ಮಧುಗಿರಿ:
ಮಧುಗಿರಿ ಶೈಕ್ಷಣಿಕ ಜಿಲ್ಲೆಯು ಏ.2019ರಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು ಶೇ.85.51ರಷ್ಟು ಪಡೆದು ಈ ಬಾರಿ 11ನೇ ಸ್ಥಾನ ಗಳಿಸಿಕೊಂಡಿದ್ದು ಏ.2018ರ ಪರೀಕ್ಷೆಯಲ್ಲಿ ಶೇ.85.55ರಷ್ಟು ಅಂಕ ಪಡೆದು 5ನೇ ಸ್ಥಾನಕ್ಕೆ ಜಿಗಿದಿತ್ತು. ಆದರೆ ಶೈಕ್ಷಣಿಕ ಜಿಲ್ಲೆಯಲ್ಲಿ 0.4ರಷ್ಟು ಫಲಿತಾಂಶ ಕಡಿಮೆಯಾಗಿರುವುದರಿಂದ ಈ ಬಾರಿ ರಾಜ್ಯದ ಫಲಿತಾಂಶ ಪಟ್ಟಿಯಲ್ಲಿ 6 ಸ್ಥಾನಕ್ಕೆ ಹಿಂಬಡ್ತಿ ಪಡೆದಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 58 ಪರೀಕ್ಷಾ ಕೆಂದ್ರಗಳಲ್ಲಿ ಸರ್ಕಾರಿ 34 ಕೇಂದ್ರಗಳು ಅನುದಾನಿತ 19 ಕೇಂದ್ರಗಳು, ಅನುದಾನರಹಿತ 5 ಪರೀಕ್ಷಾ ಕೇಂದ್ರ, ಕೊರಟಗೆರೆ ತಾಲ್ಲೂಕಿನಲ್ಲಿ 11, ಮಧುಗಿರಿ 16 ಪಾವಗಡ 15, ಸಿರಾ 16 ಪರೀಕ್ಷಾ ಕೇಂದ್ರಗಳಿಂದ ಶಿರಾ-3764, ಮಧುಗಿರಿ-3137, ಪಾವಗಡ-2790, ಕೊರಟಗೆರೆ-2037 ಸೇರಿದಂತೆ ಪುನರಾವರ್ತಿತ ಅಭ್ಯರ್ಥಿಗಳು-403, ಖಾಸಗಿ ಅಭ್ಯರ್ಥಿಗಳು-312 ಒಟ್ಟು 4 ತಾಲ್ಲೂಕು ಗಳಿಂದ ಒಟ್ಟು 12443 ಜನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆಗೆ ತೆಗೆದುಕೊಂಡಿದ್ದರು.
ಶೈಕ್ಷಣಿಕ ಜಿಲ್ಲೆಯ ತಾಲ್ಲೂಕುವಾರು ಫಲಿತಾಂಶ ವಿವರ:
ಮಧುಗಿರಿ: 3088 ಪರೀಕ್ಷೆ ತೆಗೆದುಕೊಂಡವರು 2778 ಉತ್ತೀರ್ಣ ಶೇ.89.96 (ಪ್ರಥಮ ಸ್ಥಾನ)
ಕೊರಟಗೆರೆ: 1993 ಪರೀಕ್ಷೆ ತೆಗೆದುಕೊಂಡವರು 1785 ಉತ್ತೀರ್ಣ ಶೇ.89.56 (ದ್ವಿತೀಯ ಸ್ಥಾನ)
ಪಾವಗಡ: 2680 ಪರೀಕ್ಷೆ ತೆಗೆದುಕೊಂಡವರು 2379 ಉತ್ತೀರ್ಣ ಶೇ.88.77 (ತೃತೀಯಸ್ಥಾನ)
ಶಿರಾ: 3688 ಪರೀಕ್ಷೆ ತೆಗೆದುಕೊಂಡವರು 2848 ಉತ್ತೀರ್ಣ ಶೇ.77.22
ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು
ಪಾವಗಡ ಜ್ಞಾನಭೋಧಿನಿ ಶಾಲೆಯ ಸಿಂಚನ ಎನ್ ಮಾಕಮ್ 622, ಮಧುಗಿರಿ ಚಿರೆಕ್ ಶಾಲೆಯ ವೈಷ್ಣವಿ.ಎನ್.ಎಸ್ 620, ಪಾವಗಡ ಸಹನ ಇಂಗ್ಲೀಷ್ ಶಾಲೆಯ ಪವನ್ ಡಿ.ಎನ್ 620, ಸಿರಾ ತಾಲ್ಲೂಕಿನ ಬರಗೂರು ಗ್ರಾಮದ ಲಿಟಲ್ ರೋಸ್ಸ್ ಇಂಗ್ಲೀಷ್ ಶಾಲೆಯ ಚೈತ್ರಾ. ಎನ್ 618, ಮಧುಗಿರಿ ಕಾರ್ಡಿಯಲ್ ಶಾಲೆಯ ಯಶಸ್ವಿನಿ ಎಂ.ಎನ್ 618, ಸಿರಾ ಪಟ್ಟಣದ ಪ್ರೆಸಿಡೆನ್ಸಿ ಶಾಲೆಯ ಸಮಂತ.ಎಸ್. 617, ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣದ ಆಕ್ಸಫರ್ಢ್ ಶಾಲೆಯ ಐಶ್ವರ್ಯ ಬಿ.ಜಿ. 616, ಪಾವಗಡದ ಜ್ಞಾನಭೋಧಿನಿ ಶಾಲೆಯ ವಸುಂಧರ ಎಂ. 615, ಕೊರಟಗೆರೆಯ ಚಾಣುಕ್ಯ ಪಬ್ಲಿಕ್ ಶಾಲೆಯ ಗೌರವ್ ಬಾಬು ಹೆಚ್.ಎಸ್ 615, ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣದ ಆಕ್ಸಫರ್ಢ್ ಶಾಲೆಯ ಶ್ರೇಣಿ ಎಂ.ಎಸ್ 615, ಸಿರಾ ಪಟ್ಟಣದ ಪ್ರೆಸಿಡೆನ್ಸಿ ಶಾಲೆಯ ಚೇತನ್ ಡಿ. 615 ಅಂಕಗಳನ್ನು ಗಳಿಸಿದ್ದಾರೆ.
ಶೇ100ರಷ್ಟು ಫಲಿತಾಂಶ ಪಡೆದ ಶಾಲೆಗಳು:
ಮಧುಗಿರಿ:
ಕೋಡ್ಲಾಪುರ, ಗರಣಿ, ಪುರವರ, ಬೇಡತ್ತೂರು ಸುದ್ದೇಕುಂಟೆ ಸರಕಾರಿ ಫ್ರೌಢಶಾಲೆಗಳು ಮತ್ತು ಕುಪ್ಪಚಾರಿರೊಪ್ಪ ಬಡವನಹಳ್ಳಿ ಮೂರಾರ್ಜಿ ದೇಸಾಯಿ ಶಾಲೆಗಳು, ಗ್ರಾಮಾಂತರ ಸನಿವಾಸ ಫ್ರೌಢಶಾಲೆ ಹೊಸಕೆರೆ, ಮಹಾದೇಶ್ವರ ಗ್ರಾಮಾಂತರ ಫ್ರೌಢಶಾಲೆ ಶ್ರಾವಂಡನಹಳ್ಳಿ, ಕಾರ್ಡಿಯಲ್ ಇಂಗ್ಲೀಷ್ ಫ್ರೌಢಶಾಲೆ, ಮೌಂಟ್ ವ್ಯೂ ಪಬ್ಲಿಕ್ ಶಾಲೆ, ಚಿರೆಕ್ ಪಬ್ಲಿಕ್ ಸ್ಕೂಲ್, ಜ್ಯೂಪಿಟರ್ ಪಬ್ಲಿಕ್ ಸ್ಕೂಲ್, ಚೇತನ, ಎಸ್.ಎಂ. ಇಂಗ್ಲೀಷ್ ಫ್ರೌಢಶಾಲೆ, ಲೋಕಪಾಲ್ ಇಂಗ್ಲೀಷ್ ಮೀಡಿಯಂ ಫ್ರೌಢಶಾಲೆ ಬಡವನಹಳ್ಳಿ, ಸುವರ್ಣಮುಖಿ ಸನಿವಾಸ ಫ್ರೌಢಶಾಲೆ ಬ್ರಹ್ಮಸಮುದ್ರ, ಮಹಾದೇಶ್ವರ ಗ್ರಾಮಾಂತರ ಫ್ರೌಢಶಾಲೆ, ನಿಸರ್ಗ ಜ್ಞಾನ ಮಂದಿರ ಫ್ರೌಢಶಾಲೆ ಕೋಡಿಗೇನಹಳ್ಳಿ.
ಕೊರಟಗೆರೆ:
ದಾಸರಹಳ್ಳಿ ಮತ್ತು ಗೊಡ್ಡರಹಳ್ಳಿ ಸರಕಾರಿ ಫ್ರೌಢಶಾಲೆಗಳು, ರೆಡ್ಡಿಕಟ್ಟೆ, ಸಿದ್ದರಬೆಟ್ಟ ಮೂರಾರ್ಜಿ ದೇಸಾಯಿ ಫ್ರೌಢಶಾಲೆಗಳು. ಸರಕಾರಿ ಸಂಯುಕ್ತ ಫ್ರೌಢಶಾಲೆ ಲಿಂಗಾಪುರ, ಪ್ರತಿಭಾ ದರ್ಶಿನಿ ಇಂಗ್ಲೀಷ್ ಫ್ರೌಢಶಾಲೆ ಕೋಳಾಲ, ಚಾಣಕ್ಯ ಪಬ್ಲಿಕ್ ಶಾಲೆ, ಜೈನಾಭೀಯ ಹೊಳವನಹಳ್ಳಿ , ವಿಶ್ವಭಾರತಿ ಫ್ರೌಢಶಾಲೆ ಮಾವತ್ತೂರು.
ಪಾವಗಡ:
ವಳ್ಳೂರು, ಅರಸಿಕೆರೆ, ಕೃಷ್ಣಪುರ, ನಾಗಲಮಡಿಕೆ, ಸರಕಾರಿ ಫ್ರೌಢಶಾಲೆ ಗುಜ್ಜನಡು ಪಾವಗಡ (ಬಿ.ಸಿ) ಮೂರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ, ಶ್ರೀರಾಮ ಪಲ್ಲಾವಆರ್ಯ ಗ್ರಾಮಾಂತರ ಫ್ರೌಢಶಾಲೆ, ಎಂ.ಜಿ.ಎಂ ಗುಂಡ್ಲಾರಹಳ್ಳಿ, ಎಂಜಿಎಂ ಬ್ಯಾಡನೂರು, ರಾಷ್ಟ್ರಪ್ರಗತಿ ಫ್ರೌಢಶಾಲೆ ಕಿಲ್ಲಾರಹಳ್ಳಿ, ನೇತ್ರಾ ವಿದ್ಯಾಪೀಠಾ ಫ್ರೌಢಶಾಲೆ ಗುಜ್ಜನಡು, ರಾಷ್ಟ್ರಪ್ರಗತಿ ಫ್ರೌಢಶಾಲೆ ಮುದಗಲಬೆಟ್ಟ, ವಿನಾಯಕ ಸರಸ್ವತಿ ಇಂಗ್ಲೀಷ್ ಮೀಡಿಯಂ ಫ್ರೌಢಶಾಲೆ ಬಾಲಮಿತ್ರ ಫ್ರೌಢಶಾಲೆ ಕೆಂಚಮ್ಮನಹಳ್ಳಿ, ಜ್ಞಾನಭೋಧಿನಿ, ಅಂತ್ಯೋದಯ ಫ್ರೌಢಶಾಲೆ ಮಂಗಳವಾಡ, ಶ್ರೀ ಶಾರದ ವಿದ್ಯಾಪೀಠ, ಸಹನ ಇಂಗ್ಲೀಷ್ ಮೀಡಿಯಂ ಫ್ರೌಢಶಾಲೆ ಕೋಟಗುಡ್ಡ, ಜ್ಞಾನ ವಾಹಿನಿ ಇಂಗ್ಲೀಷ್ ಮೀಡಿಯಂ ಫ್ರೌಢಶಾಲೆ.
ಶಿರಾ:
ಸರಕಾರಿ ಫ್ರೌಢಶಾಲೆ ದೊಡ್ಡಬಾಣಗೆರೆ, ಚಿಕ್ಕನಹಳ್ಳಿ ಮೂರಾರ್ಜಿ ದೇಸಾಯಿ, ಅರುಣೋದಯ ಫ್ರೌಢಶಾಲೆ ಲಕ್ಕನಹಳ್ಳಿ, ಆಕ್ಸಫರ್ಢ್ ಫ್ರೌಢಶಾಲೆ ಬುಕ್ಕಾಪಟ್ಟಣ,2019ರ ಏಪ್ರಿಲ್ ಮಾಹೆಯಲ್ಲಿ ನಡೆದ ಒಟ್ಟು 1659 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.