ಹೊಳಲ್ಕೆರೆಯ ಸಮಗ್ರ ಅಭಿವೃದ್ದಿಗೆ ಬದ್ಧತೆ ಮುಖ್ಯ ಶ್ರೀ ಶಾಂತವೀರ ಮಹಾಸ್ವಾಮೀಜಿ ಅಭಿಮತ

0
7

ಹೊಳಲ್ಕೆರೆ:

     ಹೊಳಲ್ಕೆರೆ ತಾಲ್ಲುಕಿನಲ್ಲಿ ನೀರಾವರಿ, ಕೃಷಿ, ಕೆರೆ ಅಬಿವೃಧ್ದಿ ಕೈಗಾರಿಕೆಗಳು ಸೇರಿ ಮಾನವ ಸಂಪನ್ಮೂಲ ಅಭಿವೃಧ್ದಿ ಆದಾಗ ಮಾತ್ರ ಹೋಳಲ್ಕೆರೆ ಸಮಗ್ರ ಅಭಿವೃಧ್ದಿ ಸಾಧ್ಯ ಎಂದು ಹೊಸದುರ್ಗ ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.

      ಹೊಳಲ್ಕೆರೆ ತಾ.ಪಂ ಸಭಾಂಗಣದಲ್ಲಿ ಚಿತ್ರದುರ್ಗದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಹೊಳಲ್ಕೆರೆ ಕಾರ್ಯನಿರತ ಪತ್ರ ಕರ್ತರ ಸಂಘದ ವತಿಯಿಂದ ಹೊಳಲ್ಕೆರೆ ತಾಲ್ಲುಕಿನ ಸಮಗ್ರ ಅಭಿವೃದ್ದಿಯಲ್ಲಿ ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ ಕುರಿತು ವಿಚಾರ ಸಂಕೀರ್ಣವನ್ನು ಚಾಲನೆ ನೀಡಿ ಮಾತನಾಡಿದರು.

     ನೈಸರ್ಗಿಕ ಸಂಪನ್ಮೂಲ ತಾಲ್ಲುಕಿನಲ್ಲಿ ಸಾಕಷ್ಟು ಇದ್ದರು ಸಮರ್ಪಕ ಬಳಕೆಯಲ್ಲಿ ಕಾನೂನಾತ್ಮಕ ತೊಡಕುಗಳಿವೆ. ಅವುಗಳನ್ನು ಸರಿಪಡಿಸಿಕೊಂಡಾಗ ಮಾತ್ರ ಅಭಿವೃಧ್ದಿ ಕಂಡುಕೊಳ್ಳಲು ಸಾಧ್ಯವೆಂದರು.

     ಭದ್ರಾ ಮೇಲ್ದಂಡೆ ಯೋಜನೆಯ ನೀರು ಹೊಳಲ್ಕೆರೆ ತಾಲ್ಲುಕಿಗೆ ಹರಿದು ಬರುತ್ತದೆ ಎಂಬ ಕನಸು ಕಷ್ಟ ಸಾಧ್ಯ. ಕಾನೂನಾತ್ಮಕ ತೊಡಕುಗಳಿದ್ದು ಭದ್ರಾ ಮೇಲ್ದಂಡೆ ಯೋಜನೆಯ ನೀರು ರೈತರ ಜಮೀನುಗಳಿಗೆ ಹರಿಯ ಬೇಕಾದರೆ ಪ್ರತಿ ತಾಲ್ಲುಕಿನಲ್ಲಿ ಜಮೀನುಗಳಿಗೆ ಕಾಲುವೆಗಳನ್ನು ಮೊದಲು ಮಾಡಬೇಕಾಗಿದ್ದು ಆ ಕೆಲಸ ಇನ್ನು ಸಹ ಆಗಿಲ್ಲ ಆದರೆ ರಾಜಕಾರಣಿಗಳು ಇನ್ನೇನು ಡಿಸೆಂಬರೂ ಮಾರ್ಚ್ ತಿಂಗಳುಗಳಲ್ಲಿ ನೀರು ಹರಿದು ಬರುತ್ತೆ ಎಂದು ಆಶುವಾಸನೆ ನೀಡುತ್ತಲೆ ಇದ್ದಾರೆ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

     ಹೊಳಲ್ಕೆರೆ ತಾಲ್ಲುಕಿನ ಸಮಗ್ರ ಅಭಿವೃಧ್ದಿಯ ಬಗ್ಗೆ ಚಿಂತನೆ ನಡೆಸಿರುವ ಪತ್ರಕರ್ತರ ಸಂಘಟನೆ ಕೆಲಸ ಶ್ಲಾಘನೀಯವಾದುದ್ದು ಎಂದು ಹೇಳಿದರು.

     ಹೊಳಲ್ಕೆರೆ ಪತ್ರಕರ್ತ ಕೆ.ಬಿ.ಬಸವರಾಜ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಹೊಳಲ್ಕೆರೆ ತಾಲ್ಲುಕು ಸಮಗ್ರ ಅಭಿವೃಧ್ದಿಯಾಗುವಲ್ಲಿ ವಂಚಿಸಲ್ಪಟ್ಟಿದೆ ಎಂದು ಹೇಳಿದರು. ಆದರೆ ಮೀಸಲು ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಾಗಿನಿಂದ ಅಲ್ಪ ಪರಮಾಣದಲ್ಲಿ ಅಭಿವೃಧ್ದಿಯಾಗುತ್ತಾ ಮುಂನಡೆದುದ್ದು ಮತ್ತಷ್ಟು ಅಭಿವೃಧ್ದಿಯ ನೀರೀಕ್ಷೆಯಲ್ಲಿ ಹೊಳಲ್ಕೆರೆ ಜನರು ಇದ್ದಾರೆ ಎಂದು ಹೇಳಿದ್ದಾರೆ.

      ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ ಹೊಳಲ್ಕೆರೆ ತಾಲ್ಲುಕಿನಲ್ಲಿ ಗಣಿಗಾರಿಕೆ, ಹೈನುಗಾರಿಕೆ, ಗುಡಿ ಕೈಗಾರಿಕೆಗಳನ್ನು ಮಾಡಲು ವಿಫಲ ಅವಕಾಶಗಳಿದ್ದು ಆ ನಿಟ್ಟಿನಲ್ಲಿ ಸರ್ಕಾರ ಮತ್ತು ರಾಜಕಾರಣಿಗಳು ಚಿಂತಿಸಬೇಕಾಗಿದೆ ಎಂದರು.

      ಅಭಿವೃದ್ದಿ ಎಂದರೆ ರಸ್ತೆ, ಚರಂಡಿ, ವಿದ್ಯುತ್, ದ್ವೀಪ, ಅಷ್ಟೇ ಸಾಲದು ಪ್ರತಿಯೊಬ್ಬ ವಿದ್ಯಾವಂತ ನಿರುದ್ಯೋಗಿಗೆ ಉದ್ಯೋಗ ಭರವಸೆ ಸಿಕ್ಕಾಗ ಮಾತ್ರ ಅಭಿವೃದ್ದಿ ಕಂಡುಕೊಳ್ಳಲು ಸಾಧ್ಯೆಂದರು.

      ಕಾರ್ಯ ನಿರತ ಪತ್ರಕರ್ತರ ಸಂಘಟನೆಯಿಂದ ರೂಪಿಸಲಾಗಿರುವ ಸಂವಾದ ಕರ್ಯಕ್ರಮವು ತಾಲ್ಲುಕಿನ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ವಿನಹ ಪತ್ರಕರ್ತರ ಹಿತಾಸಕ್ತಿಗಾಗಿ ಅಗಾ ಆದ್ದರಿಂದ, ವಿಚಾರ ಸಂಕೀರ್ಣಗಳು ಪತ್ರಕರ್ತರ ಸಂಘಟನೆ ಹೆಚ್ಚು ಹೆಚ್ಚು ನಡೆಯಬೇಕೆಂದು ಸಲಹೆ ನೀಡಿದರು.

      ಇದೇ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಈಚಘಟ್ಟ ಸಿದ್ದವೀರಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಬುರಹಾನ್ ಬೇಗ್, ವಕೀಲ ಬಿ.ಎಸ್.ಪ್ರಭಾಕರ್ ಮಾತನಾಡಿದರು.

     ವೇದಿಕೆಯಲ್ಲಿ ತಾಲ್ಲುಕು ಪಂಚಾಯಿತಿ ಅಧ್ಯಕ್ಷೆ ಸುಜಾತ ಧನಂಜಯ್ ನಾಯ್ಕ್, ಪ.ಪಂ ಅಧ್ಯಕ್ಷೆ ಸವಿತಾ ಬಸವರಾಜ್, ಕಾಂಗ್ರೆಸ್ ಮುಖಂಡ ಬಿ.ಎಸ್.ರುದ್ರಪ್ಪ, ಇಓ ಮಹಾಂತೇಶ್, ನಿವೃತ್ತನೌಕರರ ಸಂಘದ ಅಧ್ಯಕ್ಷ ಎ.ಸಿ.ಗಂಗಾಧರಪ್ಪ, ಕೃಷಿ ಸಮಾಜ ಅಧ್ಯಕ್ಷ ಮಹೇಶ್ವರಪ್ಪ, ದಿನೇಶ್ ಗೌಡಗೆರೆ, ಕ.ರವೇ ಅಧ್ಯಕ್ಷ ಪಿ.ಹನುಮಂತಪ್ಪ, ಚಿಕ್ಕಜಾಜೂರು ರಂಗನಾಥ, ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು,
ಹೊಳಲ್ಕೆರೆ ಸಂವಾಧ ಕಾರ್ಯಕ್ರಮದ ಅಧ್ಯಕ್ಷತೆ ಕೆ.ಎನ್.ರಂಗಸ್ವಾಮಿ ವಹಿಸಿದ್ದರು. ಬಿಜಿ.ಹಳ್ಳಿ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಕುಮಾರ್ ಸ್ವಾಗತ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here