ಬೆಂಗಳೂರು
ಪ್ರಾದೇಶಿಕ ಭಾಷೆಯನ್ನೇ ಮಾತೃ ಭಾಷೆ ಎಂದು ದೃಢೀಕರಣದ ಅವಶ್ಯಕತೆಯನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಒತ್ತಿ ಹೇಳಿದ್ದಾರೆ.
ಪ್ರಾದೇಶಿಕ ಭಾಷೆಯನ್ನೇ ತಾಂತ್ರಿಕ ತೊಂದರೆಯಿಂದ ಮಾತೃ ಭಾಷೆಯೆಂದು ಕರೆಯಬೇಕಾದ ಅವಶ್ಯಕತೆಯಿದೆ ಎಂದು ಅವರು ಪ್ರತಿಪಾದಿಸಿದರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿ ಏರ್ಪಡಿಸಿದ್ದ, ‘ಪ್ರಾಥಮಿಕ ಶಿಕ್ಷಣ ದಲ್ಲಿ ಬೋಧನ ಮಾಧ್ಯಮ’ ಕುರಿತ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾತೃ ಭಾಷೆಯ ಬದಲು, ಪ್ರಾದೇಶಿಕ ಭಾಷೆಯೆಂದು ಬಳಸಬೇಕೆಂದು ಎಂ.ಅಬ್ದುಲ್ ರಹಮಾನ್ ಪಾಷ ಅವರ ಹೇಳಿಕೆಗೆ ವೇದಿಕೆಯಲ್ಲೇ ಉತ್ತರಿಸಿದ ಅವರು, ಮುಂಬೈ, ಕಲ್ಕತ್ತಾ, ಚೆನ್ನೈನಲ್ಲಿ ಕನ್ನಡಿಗರು ಇರುವುದರಿಂದ ಪ್ರಾದೇಶಿಕ ಭಾಷೆಯನ್ನು ಬಳಸದೇ. ಮಾತೃ ಭಾಷರಯೆಂದು ಬಳಸುತ್ತಿದ್ದೇವೆ.ಕೆಲವೊಂದು ತಾಂತ್ರಿಕ ತೊಂದರೆಯಿಂದ ಮಾತೃ ಭಾಷೆಯೆಂದು ಕರೆಯಬೇಕಾದ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
ಇದಕ್ಕೂ ಮೊದಲು ಮಾತನಾಡಿದ ಎಂ.ಅಬ್ದುಲ್ ರಹಮಾನ್ ಪಾಷ, ಅಲಿಸು ಅರ್ಥೈಸುಕೊಳ್ಳುವ ಸಾಮಥ್ರ್ಯವನ್ನು ಮಗು ಮಾತೃ ಭಾಷೆಯಲ್ಲೇ ಕಲಿಯುತ್ತೆ. ಐದು ವರ್ಷದಲ್ಲಿ ಮಗು ತನ್ನ ಭಾಷೆಯಲ್ಲಿ ಮಾತಾಡುತ್ತೆ. ಇದರ ನಂತರ ಮಕ್ಕಳಿಗೆ ಮಾತಾಡುವ ಭಾಷೆಯಲ್ಲು ಶಿಕ್ಷಣ ಕಲಿಸುವುದು ತುಂಬಾ ಸುಲಲಿತ ಎಂದರು.
ಮಗು ಕನ್ನಡವನ್ನು ಚೆನ್ನಾಗಿ ಕಲಿತ್ತಿದೆ ಅಂದರೆ ಮಾತೃಭಾಷೆಯನ್ನು ಮಗು ಗಳಿಸಿಕೊಂಡಿರುತ್ತೆ. ಹೀಗಾಗಿ, ಗುಣಮಟ್ಟ ಶಿಕ್ಷಣ ನೀಡಲು ಸಾಧ್ಯವಾಗುವುದು ಮಾತೃಭಾಷೆಯಲ್ಲಿಯೇ ಮಾತ್ರ ಯಾರಿಗೆ ಯಾವ ಭಾಷೆ ಮಾಧ್ಯಮವಾಗಿದೇಯೋ ಅ ಭಾಷೆಯಲ್ಲಿ ಶಿಕ್ಷಣ ನೀಡುವುದು ಕರ್ತವ್ಯ ಎಂದು ತಿಳಿಸಿದರು.
ಶಿಕ್ಷಣ ತಜ್ಞ ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಸತ್ಯ ಮಾತನಾಡಿಡುವವರ ಸಂಖ್ಯೆ ಕಡಿಮೆಯಾಗಿದೆ.ಆದರೂ, ಅದನ್ನು ಹೇಗೆ ಅಭಿವೃದ್ಧಿಗೊಳಿಸಬೇಕು ಕಸಾಪದಂತ ಸಂಸ್ಥೆಗಳು ಪ್ರತಿ ತಾಲೂಕಿನಲೂ ಹೋರಾಟ ಮಾಡುವ ಅವಶ್ಯಕತೆ ಇದೆ.ಅಷ್ಟೇ ಅಲ್ಲದೆ, ಹೀಗಾಗಿ, ಕನ್ನಡ ಮಾಧ್ಯಮದ ಶಿಕ್ಷಣದ ಮೇಲೆ ಸತ್ಯವನ್ನು ಸತ್ಯ ಎಂದು ನೂರು ಬಾರಿ ಹೇಳಬೇಕಾಗಿದೆ.
ಮಕ್ಕಳು ತನ್ನ ಭಾಷೆಯಲ್ಲಿ ಸಂತೋಷದಿಂದ, ಸೃಜನಾತ್ಮಕತೆಯಿಂದ ತನ್ನ ಮಾತೃ ಭಾಷೆಯನ್ನು ಕಲಿಯುತ್ತೆ. ಆದರೆ, ಇದನ್ನು ಬೇಡ ಅನ್ನುವ ತಂದೆ ಮಕ್ಕಳು ಅಣ್ಣ ತಮ್ಮದಿರು ನಮ್ಮ ದೇಶದಲ್ಲಿ ಇದ್ದಾರೆ. ದೇಶದ ಎಲ್ಲ ಜನರ ವಿಚಾರಗಳನ್ನು ಈ ಮೂರು ಜನರೇ ತೀರ್ಮಾನಿಸುತ್ತಿದ್ದಾರೆ ಎಂದು ನುಡಿದರು.
ಬಡವರನ್ನು ದಾರಿ ತಪ್ಪಿಸುವ ಮೂಲಕ ಇಂಗ್ಲೀಷ್ ಮಾಧ್ಯಮವನ್ನು ಅವರ ಮಕ್ಕಳ ಮೇಲೆ ಹೇರಲಾಗಿದೆ. ಯಾರು ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆಯೋ. ಅವರಿಗೆ ಅನುಕೂಲವಾಗುವಂತೆ ಇದೆ ಎಂದು ಹೇಳಿದರು.ಚಿಂತನಾಗೋಷ್ಠಿಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ಹೋರಾಟಗಾರದ ಜಿ ಎನ್ ನಾಗರಾಜ್, ಜಿ. ರಾಜಶೇಖರಮೂರ್ತಿ,ರಾಜು ಗುಂಡಾಪುರ ಚಂದ್ರಶೇಖರ್ ಪಾಟೀಲ್ ಅವರು ಪಾಲ್ಗೊಂಡಿದರು.