ಮಾಧ್ಯಮ ಸಮಾಜದ ಪ್ರತಿಬಿಂಬ

0
117

ಹರಪನಹಳ್ಳಿ:

        ಸಮಾಜ ಮತ್ತು ಮಾಧ್ಯಮಕ್ಕೂ ಅವಿನಾಭಾವ ಸಂಬಂಧವಿದೆ. ಸಮಾಜದ ಮುಖ್ಯ ಪ್ರತಿನಿಧಿಯಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ ಎಂದು ಪತ್ರಕರ್ತ ಪ್ರಹ್ಲಾದಗೌಡ ಗೊಲ್ಲಗೌಡರ ಹೇಳಿದರು.

       ತಾಲ್ಲೂಕಿನ ಹರಕನಾಳು ಗ್ರಾಮದಲ್ಲಿ ಪಟ್ಟಣದ ಎಚ್.ಪಿ.ಎಸ್. ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿರುವ ಎನ್ನೆಸ್ಸೆಸ್ ವಾರ್ಷಿಕ ಶಿಬಿರದಲ್ಲಿ `ಸಮಾಜ ಮತ್ತು ಮಾಧ್ಯಮ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

       ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ. ಸಮಾಜದಲ್ಲಿ ಬೇರು ಬಿಟ್ಟಿರುವ ಸಮಸ್ಯೆಗಳು, ನೊಂದವರ ಪರ ಸುದ್ದಿ ಬಿತ್ತರಿಸುವ ಮೂಲಕ ಸಂಬಂಧಿಸಿದವರ ಕಣ್ತೆರೆಸುತ್ತವೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ಮಹತ್ತರ ಪಾತ್ರ ವಹಿಸಿದ್ದವು. ಮಾಧ್ಯಮ ರಂಗ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿವೆ ಎಂದರು. 

        ಆಧುನಿಕ ಜಗತ್ತಿನ ಹೊಸ ಹೊಸ ಆವಿಷ್ಕಾರಗಳು ಸಮೂಹ ಹಾಗೂ ಮುದ್ರಣ ಮಾಧ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಜನರಿಗೆ ಹಿಂದಿನಿಕ್ಕಿಂತಲೂ ಶೀಘ್ರಗತಿಯಲ್ಲಿ ಸುದ್ದಿ ತಲುಪುತ್ತಿವೆ. ಸೋಶಿಯಲ್ ಮೀಡಿಯಾ ಇಂದಿನ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ ಎಂದರು.

        ಪತ್ರಕರ್ತ ಸುರೇಶ್ ಮಂಡಕ್ಕಿ ಮಾತನಾಡಿ, ಸುದ್ದಿ ಮಹತ್ವ ಅದರ ಪ್ರಕಟಣೆಯ ನಂತರ ತಿಳಿಯುತ್ತದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳು ಬಹಳಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ಹಿಸುತ್ತವೆ. ಪತ್ರಿಕೋದ್ಯಮವನ್ನು ಅವಸರದ ಸಾಹಿತ್ಯ ಎಂದೂ ಕರೆಯಲಾಗುತ್ತದೆ ಎಂದು ಹೇಳಿದರು.

       ಪತ್ರಕರ್ತ ಮಂಜ್ಯಾನಾಯ್ಕ ಮಾತನಾಡಿ, ಮಾಧ್ಯಮ ನಿಂತ ನೀರಲ್ಲ. ಹರಿಯುವ ಜಲಧಾರೆ. ಸದಾ ಹೊಸತನದೊಂದಿಗೆ ಓದುಗರರ ಸಂತೃಪ್ತಿಗೊಳಿಸುವ ವಿಧಾನ ಮಾಧ್ಯಮ ರಂಗಕ್ಕಿದೆ. ಓದುಗರರ ಅಭಿರುಚಿಯಂತೆ ಸುದ್ದಿ ಪ್ರಕಟಿಸಿ ಮಾಧ್ಯಮ ಮುನ್ನಡೆಯುತ್ತಿದೆ ಎಂದು ಹೇಳಿದರು.

      ಗ್ರಾಮ ಪಂಚಾಯ್ತಿ ಸದಸ್ಯ ಪಂಪ್ಯಾ ನಾಯ್ಕ ಮಾತನಾಡಿದರು. ಕಾರ್ಯಮಾಧಿಕಾರಿ ಡಿ.ಸಿ.ಪ್ರದೀಪ್, ಸಹ ಶಿಬಿರಾಧಿಕಾರಿ ಮಂಜುನಾಥ್ ಮಾಳ್ಗಿ, ಉಪನ್ಯಾಸಕರಾದ ಅರುಣ, ಬಿ.ಓ.ಸುಧಾ ಸೇರಿದಂತೆ ಶೀಬಿರಾರ್ಥಿಗಳಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here