ಮಿಡಿಗೇಶಿ
ಮಿಡಿಗೇಶಿ ಬಸ್ ನಿಲ್ದಾಣದಲ್ಲಿ ಅ.18 ರ ರಾತ್ರಿ ಮಧುಗಿರಿ ಕಡೆಯಿಂದ ಪಾವಗಡ ಕಡೆಗೆ 250 ಮೂಟೆ ಅಡಕೆ ಹೊತ್ತೊಯ್ಯುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಒಡೆದಿರುವ ಬಗ್ಗೆ ವರದಿಯಾಗಿದೆ. ಚಾಲಕನಿಗೆ ಹಾಗೂ ಕ್ಲೀನರ್‍ಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮಧುಗಿರಿಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಿಡಿಗೇಶಿ ಪೋಲೀಸ್ ಠಾಣೆಯ ಮುಖ್ಯ ಪೇದೆ ಗೋವಿಂದರಾಜು ಹಾಗೂ ಸಿಬ್ಬಂದಿ ರಾತ್ರಿ ಪಹರೆಯಲ್ಲಿದ್ದು, ಕೂಡಲೆ ಗಾಯಾಳುಗಳಿಗೆ ರಕ್ಷಣೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಅಪಘಾತಕ್ಕೀಡಾದ ಸಮೀಪದ ಮನೆಯವರು ಸಹ ಗಾಯಾಳುಗಳನ್ನು ಸತ್ಕರಿಸಿದ್ದಾರೆ. ಘಟನೆ ಬಗ್ಗೆ ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ