ಹಿರೇಕೆರೂರು
ಮೇ. 3 ರವರೆಗೆ ದೇಶಾದ್ಯಂತ ಮತ್ತೇ ಲಾಕ್ ಡೌನ್ ವಿಸ್ತರಣೆಯಾಗಿದ್ದು ಹಿರೇಕೆರೂರು ತಾಲೂಕಿನಲ್ಲಿ ಲಾಕ್ ಡೌನ್ ಮತ್ತಷ್ಟು ಕಠಿಣವಾಗಿದೆ.ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಪೊಲೀಸರು ನಿಂತುಕೊಂಡು ಬಂದು ಹೋಗುವವರ ಮೇಲೆ ಸಂಪೂರ್ಣ ನಿಗಾ ವಹಿಸುತ್ತಿದ್ದಾರೆ. ಪಿ. ಎಸ್. ಐ ಹಾಗೂ ಸಿ. ಪಿ. ಐ ನೇತೃತ್ವದಲ್ಲಿ ತಪಾಸಣೆ ತೀವ್ರಗೊಂಡಿದೆ, ಅನವಶ್ಯಕವಾಗಿ ಓಡಾಡುವ ಬೈಕ್ ಸವಾರರಿಗೆ ಮುಲಾಜಿಲ್ಲದೆ ಕೇಸ್ ಹಾಕಲಾಗುವುದು. ಹಾಗೂ ಬೇರೆ ಜಿಲ್ಲೆಗಳಿಂದ ಬರುವ ವಾಹನಗಳ ಪಾಸ್ ಸೇರಿದಂತೆ, ತೀವ್ರ ರೀತಿಯಲ್ಲಿ ತಪಾಸಣೆ ನಡಿಸಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಹಾಗೂ ಎಲ್ಲ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಬರುವಂತಿಲ್ಲ ಎಂದು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








