ಮಡಿವಾಳ ಮಾಚಿದೇವ ಜಯಂತೋತ್ಸವ

ಹರಪನಹಳ್ಳಿ:

        ಕಣ್ಣೀರಿನಿಂದಲ್ಲ ಪರಿಶ್ರಮದ ಬೆವರಿನಿಂದ ಮಾತ್ರ ಚರಿತ್ರೆ ಸೃಷ್ಠಿಸಹುದು. ತುಳಿತಕ್ಕೊಳಗಾದ ಕೆಳ ಸಮುದಾಯಗಳು ಉಘ್ರ ಹೋರಾಟ ಮಾಡಿದರೆ ಮಾತ್ರ ಮೀಸಲಾತಿ ಸಿಗಲು ಸಾದ್ಯ ಎಂದು ಯಡಿಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಸಿ.ಎಂ.ಅಜ್ಜಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

           ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿನ ಸಾಮಥ್ರ್ಯಸೌಧದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು. ಅರಸ ಮೇಲಲ್ಲ, ಅಗಸ ಕೀಳಲ್ಲ. ಜಾತಿ ಬೇಧ ತೊರದು ಕಾಯಕನಿಷ್ಟೆಯಿಂದ ದುಡಿವವನಿಗೆ ದುಃಖವಿಲ್ಲ ಎಂದು 512 ವಚನಗಳ ಸೃಷ್ಟಿಸಿ ಅಸ್ಪಶ್ಯತೆಯ ವಿರುದ್ದ ಕಲ್ಯಾಣದ ಕ್ರಾಂತಿಯುಗದ ಕಹಳೆ ಊದಿದ್ದ ಬಸವಣ್ಣನವರ ನೆಚ್ಚಿನ ಶಿಷ್ಯನಾಗಿದ್ದ ಮಾಚಿದೇವ ಮಹಾನ್ ಶರಣ ಎಂದರು.

         ಜಿಲ್ಲಾ ಪಂಚಾಯಿತಿ ಸದಸ್ಯೆ ಸುವರ್ಣ ಆರುಂಡಿ ನಾಗರಾಜ್ ಮಾತನಾಡಿ. ಜಾತಿಯ ಎಲ್ಲೆ ಮೀರಿದವರು ಶರಣರು. ಸಮಾಜದ ಏಳಿಗೆಗೆ ಸಂಘಟನಾತ್ಮಕ ಹೋರಾಟದ ಕೊರತೆಯಿದೆ. ಮಡಿವಾಳರು ಬರೀ ಬಟ್ಟೆ ಶುದ್ದಿ ಮಾಡುವವರಲ್ಲ. ಮನಸುಗಳನ್ನು ಶುದ್ದಿಮಾಡುವವರು ಎಂದರು.

          ತಾಲೂಕು ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷ್ ಕುಮಾರ್ ಮಾತನಾಡಿ. ಪ್ರತೀ ಬಾರಿಯೂ ಶರಣರ ಜಯಂತಿಗಳಿಗೆ ಅಪಮಾನ ಮಾಡುತ್ತಿದ್ದೇವೆ. ಕಾರ್ಯಕ್ರಮಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ತಾಲೂಕು ಆಡಳಿತದಿಂದ ಅಧಿಕಾರಿಗಳು ಕೆಲ ಜನಪ್ರತಿನಿಧಿಗಳನ್ನು ಬಿಟ್ಟರೆ ಆಸನಗಳು ಖಾಲಿಯಾಗಿರುವುದು ಬೇಸರ ತರುತ್ತದೆ. ಸರ್ಕಾರ ಒಂದೇ ವೇದಿಕೆಯಲ್ಲಿ ಎಲ್ಲಾ ಶರಣರ ಜಯಂತಿ ಆಚರಣೆಗೆ ನಿರ್ಧಾರ ಮಾಡಬೇಕಿದೆ. ಪ್ರತೀ ಕಾರ್ಯಕ್ರಮಗಳಿಗೂ ತಪ್ಪದೇ ಎಲ್ಲರಿಗಿಂತ ಮುಂಚಿತವಾಗಿಯೇ ಹಾಜರಿರುವ ತಾಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ವವ್ವನಹಳ್ಳಿ ಭೀಮಪ್ಪನವರ ಇಳೀ ವಯಸ್ಸಿನಲ್ಲಿಯೂ ಕುಗ್ಗದ ಅವರ ಆಸಕ್ತಿ ಯುವಕರಿಗೆ ಮಾದರಿಯಾಗಿದೆ ಎಂದರು.

          ಸಮಾಜದ ಅಧ್ಯಕ್ಷ ಎಂ.ಉಮಾಪತಿ ಮಾತನಾಡಿ. ಶರಣರ ಜಯಂತಿಯ ಪೂರ್ವಭಾವಿ ಸಭೆಯಲ್ಲೇ ನಾವು ಜಯಂತೋತ್ಸವವನ್ನು ಶಾಲೆಗಳಲ್ಲಿ ಆಚರಿಸುವಂತೆ ತಿಳಿಸದೆ ತಪ್ಪು ಮಾಡಿದ್ದೇವೆ. ಶರಣರು ಸಂಬಂದಪಟ್ಟ ಸಮುದಾಯಗಳಿಗೆ ಮಾತ್ರ ಶರಣರಲ್ಲ ಸರ್ವ ಜನಾಂಗದ ಶರಣರಾಗಿದ್ದಾರೆ. ಇವರ ಜಯಂತಿಗಳು ಸಪ್ಪೆಯಾಗುವುದು ವಿಷಾಧನೀಯವಾಗಿದೆ. ಶೋಚನೀಯ, ರಾಜಕೀಯದಲ್ಲೂ ಅವಕಾಶ ವಂಚಿತ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಮಾಜದ ಮಕ್ಕಳ ಉನ್ನತ ವ್ಯಾಸಾಂಗಕ್ಕಾದರೂ ಸರ್ಕಾರ ಅನುವು ಮಾಡಿಕೊಡಬೇಕಿದೆ ಎಂದರು.

         ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಡಾ.ಮಂಜುನಾಥ್ ಉತ್ತಂಗಿ, ಸಿದ್ದಪ್ಪ, ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ್, ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಪುರಸಭೆ ಉಪಾಧ್ಯಕ್ಷ ಕೆ.ಸತ್ಯನಾರಾಯಣ, ಮುಖಂಡರಾದ ಹಾರಾಳ್ ಅಶೋಕ್, ಅಂಜೀನಪ್ಪ, ಮಜ್ಜಿಗೇರಿ ಬಸಣ್ಣ, ಉಪ ತಹಸಿಲ್ದಾರ್ ಪಾತೀಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಪೂಜಾರ್, ತಾಪಂ ಇಓ ಮಮತಾ ಹೊಸಗೌಡರ್ ಹಾಗೂ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link