ಮಾದಿಗ ಯುವ ಸೇನೆ ಕಾರ್ಯಕರ್ತರ ಪ್ರತಿಭಟನೆ

ಚಿತ್ರದುರ್ಗ

      ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಜಿಲ್ಲೆಯ ಹೊರಗಿನವರಿಗೆ ಟೀಕೇಟ್ ನೀಡದೇ ಸ್ಥಳಿಯರಿಗೆ ಟೀಕೇಟ್ ನೀಡುವಂತೆ ಆಗ್ರಹಿಸಿ ರಾಜ್ಯ ಮಾದಿಗ ಯುವಸೇನೆ ಪ್ರತಿಭಟನೆಯನ್ನು ನಡೆಸಿತು.ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಸ್ಥಳಿಯರಿಗಿಂತ ಹೊರಗಿನವರು ಹೆಚ್ಚಾಗಿ ಆಡಳಿತ ನಡೆಸಿದ್ದಾರೆ ಇದರಿಂದ ಸ್ಥಳಿಯ ಸಮಸ್ಯೆಗಳು ಬಗೆಹರಿಯದೆ ಹಾಗೇಯೇ ಉಳಿದಿದೆ. ಚುನಾವಣೆಗೆ ಮುಂಚೆ ಬರುವ ಹೊರಗಿನವರಿಗೆ ಜಿಲ್ಲೆಯ ಸಮಸ್ಯೆ ಗೊತ್ತಿಲ್ಲ, ಹಣವನ್ನು ಹಾಕುತ್ತಾರೆ ಮತಗಳನ್ನು ಖರೀದಿಸಿ ಗೆಲುವು ಸಾಧಿಸಿ ದೆಹಲಿಗೆ ಹಾರುತ್ತಾರೆ ನಂತರ ಯಾವುದೇ ಕಾರ್ಯಕ್ರಮಕ್ಕೆ ಬರುತ್ತಾರೆ ಮತದಾರಿಗೆ ಸಿಗುವುದು ಕಡಿಮೆ ಇನ್ನೂ ಸಮಸ್ಯೆಗಳ ಬಗ್ಗೆ ಗಮನ ನೀಡುವುದಿಲ್ಲ ಎಂದು ಯುವಸೇನೆಯ ಮುಖಂಡರು ಆರೋಪಿಸಿದ್ದಾರೆ.

       ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸ್ಥಳಿಯರಿಗೆ ಟೀಕೇಟ್ ನೀಡಿದರೆ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಮುಂದಾಗುತ್ತಾರೆ ಅಲ್ಲದೆ ಮತದಾರರಿಗೆ ಶೀಘ್ರವಾಗಿ ಸಿಗುತ್ತಾರೆ ಅವರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಇದರಿಂದ ಸಾಧ್ಯವಾದಷ್ಟು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಥಳಿಯರಿಗೆ ಟೀಕೇಟ್ ನೀಡುವಂತೆ ವಿವಿಧ ರಾಜಕೀತ ಪಕ್ಷದ ಮುಖಂಡರನ್ನು ಆಗ್ರಹಿಸಿದ್ದಾರೆ.

       ಜಿಲ್ಲೆಯಲ್ಲಿನ ಮತದಾರರಲ್ಲಿ ಮಾದಿಗ ಜನಾಂಗ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದೆ, ಇದರಿಂದ ಈ ಬಾರಿ ಮಾದಿಗ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಟಿಕೇಟ್ ನೀಡಬೇಕಿದೆ, ಅದರಲ್ಲೂ ಸ್ಥಳಿಯರಿಗೆ ಆದ್ಯತೆಯನ್ನು ನೀಡುವುದರ ಮೂಲಕ ಟೀಕೇಟ್ ಹಂಚಿಕೆಯನ್ನು ಮಾಡಬೇಕಿದೆ ಎಂದು ಒತ್ತಾಯಿಸಿದ್ದು ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯದ ಮೇಲಿದೆ ಎಂದು ಹೇಳುತ್ತಾರೆ ಆದರೆ ಟೀಕೆಟ್ ನೀಡುವಲ್ಲಿ ಮಾತ್ರ ಅದನ್ನು ಮರೆಯುತ್ತಾರೆ.ವಿಧಾನ ಸಭಾ ಚುನಾವಣೆಯಲ್ಲಿ ಮಾದಿಗರನ್ನು ಮರೆತ್ತಿದ್ದರಿಂದಲೇ ಜಿಲ್ಲೆಯ 5 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಸೋಲನ್ನು ಕಾಣಬೇಕಾಯಿತು ಎಂದು ತಿಳಿಸಿದರು.

       ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಾದಿಗ ಯುವಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಲ್ಲಿ ಟೈರ್ ಗೆ ಬೆಂಕಿಯನ್ನು ಹಚ್ಚುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

        ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜಪ್ಪ, ಗೌರವಾಧ್ಯಕ್ಷ ನಾಗೇಂದ್ರಬಾಬು, ಗಂಗಾಧರಯ್ಯ, ರುದ್ರಮುನಿ, ಶಂಕರಪ್ಪ, ಮಹಾಂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link