ಹಾವೇರಿ :
ಬಹುಜನ ಸಮಾಜ ಪಕ್ಷದ ವತಿಯಿಂದ ಬಿಎಸ್ಪಿ ಅಭ್ಯರ್ಥಿ ಎ.ಎ ಪಠಾಣ ಅವರ ಪರವಾಗಿ ಮತಯಾಚನೆಯ ಬೃಹತ್ ರ್ಯಾಲಿಯು ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧೀ ಸರ್ಕಲ್,ಜೆ.ಪಿ ಸರ್ಕಲ್,ಸಿದ್ದಪ್ಪ ವೃತ್ತ, ಮೈಲಾರ ಮಹದೇವ ವೃತ್ತದವರಿಗೆ ಜರುಗಿತು.
ಮೈಲಾರ ಮಹದೇವ ವೃತ್ತದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಬಿಎಸ್ಪಿ ಪಕ್ಷ ರಾಜ್ಯ ಮುಖಂಡ ಮಾರಸಂದ್ರ ಮುನಿಯಪ್ಪ ಮಾತನಾಡಿ ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಸಮಗ್ರ ಅಭಿವೃದ್ಧಿಗಾಗಿ ಅಕ್ಕ ಮಾಯಾವತಿಯವರು ಪಣ ತೊಟ್ಟಿದ್ದಾರೆ. ದಲಿತರ ಹಿಂದುಳಿವರ ಹಾಗೂ ಎಲ್ಲ ವಗ್ದ ಜನರ ಹಿತ ಕಾಪಾಡಲು ಬಿಎಸ್ಪಿ ನಾಯಕಿ ಕ್ರೀಯಾಶೀಲವಾಗಿ ಶ್ರಮವಹಿಸುತ್ತಿದ್ದು,
ಈ ಚುನಾವಣೆಯಲ್ಲಿ ಹೆಚ್ಚಿನ ಎಂಪಿ ಗೆಲ್ಲುವ ಮೂಲಕ ಅಕ್ಕ ಮಾಯಾವತಿಯವರು ಪ್ರಧಾನಮಂತ್ರಿ ಆಗುವ ಅವಕಾಶ ದೊರೆಯಲಿದೆ. ಈ ಕ್ಷೇತ್ರದ ಬಿಎಸ್ಪಿ ಪಕ್ಷದ ಅಭ್ಯರ್ಥಿ ಎ,ಎ,ಪಠಾಣ ಅವರನ್ನು ಬೆಂಬಲಿಸಿ ಗೆಲ್ಲಿಸಲು ಕ್ಷೇತ್ರದ ಹಾವೇರಿ-ಗದಗ ಜಿಲ್ಲೆಗಳ ಪತದಾರರು ಮುಂದಾಗಬೇಕು ಎಂದು ಕರೆ ನೀಡಿದರು. ಪ್ರ.ಕಾ ಕೃಷ್ಣಮೂರ್ತಿ ಮಾತನಾಡಿ ಬಿಎಸ್ಪಿ ಪಕ್ಷ ದೇಶದ ಮೂರನೇ ಶಕ್ತಿಯಾಗಿ ಬೆಳೆಯಲಿದೆ.
ಎಲ್ಲ ವರ್ಗದ ಏಳಿಗೆ ಹಾಗೂ ದೇಶದ ಪ್ರಗತಿಗಾಗಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದರು. ಬಿಎಸ್ಪಿ ಪಕ್ಷದ ಅಭ್ಯರ್ಥಿ ಎ.ಎ ಪಠಾಣ ಹಾಗೂ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಈ ಕ್ಷೇತ್ರ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳಿಂದ ಅಭಿವೃದ್ಧಿ ಕಾಣದೇ ಕ್ಷೇತ್ರದ ಕಾಟಾಚಾರದ ಸಂಸದರಾಗಲು ಮುಂದಾಗುತ್ತಿದ್ದಾರೆ.
ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗಾಗಿ ಬಿಎಸ್ಪಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು. ಬಿಎಸ್ಪಿ ಪಕ್ಷ ಮುಖಂಡರಾದಶಿವಕುಮಾರ ತಳವಾರ. ವಿಜಯಕುಮಾರ ವಿರಕ್ತಮಠ .ಶಂಭುಲಿಂಗಯ್ಯ ಹನಗೋಡಿಮಠ.ಅಬ್ದುಲ್‍ಖಾದರ ಧಾರವಾಡ, ನೀಲಕಂಠಪ್ಪ ಗುಡಗೂರ, ಎಂ.ಕೆ ಮಖಬೂಲ್.ನಾಗರಾಜ ಅಂಗಡಿ.ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.