ಮಧುಗಿರಿ:
ಏ.18ಕ್ಕೆ ಮೂಹರ್ತ ಫಿಕ್ಸ್ ಆಗಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಗೆ ತಾಲ್ಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ ಆದರೆ ಇಲ್ಲಿನ ಮೈತ್ರಿ ಪಕ್ಷಗಳ ಮುಖಂಡರ ಹಗ್ಗಾ ಜಗ್ಗಾಟ ಮಾತ್ರ ಮುಂದುವರೆಯುತ್ತಿದ್ದು ಮತದಾರ ನಿಮ್ಮ ನಾಯಕರ ಭವಿಷ್ಯ ನನ್ನ ಬೆರಳ ತುದಿಯಲ್ಲಿದ್ದು ಸಂಸತ್ತಿಗೆ ಯಾರನ್ನು ಆಯ್ಕೆ ಮಾಡಬೇಕೆನ್ನುವ ವಿವೇಚನೆ ಪ್ರಜ್ಞಾವಂತ ಮತದಾರರಲ್ಲಿದೆ ಎಂದು ಬೆಳಗಾದರೆ ನಾಯಕರ ಹಣೆಬರಹ ಬರೆಯುವ ಬ್ರಹ್ಮ ನಾಗಿದ್ದಾನೆ.
ಮಧುಗಿರಿ ಲೋಕಸಭಾ ಕ್ಷೇತ್ರ-139 ದಲ್ಲಿ ಕೊಡಿಗೇನಹಳ್ಳಿ, ಐ.ಡಿ.ಹಳ್ಳಿ, ಮಿಡಿಗೇಶಿ, ಕಸಬ, ದೊಡ್ಡೇರಿ 5 ಹೋಬಳಿಗಳಿಂದ ಸುಮಾರು 324 ಗ್ರಾಮಗಳನ್ನು ಹೊಂದಿದ್ದು 248 ಮತಗಟ್ಟೆಗಳಿದ್ದು ಒಟ್ಟು 193946 ಮತದಾರರಲ್ಲಿ 98152 ಗಂಡು, 95791 ಮಹಿಳಾ ಮತದಾರರು ಸೇರಿದಂತೆ 3 ಇತರೆ ಮತದಾರರನ್ನು ಕ್ಷೇತ್ರ ಹೊಂದಿದೆ. ಕಳೆದ ಬಾರಿಯ ನಡೆದ ಲೋಕ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಸಂಭಂಧಿಸಿದಂತೆ ಕಾಂಗ್ರೆಸ್-60923, ಬಿಜೆಪಿ-22385 ಜೆಡಿಎಸ್-38866, ಸಿಪಿಐಎಂ-1709, ಎಎಪಿ-1249, ನೋಟಾ- 1639, ಇತರೆ-3632, ಒಟ್ಟು -130403 ಮತಗಳು ತಾಲ್ಲೂಕಿನಲ್ಲಿ ಚಲಾವಣೆಯಾಗಿದ್ದವು.
ಕಾಂಗ್ರೆಸ್ ಅಭ್ಯರ್ಥಿ429635, ಬಿಜೆಪಿ-355394, ಜೆಡಿಎಸ್-258603, ಸಿಪಿಐಎಂ-10448, ಎಎಪಿ-8321, ನೋಟಾ-12933, ಇತರೆ-25401, ಒಟ್ಟು-1100735 ಮತಗಳು ಚಲಾವಣೆಯಾಗಿ ಅಂದಿಗೆ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು.
ಜಿಲ್ಲೆಯಲ್ಲಿಯೇ 10 ಬಾರಿ ಕೈ ಪಕ್ಷ ಜಯಬಾರಿಸಿತ್ತು ಆದರೆ ಈ ಬಾರಿ ಮೈತ್ರಿ ಧರ್ಮ ಪಾಲನೆಯ ಹೆಸರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಟ್ಟಿದ್ದರಿಂದ ಮಾಜಿ ಪ್ರಧಾನಿ ದೇವೇಗೌಡರು ಇಳಿವಯಸ್ಸಿನಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಂದ ಚುನಾವಣೆ ಎದುರಾಗಿದ್ದು ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾಧಿ ಮೇಲೆ ಜೆಡಿಎಸ್ ಚೆಲ್ಲಾಟವಾಡುತ್ತಿದೆ ಎಂದು ಅನೇಕ ಕಾರ್ಯಕರ್ತರ ಆಕ್ರೋಶವಾಗಿದ್ದು ಇನ್ನೂ ಕಲ್ಪತರು ನಾಡಿನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸರ್ವನಾಶವಾಗುವ ದಿನಗಳು ದೂರವಿಲ್ಲವೆಂಬುದು ಕಾರ್ಯಕರ್ತರ ಮಾತಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರವು ಹೆಚ್.ಡಿ.ದೇವೆಗೌಡ ಸ್ವರ್ಧೆಯಿಂದ ಬಾರಿ ಕೂತೂಹಲ ಕೆರಳಿಸಲಿದೆ ಎಂದು ಚುನಾವಣಾ ಪೂರ್ವದಲ್ಲಿ ಹೆಸರು ಮಾಡಿದ್ದು ಆದರೆ ಮೈತ್ರಿ ಅಭ್ಯರ್ಥಿಯಾಗಿರುವ ಇವರು ಗೊಂದಲದಲ್ಲೆ ಚುನಾವಣೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ.
ಪ್ರಸುತ್ಥ ತಾಲ್ಲೂಕಿನಲ್ಲಿ ಮೈತ್ರಿಯಿಂದ ಒಂದಾಗಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಪಕ್ಷದ ವರಿಷ್ಟರು ಹಾಗೂ ಮುಖಂಡರು ಇನ್ನಿಲ್ಲದಂತೆ ಕಾರ್ಯಕರ್ತರಿಗೆ ತಿಳುವಳಿಕೆ ನೀಡಿದ್ದರು ಇದನ್ನು ಒಪ್ಪುವ ಸ್ಥಿತಿಯಲ್ಲಿ ಕಾರ್ಯಕರ್ತರಿಲ್ಲ ಇದರ ಬೆನ್ನೆಲ್ಲೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮನವಲಿಸುವ ಯಾವ ಪ್ರಯತ್ನಗಳು ಜೆಡಿಎಸ್ ಪಕ್ಷದ ಮುಖಂಡರಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಮಾಡದೆ ಇರುವುದು ಮೈತ್ರಿಯ ಇನ್ನೋಂದು ಪಕ್ಷದ ಕಾರ್ಯಕರ್ತರನ್ನು ಕೆರಳುವಂತೆ ಮಾಡಿದೆ.
ಸ್ಥಳೀಯ ಶಾಸಕ ಎಂ.ವಿ.ವೀರಭದ್ರಯ್ಯನವರು ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರದ ಯಾವ ಗ್ರಾಮಕ್ಕೆ ಹೋದರು ಜನತೆ ನೀರಿನ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಮಹಾಪೂರವನ್ನೆ ಹರಿಸುತ್ತಿದ್ದು. ಮತ ಕೇಳಲು ಬಂದವರಿಗೆ ಹೆಚ್ಚಿನ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ವಿಧಾನ ಸಭೆ ಚುನಾವಣೆಯ ನಂತರ ಅಭಿವೃದ್ಧಿ ಕೆಲಸ ಕಾರ್ಯಗಳು ನಮ್ಮ ಗ್ರಾಮದಲ್ಲಿ ನಡೆದಿಲ್ಲವೆಂದು ಕಳೆದ ವರ್ಷ ನಾವುಗಳು ಒಮ್ಮೆ ಮಾಡಿದ ತಪ್ಪನ್ನೆ ಮತ್ತೊಮ್ಮೆ ಮಾಡಲು ನಾವುಗಳು ಸಿದ್ಧರಿಲ್ಲವೆಂದು ಕಡಾ ಖಂಡಿತಾವಾಗಿಯೇ ಹೇಳುತ್ತಿದ್ದಾರೆ. ಯುವ ಮತದಾರರಂತು ನನ್ನ ದೇಶ ನನ್ನ ಮತ ಎಂಬುವ ಉಮ್ಮಸ್ಸಿನಲ್ಲಿದ್ದು ಈ ಯುವ ಪೀಳೆಗೆಯನ್ನು ಮೈತ್ರಿ ಪರವಾಗಿ ಮತ ಚಲಾಯಿಸುವಂತೆ ಓಲೈಸುವ ಕೆಲಸಗಳು ನಡೆದಿಲ್ಲ.
ತಾಲ್ಲೂಕಿನಲ್ಲಿ ಕಾಂಗ್ರೆಸ್ 5 ಜಿಪಂ ಸದಸ್ಯರು 17 ತಾಪಂ, ಪುರಸಭೆಯಲ್ಲಿ 14 ಸದಸ್ಯರನ್ನು ಒಳಗೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಪಂ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರನ್ನು ಒಳಗೊಂಡಂತೆ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಯಾವ ಮುಖಂಡರುಗಳನ್ನು ಸ್ಥಳೀಯ ಶಾಸಕರು ಭೇಟಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರ ಕೋರದಿರುವುದು ಈ ಜನಪ್ರತಿನಿಧಿಗಳಲ್ಲಿ ಬೇಸರ ಮೂಡಿರುವುದರಿಂದ ಚುನಾವಣಾ ಪ್ರಚಾರಗಳಲ್ಲಿ ತಟಸ್ಥವಾಗಿ ಉಳಿದು ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕ ಆರೋಪಗಳು ಇವರ ವಿರುದ್ಧ ಕೇಳಿ ಬಂದಿವೆ.
ಬಿಜೆಪಿ ಪಕ್ಷದ ಜಿ.ಎಸ್. ಬಸವರಾಜು ಸ್ಥಳೀಯರಾಗಿರುವುದರಿಂದ ಜಿಲ್ಲಾ ಕ್ಷೇತ್ರವನ್ನು ಹತ್ತಿರದಿಂದ ಬಲ್ಲವರಾಗಿ ಮತದಾರರ ನಾಡಿ ಮಿಡಿತ ತಿಳಿದಿದ್ದಾರೆ ಹಳೆಯ ಕಾಂಗ್ರೆಸ್ ನವರ ನಂಟನ್ನು ಹೊಂದಿದ್ದು ನೇರಾ ಸ್ಪರ್ಧೆಯಲ್ಲಿದ್ದಾರೆ ಮಧುಗಿರಿ ಕ್ಷೇತ್ರ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂಲ ಕಾಂಗ್ರೆಸ್ಸಿಗರು ಮತ ಯಂತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದಿರುವುದರಿಂದ ಜೆಡಿಎಸ್ ಪಕ್ಷದವರ ಜೊತೆ ಆಗಿರುವ ಮೈತ್ರಿಯನ್ನು ವಿರೋಧಿಸುತ್ತಿರುವುದು ಈ ಚುನಾವಣೆಯಲ್ಲಿ ಗೋಚರವಾಗುತ್ತಿದೆ.ಮೈತ್ರಿ ಪಕ್ಷದ ಹಗ್ಗಾ ಜಗ್ಗಾಟಗಳು ಏನೇ ಇರಲಿ 5 ವರ್ಷಕ್ಕೊಮ್ಮೆ ನಮಗೆ ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಲು ಇಂದು ಸುವರ್ಣದಿನವಾಗಿದ್ದು ಮರೆಯದೆ ಮತದಾನ ಮಾಡಲು ಜನತೆ ಮುಂದಾಗಬೇಕಾಗಿದೆ.