ಕುಣಿಗಲ್
ಐತಿಹಾಸಿಕ ಹಿನ್ನೆಲೆಯುಳ್ಳ ಕುಣಿಗಲ್ ನಗರದಲ್ಲಿ ಶ್ರೀ ಪಾಶ್ರ್ವನಾಥ ದಿಗಂಬರ ಜೈನ ಬಸದಿಯು ಒಂದಾಗಿದೆ. ಇಲ್ಲಿ 24ನೇ ತೀರ್ಥಂಕರರಾದ ಶ್ರೀ ಮಹಾವೀರ ಜಯಂತ್ಯೋತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ರೋಗಿಗಳಿಗೆ ಹಾಲು ಬ್ರೆಡ್ ವಿತರಿಸಿ, ವಿಶೇಷ ಪೂಜಾಕಾರ್ಯಗಳನ್ನು ನಡೆಸುವ ಮೂಲಕ ಇಲ್ಲಿನ ಜೈನ ಬಂಧುಗಳು ಸಂಭ್ರಮ ಸಡಗರದೊಂದಿಗೆ ಅದ್ದೂರಿಯಾಗಿ ಆಚರಿಸಿದರು.
ಒಂದು ಹಂತದಲ್ಲಿ ಕ್ಷೀಣಿಸುತ್ತಿದ್ದ ಜೈನ ಧರ್ಮವನ್ನ ಪುನಃ ಚೇತನ ನೀಡಿ ಪೋಷಿಸಿದ ಶ್ರೀ ಮಹಾವೀರಸ್ವಾಮಿಯವರ ನೆನಪಾರ್ಥವಾಗಿ ಸರ್ಕಾರಗಳು ದಶಕಗಳಿಂದ ಶ್ರೀ ಮಹಾವೀರ ಜಯಂತಿಯನ್ನು ಆಚರಿಸಿಕೊಂಡು ಬಂದಿವೆ. ಅದರಂತೆ ಬುಧವಾರ ಪಟ್ಟಣದ ಮಹಾವೀರ ನಗರದಲ್ಲಿರುವ ಶ್ರೀ ಪಾಶ್ರ್ವನಾಥ ಬಸದಿಯಲ್ಲಿ ಮುಂಜಾನೆಯಿಂದಲೆ ವಿವಿಧ ರೀತಿಯ ಪೂಜಾಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಂಗಲಿಯರು ಪೂರ್ಣಕುಂಭ ಕಳಶಗಳೊಂದಿಗೆ ಆಗಮಿಸಿ, ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಪೂಜಾಕಾರ್ಯಗಳನ್ನು ಕೈಗೊಂಡು ಶ್ರೀ ಸ್ವಾಮಿ ಹುಟ್ಟಿದಾಗಿನ ಸನ್ನಿವೇಶ ಸೇರಿದಂತೆ, ಸಾಂಸಾರಿಕ ಜೀವನ ಹಾಗೂ ಅವರ ವ್ರತಾಚರಣೆ, ದೀಕ್ಷೆ , ಮೋಕ್ಷ ಕಲ್ಯಾಣದ ವಿವಿಧ ಆಚರಣೆಗಳನ್ನ ಶ್ರದ್ದಾಭಕ್ತಿಯಿಂದ ಆಚರಿಸಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು. ಪ್ರತಿ ಸಾರಿಯಂತೆ ಈ ವರ್ಷವೂ ಮೊದಲು ಸರ್ಕಾರಿ ಆಸ್ಪತ್ರೆಗೆ ತೆರಳಿದ ಜೈನ ಬಂಧುಗಳು ಅಲ್ಲಿಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಹಾಲು ಮತ್ತು ಬ್ರೆಡ್ ಅನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್ಬಾಬು ಮತ್ತು ಡಾ.ಶ್ವೇತಾ ಅವರ ಸಮ್ಮುಖದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಜೈನ ಸಮಾಜ ಮುಖಂಡರಾದ ಡಿ.ಮೋಹನ್ಕುಮಾರ್, ಶಾಂತರಾಜಯ್ಯ, ಎ.ಸಂತೋಷ್, ಮದನ್ಕುಮಾರ್, ಬ್ರಹ್ಮದೇವ್, ಸುರೇಂದ್ರಕುಮಾರ್, ಜ್ವಾಲಪ್ರಸಾದ್, ಪಾಶ್ರ್ವನಾಥ್, ನಾಗೇಂದ್ರ, ಮಹಾವೀರ್, ಪ್ರಸನ್ನಕುಮಾರ್, ಪತ್ರಕರ್ತರಾದ ಎಂ.ಡಿ.ಮೋಹನ್, ಮಹಿಳಾ ಸಮಾಜದವರಾದ ಪದ್ಮಮ್ಮ, ಮಾಲಾ, ಪದ್ಮಶ್ರೀ, ಸುಜಾತ, ಶೋಭ ಭಾಗವಹಿಸಿದ್ದರು.