ತಿಪಟೂರು 

ಹಾಸನ ವೃತ್ತದ ಕಡೆಯಿಂದ ನಗರಕ್ಕೆ ಆಗಮಿಸುತ್ತಿದ್ದ ಲಾರಿಯೊಂದು ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ ಮರವೊಂದಕ್ಕೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ.ಶುಕ್ರವಾರ ಮುಂಜಾನೆ ಲಾರಿಯು (ಎ.ಪಿ03 ಟಿ.ಸಿ6580) ವೇಗವಾಗಿಯೋ, ಅಥವಾ ಚಾಲಕ ಇನ್ನೂ ನಿದ್ದೆ ಮಂಪರಿನಲ್ಲಿದ್ದೋ ಸರ್ಕಾರಿ ಆಸ್ಪತ್ರೆಯ ಮುಂಭಾಗವಿರುವ ಹಂಪ್‍ಗಳನ್ನು ನೋಡದೆ ವೇಗವಾಗಿ ಬಂದಿರುತ್ತಾನೆ. ಪರಿಣಾಮವಾಗಿ ಲಾರಿಯು ಚಾಲಕನ ನಿಯಂತ್ರಣವನ್ನು ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








