ದಾವಣಗೆರೆ:
ಭದ್ರಾ ನಾಲೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯೊಂದು ಉರುಳಿ ಬಿದ್ದಿರುವ ಘಟನೆ ಇಂದು ಬೆಳಗಿನ ಜಾವ ತಾಲ್ಲೂಕಿನ ಬಾಡಾ ಗ್ರಾಮದ ಬಳಿ ಸಂಭವಿಸಿದೆ.
ಧಾರವಾಡದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಶ್ರೀಸಿದ್ದಲಿಂಗೇಶ್ವರ ಟ್ರೇಡರ್ಸ್‍ನಿಂದ ಮೈಸೂರಿನ ಎಪಿಎಂಸಿಗೆ ಅಲಸಂದಿ ಮತ್ತು ಕಡಲೆ ಹೊಟ್ಟು ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಆಕ್ಸಲ್ ಬ್ಲೇಡ್ ಕಟ್ಟಾಗಿ ದಾವಣಗೆರೆ ತಾಲ್ಲೂಕಿನ ಬಾಡಾ ಗ್ರಾಮದ ಸಮೀಪದಲ್ಲಿರುವ ಭದ್ರಾ ನಾಲೆಯ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಉರುಳಿ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.
ಈ ಅವಘಡದಲ್ಲಿ ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೇರೆಯ ಲಾರಿಯಲ್ಲಿ ಅಲಸಂದಿ ಮತ್ತು ಕಡಲೆ ಹೊಟ್ಟು ಸಾಗಿಸಲಾಯಿತು.ಈ ಕುರಿತು ಸಂತೇಬೆನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ