ಮಾಧ್ಯಮದವರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಕೊರಟಗೆರೆ

      ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗದ ಮಾಧ್ಯಮದವರ ಮೇಲೆ ಬೇಳೊರು ಬಾಯ್ಲರ್ ಕಾರ್ಖಾನೆ ಸಿಬ್ಬಂದಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕೊರಟಗೆರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತಹಶೀಲ್ದಾರ್ ಶಿವರಾಜು ಮೂಲಕ ರಾಜ್ಯ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಕ್ಷೇತ್ರದ ಶಾಸಕ, ಉಪಮುಖ್ಯಮಂತ್ರಿ, ಗೃಹಸಚಿವರಿಗೆ ಮನವಿ ಸಲ್ಲಿಸಿ ಹಲ್ಲೆ ಕೊರರ ಮೇಲೆ ಕಠಿಣ ಕ್ರಮಕೈಗೊಳ್ಳವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

      ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್ ಮಾತನಾಡಿ ಇತ್ತೀಚೆಗೆ ಮಧ್ಯಮದವರ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನು ಬಿಗಿ ಇಲ್ಲದೇ ಇರುವುದೇ ಈ ಘಟನೆಗಳಿಗೆ ಕಾರಣವಾಗಿದೆ, ಯಾವುದೇ ಸರ್ಕಾರಿ ಭತ್ಯವಿಲ್ಲದೆ ಜೀವನ ಭದ್ರತೆಇಲ್ಲದೆ ಸಾರ್ವಜನಿಕರಿಗೆ ವಸ್ತುನಿಷ್ಠೆಗಳನ್ನು ಪ್ರದರ್ಶಿಸಲು, ಸತ್ಯ ವರದಿ ನೀಡಲು ಹಾಗೂ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವೆ ಪರ ದ್ವನಿಯಾಗಲು ಮಾಧ್ಯಮದವರು ಹಗಲಿರುಳು ಶ್ರಮಿಸುತ್ತಾರೆ,

    ಆದರೆ ಕರ್ತವ್ಯನಿರ ಮಾಧ್ಯಮದ ಮೇಲೆ ಹಲ್ಲೆಗಳಾದರೆ ಸಮಾಜದಲ್ಲಿ ಕಾನೂನೂ ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾದಂತೆ, ಜೂ.11 ರಂದು ಮಂಗಳವಾರ ಮಧ್ಯಮದವರ ಮೇಲೆ ಕಾಖಾನೆಯ ಸಿಬ್ಬಂದಿಗಳ ರೌಡಿಗಳಂತೆ ಹಲ್ಲೆ ಮಾಡಿದ್ದು ಪತ್ರಕರ್ತರಿಗೆ ಕಾನೂನು ಭದ್ರತೆ ಇಲ್ಲದಂತಾಗಿದೆ ಆದ್ದರಿಂದ ಕೋಡಲೆ ಹಲ್ಲೆ ಕೋರರ ಮೇಲೆ ಕಠಿಣ ರೀತಿ ಕಾನೂನಿ ಕ್ರಮಕೈಗೊಳ್ಳಬೇಕು, ಕಾರ್ಖಾನೆ ಮಾಲಿಕ ಹಾಗೂ ವ್ಯವಸ್ಥಾಪಕನನ್ನು ಕೋಡಲೆ ಬಂದಿಸಬೇಕು, ಸರ್ಕಾರವು ಪತ್ರಕರ್ತರ ರಕ್ಷಣೆಗೆ ವಿಶೇಷ ಕಾನೂನು ಮತ್ತು ಕ್ರಮಗಳನ್ನು ಕೈಗೊಳ್ಳಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪತ್ರಕರ್ತರು ಬೀದಿಗಿಳಿದು ಹೋರಾಟ ಮಾಡುವುದರೊಂದಿಗೆ ಕೇಂದ್ರ ಸರ್ಕಾರದ ಮೋರೆಹೋಬೇಕಾದ ಅನಿವಾರ್ಯವಾಗುತ್ತದೆ ಎಂದರು.

      ಕಾರ್ಖಾನೆಯಲ್ಲಿ ಸಿಬ್ಬಂದಿಗಳು ರೌಡಿಗಳಂತೆ ವರ್ತಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಕರ್ಖಾನೆಯ ಒಳಗಡೆ ಎನ್ನೆಲ್ಲಾ ನಡೆಯುತ್ತಿದೆ ಮತ್ತು ಅಲ್ಲಿನ ನೌಕರರು ಮತ್ತು ಕಾರ್ಮಿಕರಿಗೆ ಇವರು ಯಾವರೀತಿಯ ಕಿರುಕುಳ ನೀಡುತ್ತಿದ್ದಾರೆ ಎಂಬ ಒಳಮರ್ಮವನ್ನು ಉನ್ನತ ಮೂಲದ ತನಿಖೆ ಸಮಿತಿ ಸರ್ಕಾರ ರಚಿಸಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

      ಈ ಸಂದರ್ಬದಲ್ಲಿ ಜಿಲ್ಲಾ ಸಂಘದ ನಿದೇರ್ಶಕ ರಂಗಧಾಮಯ್ಯ, ಪತ್ರಕರ್ತರಾದ ಎನ್.ಪದ್ಮನಾಭ್, ಜಿ.ಎಲ್,ಸುರೇಶ್, ಹೆಚ್.ರಮೇಶ್, ಜಿ.ಎಂ.ಶಿವಾನಂದ್, ಡಿ.ಎಂ.ರಾಘವೇಂದ್ರ, ಎ.ಆರ್.ಚಿದಂಬರ, ಅಕ್ಕಿರಾಂಪುರ ಮಂಜುನಾಥ್, ಎನ್.ಮೂರ್ತಿ, ನಾಗರಾಜು, ತಿಮ್ಮರಾಜು, ಮಲ್ಲಿಕಾರ್ಜುನ್, ಲಕ್ಷ್ಮೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link