ಮಡಿವಾಳ ಸಮಾಜ ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಒತ್ತಾಯ

ಹಿರಿಯೂರು :

       ರಾಜ್ಯದಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂಬುದಾಗಿ ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.ನಗರದ ಗುರುಭವನದಲ್ಲಿ ತಾಲ್ಲೂಕು ಮಡಿವಾಳ ಸಮಾಜದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಹುತಾತ್ಮ ವೀರಯೋಧ ಗುರು.ಎಚ್.ಮಡಿವಾಳ ಅವರಿಗೆ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

       ಮಡಿವಾಳರಿಗೆ ರಾಜಕೀಯ ಪ್ರಾತಿನಿಧ್ಯವಿಲ್ಲ. ಸಂಘಟನೆಯ ಕೊರತೆಯಿಂದ ಸಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. ನಾವೆಲ್ಲರೂ ಸಣ್ಣಪುಟ್ಟ ವೈಮನಸ್ಸನ್ನು ಬದಿಗಿಟ್ಟು ಸಂಘಟಿತರಾದಲ್ಲಿ ಸರ್ಕಾರ ನಮ್ಮ ಮಾತು ಕೇಳುತ್ತದೆ. ಸೌಲಭ್ಯಗಳು ತಂತಾನೇ ಬರುತ್ತವೆ ಎಂಬುದನ್ನು ನೆನಪಿನಲ್ಲಿಡಿ ಎಂಬುದಾಗಿ ಸ್ವಾಮೀಜಿ ಸೂಚಿಸಿದರು.

        ಪ್ರಾಧ್ಯಾಪಕ ಡಾ.ವಿ.ಬಸವರಾಜು, ಸುಮಾರು 12ನೇ ಶತಮಾನದಲ್ಲಿಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರು ಉತ್ತಮ ಸ್ಥಾನಮಾನವನ್ನು ಪಡೆದಿದ್ದರು. ಅಲ್ಲದೆ ವಚನ ಸಾಹಿತ್ಯದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು.

        ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ಸಿದ್ದೇಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಮಂಗಲ ಹರಳಯ್ಯ ಪೀಠದ ಬಸವಹರಳಯ್ಯ ಸ್ವಾಮೀಜಿ, ಡಯಟ್‍ನ ಹಿರಿಯ ಉಪನ್ಯಾಸಕ ಡಿ.ಹನುಮಂತರಾಯ, ಜಿ.ಪಂ. ಸದಸ್ಯರುಗಳಾದ ಶಶಿಕಲಾ ಸುರೇಶ್‍ಬಾಬು , ಸಿ.ಬಿ.ಪಾಪಣ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಪ್ರಸಾದಗೌಡ, ಟಿ.ನಿಂಗಪ್ಪ, ವಿ.ರಂಗಸ್ವಾಮಿ, ಎಂ.ಎಲ್.ತಿಪ್ಪೇಸ್ವಾಮಿ, ಎಸ್.ವಿ.ಸಿದ್ದಪ್ಪ, ಪಿ.ತಿಪ್ಪೇಸ್ವಾಮಿ, ಆರ್.ಎನ್.ಮೂರ್ತಿ, ಟಿ.ಗೋವರ್ಧನ್, ಬಬ್ಬೂರು ರವಿ, ಎನ್.ತಿಪ್ಪೇಸ್ವಾಮಿ, ಸದಾಶಿವ, ಲೋಕೇಶ್, ಡಿ.ತಿಪ್ಪೇಸ್ವಾಮಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

        ಆರಂಭದಲ್ಲಿ ತಾಲ್ಲೂಕು ಕಛೇರಿ ಮುಂಭಾಗದಿಂದ ಹುತಾತ್ಮ ವೀರಯೋಧ ಎಚ್.ಗುರುಮಡಿವಾಳ ಅವರ ಭಾವಚಿತ್ರವನ್ನು ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಗೆ ಸಂಸದರಾದ ಬಿ.ಎನ್.ಚಂದ್ರಪ್ಪ ಚಾಲನೆ ನೀಡಿದರು. ಶಾಸಕ ಟಿ.ರಘುಮೂರ್ತಿ ಇತರೆ ಗಣ್ಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link