ಚಿತ್ರದುರ್ಗ:
ಹಿರಿಯೂರು ತಾಲೂಕಿನ ಆಲೂರು ಗ್ರಾಮದಲ್ಲಿ ಭಗೀರಥ ಯುವಕ ಸಂಘದಿಂದ 9 ನೇ ಬಾರಿಗೆ ಭಗೀರಥ ಜಯಂತಿಯನ್ನು ಶನಿವಾರ ಆಚರಿಸಲಾಯಿತು.ಪೂರ್ಣಕುಂಭಮೇಳ ಹಾಗೂ ಕಳಸದೊಂದಿಗೆ ಗ್ರಾಮದ ಬೀದಿಗಳಲ್ಲಿ ಮರೆವಣಿಗೆ ನಡೆಸಲಾಯಿತು.
ಗೋರಕ್ಷಕ ಶಿವುಉಪ್ಪಾರ್ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿ ನಂತರ ಗೋರಕ್ಷಕ ಶಿವುಉಪ್ಪಾರ್‍ನನ್ನು ಹತ್ಯೆಗೈದವರನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಉಪ್ಪಾರ ಸಮಾಜದ ಮುಖಂಡರುಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಭಗೀರಥ ಯುವಕ ಸಂಘದ ಅಧ್ಯಕ್ಷ ರಾಮಚಂದ್ರಪ್ಪ, ಗೌರವಾಧ್ಯಕ್ಷ ಆರ್.ಕನಕದಾಸ್, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಆರ್.ಮೂರ್ತಿ, ತಾಲೂಕು ಅಧ್ಯಕ್ಷ ನಿಂಗರಾಜ್, ಉಪ್ಪಾರ ಸಮಾಜದ ಮುಖಂಡರುಗಳಾದ ವೀರೇಶ್, ಮಹೇಶ್, ಭೀಮರಾಜ್, ಹಿರಿಯೂರು ಭಜರಂಗದಳದ ಸಂಚಾಲಕ ಶ್ರೀನಿವಾಸ್ ಸೇರಿದಂತೆ ಮೆರವಣಿಗೆಯಲ್ಲಿ ಕುಂಭ ಹೊತ್ತ ನೂರಾರು ಮಹಿಳೆಯರು ಭಾಗವಹಿಸಿದ್ದರು.