ಬಳ್ಳಾರಿ
ರಾಜ್ಯದ ಸಮ್ಮಿಶ್ರ ಸರ್ಕಾರ ಬಜೆಟ್ ಪುಸ್ತಕ ನೀಡದೆ ಸಾಂಪ್ರದಾಯಿಕ ವ್ಯವಸ್ಥೆ ಯನ್ನು ಗಾಳಿಗೆ ತೂರಿ ಸಂಖ್ಯಾ ಬಲ ಇಲ್ಲದ ಬಜೆಟ ನ್ನು ಮಂಡಿಸಿದೆ ಎಂದು ಶಾಸಕ ಬಿ ಶ್ರೀ ರಾಮುಲು ಆರೋಪಿಸಿ ಲೇವಡಿ ಮಾಡಿದರು
ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರು ಕುತಂತ್ರದಿಂದ ರಾಜಕಾರಣ ಮಾಡಲು ಹೊರಟಿದ್ದಾರೆ,ಏಕೆಂದರೆ ಸನ್ಮಾನ್ಯ ಯಡಿಯೂರಪ್ಪ ನವರ ನಕಲಿ ಆಡಿಯೋ ದ್ವನಿ ಬಿಡುಗಡೆ ಮಾಡಿ ಕುರ್ಚಿ ಉಳಿಸಿಕೊಳ್ಳಲು ಈ ರೀತಿ ರಾಜಕೀಯ ಷಡ್ಯಂತರ ಮಾಡಿಕೊಂಡು ಪ್ರಜಾಪ್ರಭುತ್ವದ ವ್ಯವಸ್ಥೆ ಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು,ಯಡಿಯೂರಪ್ಪ ನವರು 40 ವರ್ಷಗಳ ಕಾಲ ಸುದೀರ್ಘ ರಾಜಕೀಯ ಹೊರಟ ಮಾಡಿ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ ಎಂಬುದನ್ನು ತಿಳಿದು ಮಾತನಾಡಬೇಕು ಅದು ಅವರ ದ್ವನಿ ಅಲ್ಲ ಅದು ಅಲ್ಲದೆ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಬಳಸಿಕೊಂಡರೆ ಇದಕ್ಕೆ ಮಾನ್ಯತೆ ಸಿಗುತ್ತೆ ಎಂಬುದು ತಿಳಿದು ಕುಮಾರ್ ಸ್ವಾಮಿ
ಈ ರೀತಿ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ದೃಷ್ಟಿಯಿಂದ ನೇರವಾಗಿ ರಾಜಕೀಯ ಮಾಡದೆ ಅಡ್ಡ ದಾರಿಯಲ್ಲಿ ನಡೆಯುವ ಮೂಲಕ ರಾಜ್ಯಭಾರ ಮಾಡುತ್ತಿದ್ದಾರೆ,ಕುಮಾರ್ ಸ್ವಾಮಿ ನಾನು ಕ್ಲರ್ಕ್ ಎಂದು ಹೇಳುತ್ತಾರೆ,35 ಸೀಟುಗಳನ್ನು ಗೆದ್ದಿರೋರು ಇನ್ನೇನು ಕ್ಲರ್ಕ್ ಅಲ್ಲದೆ ಡಿಸಿ ಹುದ್ದೆ ಕೊಡತರಾ, ಪ್ರಶ್ನೆಸಿದರು,
ಇವರು ತಮ್ಮ ತಂದೆಯ ಕಾಲದಿಂದಲೂ ಪ್ರತಿಯೊಬ್ಬರಿಗೂ ನೋವನ್ನು ಕೊಡದರಲ್ಲಿ ರಾಜಕೀಯ ಮಾಡಿರೋದು,ಅಂದಿನ ಜೆ ಎಚ್ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ ಅಂತಹ ನಿಷ್ಠಾವಂತ ರಾಜಕೀಯ ಕುಟುಂಬಗಳಿಗೆ ಕಿರುಕುಳ ಕೊಡುತ್ತಿದ್ದ ವಿಷಯ ರಾಜ್ಯದ ಜನತೆಗೆ ಗೊತ್ತಿದ್ದ ಸಂಗತಿ,ಹಾಗೆಯೆ ಕುಮಾರ್ ಸ್ವಾಮಿ ರಾಜು ಗೌಡ ನನ್ನು ಎಮ್‍ಎಲ್ಸಿ ಮಾಡಲು 25 ಕೋಟಿ ಬೇಡಿಕೆ ಇಟ್ಟಿಲ್ವಾ,ಇವರು ಎಂದು ಪ್ರತಿ ಉತ್ತರ ನೀಡಿದರು,
ಕಾಂಗ್ರೆಸ್ ಗೆ ಗಂಡ ಇಲ್ಲ ಅದಕ್ಕಾಗಿ ಒಲ್ಲದ ಮನಸ್ಸಿನಿಂದ ಸಂಸಾರ ನಡೆಸುತ್ತಿದ್ದಾರೆ ಎಂದು ನಗೆ ಚಟಾಕಿ ಬೀರಿದರು, ಪಂಚತಾರಾ ಹೋಟೆಲ್ ನಲ್ಲಿ ಕುಳಿತು ಆಡಿಯೋ ವೀಡಿಯೋ ರೆಕಾರ್ಡಿಂಗ್ ಮಾಡುತ್ತ ಕಾಲಕಳೆದಂತೆ ಕಾಣುತ್ತಿದೆ, ಇದರಿಂದಾದ ಕರ್ಚ್ ವೆಚ್ಚವನ್ನು ಗುತ್ತಿಗೆ ದಾರರು ಭರಿಸುತ್ತಿದ್ದಾರೆ,ಇದಕ್ಕೆಲ್ಲ ನಮ್ಮಲ್ಲಿ ದಾಖಲೆಗಳು ಇವೆ ಎಂದು ಮಾಹಿತಿ ಕೊಟ್ಟರು,ಎಸ್ಸಿ ಎಸ್ಟಿ ಜನರನ್ನು ಮರೆತು ಹಾಗೂ ಉತ್ತರ ಕರ್ನಾಟಕ ಭಾಗದ ಮೇಲೆ ಮಲತಾಯಿ ಧೋರಣೆ ಹೊಂದಿದ್ದ ಇವರು ಬಜೆಟ್ ವಿಷಯದಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಅಜೀಜ್ ಹಾಗೂ ಬಿಜೆಪಿ ಮುಖಂಡರು ಇದ್ದರು