ರಟ್ಟೀಹಳ್ಳಿ :
ಕಳೆದ 20 ದಿನಗಳಿಂದ ದೇಶವ್ಯಾಪಿ ಲಾಕ್ ಡೌನ್ ಇದೆ ಆದರೆ ಈ ನಿಯಮ ಗ್ರಾಮೀಣ ಭಾಗಗಳಲ್ಲಿ ಜನರು ಗಾಳಿಗೆ ತೂರಿ ಅನವಶ್ಯಕವಾಗಿ ಓಡಾಡುತ್ತಿದ್ದಾರೆ, ಜನರು ಸರಿಯಾಗಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೇ ಬ್ಯಾಂಕ್, ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ ದಿನಸಿ ಅಂಗಡಿ, ಪೆಟ್ರೋಲ್ ಪಂಪ್ ಗಳಲ್ಲಿ ಗುಂಪು ಗೂಡಿ ದೈನಂದಿನ ಬದುಕು ಸಾಗಿಸುವ ರೀತಿ ನಡೆದುಕೊಳ್ಳುತ್ತಿದ್ದಾರೆ
, ಜನರ ಆರೋಗ್ಯ ದೃಷ್ಟಿಯಿಂದ ಹಗಲಿರುಳು ಪೊಲೀಸ್ ಇಲಾಖೆ, ಅರೋಗ್ಯ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಕೆಲಸ ಮಾಡಿದರು
ಸಾರ್ವಜನಿಕರು ಜಾಗೃತರಾಗುತ್ತಿಲ್ಲ, ಇನ್ನಾದರೂ ಸಾರ್ವಜನಿಕರು ಎಚ್ಚೆತ್ತು ಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ರಟ್ಟೀಹಳ್ಳಿ ತಹಶಿಲ್ದಾರ್ ಕೆ. ಗುರುಬಸವರಾಜ ಪ್ರಜಾಪ್ರಗತಿ ಮೂಲಕ ರಟ್ಟೀಹಳ್ಳಿ ತಾಲ್ಲೂಕಿನ ಜನರಿಗೆ ಸೂಚನೆ ನೀಡಿದರು.