ಹೊಸಪೇಟೆ:
ಆನಂದ್‍ಸಿಂಗ್ ವಿರುದ್ಧ ಘೋಷಣೆ, ಟಿಕೆಟ್ ನೀಡಿರುವುದಕ್ಕೆ ಭುಗಿಲೆದ್ದ ಆಕ್ರೋಶ, ರಾಜ್ಯ, ಜಿಲ್ಲಾ ನಾಯಕರ ವಿರುದ್ಧ ಹರಿಹಾಯ್ದ ಕಾರ್ಯಕರ್ತರು. ಇದು ಬಿಜೆಪಿ ಕಚೇರಿಯಲ್ಲಿ ವಿಜಯನಗರ ವಿಧಾನಸಭೆ ಕ್ಷೇತ್ರದ ಮರು ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಪೂರ್ವಾಭಾವಿ ಸಿದ್ಧತಾ ಸಭೆಯ ಚಿತ್ರಣ.
ಸಭೆ ಆರಂಭದಲ್ಲಿಯೇ ಭಾಗವಹಿಸಿದ್ದ ಕೆಲ ಕಾರ್ಯಕರ್ತರು ನಾಯಕರ ವಿರುದ್ಧ ಅಸಮಾಧಾನಹೊರಹಾಕಿದರು. ಇದಕ್ಕೆ ಜಿಲ್ಲೆಯ ಕೆಲ ನಾಯಕರು ಸಮಾಧಾನಪಡಿಸಲು ಮುಂದಾದ ಸಂದರ್ಭದಲ್ಲಿ ಉಳಿದೆಲ್ಲ ಕಾರ್ಯಕರ್ತರು ವೇದಿಕೆ ಮುಭಾಗದಲ್ಲಿ ಜಮಾಯಿಸಿ ಆನಂದ್ ಸಿಂಗ್‍ರನ್ನು ಯಾವ ಉದ್ದೇಶಕ್ಕೆ ಪಕ್ಷಕ್ಕೆ ಕರೆತರಲಾಗಿದೆ. ಅಲ್ಲದೇ ಮರು ಚುನಾವಣೆಯಲ್ಲಿ ಟಿಕೆಟ್ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ಇದರಿಂದ ಸಭೆಯೂ ಗೊಂದಲದ ಗೂಡಾಯಿತು. ಕಿಡಿಕಿಡಿ: ಬಿಜೆಪಿ ಮುಖಂಡ ರಾಮನಗೌಡ ಮಾತನಾಡಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಪಕ್ಷಕ್ಕೆ ದ್ರೋಹಮಾಡಿ ಪುನಾಹ ಬಂದವರಿಗೆ ಟಿಕೆಟ್ ನೀಡುವ ಮೂಲಕ ಸ್ಥಳೀಯ ಕಾರ್ಯಕರ್ತರನ್ನು ಬೀದಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಇದಕ್ಕೆ ಗ್ರಾಮಾಂತರ ವಿಭಾಗದ ಮುಖಂಡ ಜಡೇಶ್, ಕವಿರಾಜ್ ಅರಸ್, ಬಿಸಾಟಿ ಸತ್ಯನಾರಾಯಣ ಧ್ವನಿಗೂಡಿಸಿ ಪ್ರಧಾನಿ ಮೋದಿ, ಅಮಿತ್ ಶಾರಿಗೆ ಅವಮಾನಮಾಡಿದವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದು ಸರಿಯಲ್ಲ. ಮೋದಿರವರನ್ನು ಚೋರ್ ಎಂದು ಕರೆದವರನ್ನೇ ಟಿಕೆಟ್ ನೀಡಲಾಗಿದೆ, ಇದು ಎಷ್ಟರ ಮಟ್ಟಿಗೆ ಸರಿ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿರುದ್ಧ ಕಿಡಿಕಾರಿದರು. ಇದರಿಂದ ಮುಜುಗರಕ್ಕೀಡಾದ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಲಾಗದೆ ಸಭೆಯಿಂದ ಹೊರನಡೆದರು.
ಇದರಿಂದ ಮತ್ತೊಷ್ಟೊ ಸಿಟಿಗೆದ್ದ ಕಾರ್ಯಕರ್ತರು ನಾಯಕರು ಹೊರಬಂದರು ಅಲ್ಲಿಯೂ ಆಕ್ರೋಶ ವ್ಯಕ್ತಪಡಿಸಿ ಸಿಂಗ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಅನಿಲ್ ನಾಯ್ಡು, ಬಸವರಾಜ್ ನಲತ್ವಾಡ, ಗುದ್ಲಿ ಪರಶುರಾಮ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ