ಹಿಡಿಯಲು ಸಾರ್ವಜನಿಕರು ಹಿಂದೆಟು ಹಾಕುತ್ತಿದ್ದಾರೆ.
ರಾತ್ರಿ 8 ಗಂಟೆ ವೇಳೆಗೆ ಮಧ್ಯವ್ಯಸನಿಗಳು ಕುಡಿಯುವ ನೀರಿನ ಟ್ಯಾಂಕ್ ಸಮೀಪವಿರುವ ಮಧ್ಯದ ಅಂಗಡಿಯಿಂದ ಮಧ್ಯವನ್ನು ಕುಡಿದು ಪಾಕೀಟುಗಳನ್ನು ಮಾತ್ರ ಕುಡಿಯುವ ನೀರಿನ ಟ್ಯಾಂಕ್ ಸುತ್ತ ಬಿಸಾಡಿ ಹೋಗುತ್ತಾರೆ. ಇದರಿಂದ ಈ ಭಾಗದಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು ಇಲ್ಲಿಯ ಜನರಿಗೆ ಈ ಟ್ಯಾಂಕ್ ಮೂಲಕವೇ ನೀರು ಸರಬರಾಜು ಆಗುತ್ತಿದ್ದು ಕುಡಿಯು ನೀರಿನ ಟ್ಯಾಂಕಿನ ಸುತ್ತ ಮುತ್ತ ಮಧ್ಯದ ಪಾಕೀಟುಗಳು ಹಾಗೂ ಸ್ವಚ್ಚತೆ ಮರಿಚಿಕೆ ಆಗಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.ಅಲ್ಲದೇ ಮಹಿಳೆಯರು ಹಾಗೂ ಮಕ್ಕಳು ಸಂಜೆ 7 ಗಂಟೆ ನಂತರ ಈ ಟ್ಯಾಂಕ್ ಬಳಿ ಬಂದು ನೀರನ್ನು ತೆಗೆದುಕೊಂಡು ಹೋಗಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ಟ್ಯಾಂಕ್ ಬಳಿ ನೀರನ್ನು ಹಿಡಿಯಲು ಬರುತ್ತಾರೆ ಆದರೆ ಇದೇ ಜಾಗದಲ್ಲಿ ಮಧ್ಯಪಾನಿಗಳು ರಾತ್ರೋರಾತ್ರಿ ಮಧ್ಯವ್ಯಸನವನ್ನು ಮಾಡಿದ ಪಾಕೀಟುಗಳನ್ನು ಹಾಗೂ ಬಾಟಲಿಗಳನ್ನು ಟ್ಯಾಂಕಿನ ಸುತ್ತಮುತ್ತ ಬಿಸಾಕಿ ಕುಡಿಯಲು ಬಳಸುವ ನೀರಿನ ಟ್ಯಾಂಕಿನ ಸುತ್ತಲಿನ ಜಾಗೆಯನ್ನು ಮಲೀನ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಮಧ್ಯಪಾನ ಪ್ರೀಯರಿಂದ ಆಗುತ್ತಿರುವಂತಹ ಈ ಒಂದು ಸಮಸ್ಯೆಯಿಂದ ಸಾರ್ವಜನಿಕರಿಗೆ ಮುಕ್ತಿ ಯಾವಾಗ ಎನ್ನುವಂತಹ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.