ಮಕನಾದರ ಪ್ರಶಸ್ತಿ ಪ್ರಧಾನ

ಹಾವೇರಿ :

       ಗದುಗಿನ ನಿರಂತರ ಪ್ರಕಾಶನ ಮತ್ತು ಎ. ಎಸ್. ಮಕನಾದಾರ ಪ್ರತಿಷ್ಠಾನ ಪ್ರತಿ ವರ್ಷ ನೀಡುವ ಮಕನಾದಾರ ಪ್ರಶಸ್ತಿ ಈ ಬಾರಿ ನಗರದ ಶಿವಲಿಂಗೇಶ್ವರ ಮಹಿಳಾ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಮತ್ತು ಲೇಖಕಿ ಡಾ. ಪುಷ್ಪಾವತಿ ಶೆಲವಡಿಮಠ ಅವರಿಗೆ ನೀಡಲಾಯಿತು.

       ಡಾ. ಪುಷ್ಪಾವತಿ ಅವರಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಹರಿಶ್ಚಂದ್ರ ಎಂಬ ಮಹಾ ಪ್ರಬಂಧಕ್ಕೆ ಡಾಕ್ಟರೇಟ ನೀಡಿದ ಸಂದರ್ಭದಲ್ಲಿ ಇತ್ತಿಚೆಗೆ ಇಲ್ಲಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಹಿರೇಮಠ ಬಂದುಗಳು ಏರ್ಪಡಿಸಿದ್ದ ಸಮಾರಂಭದಲ್ಲಿ ಸದಾಶಿವ ಸ್ವಾಮಿಗಳು ಮಕನಾದಾರ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

         ಪ್ರತಿಷ್ಠಾನದ ಅಧ್ಯಕ್ಷರಾದ ಲೇಖಕ ಎ. ಎಸ್. ಮಕನಾದಾರ ಅವರು ಮಾತನಾಡಿ ಸಜ್ಜನಿಕೆಗೆ ಮತ್ತು ಶಿಸ್ತುಬದ್ದ ಅಧ್ಯಯನಕ್ಕೆ ಹೆಸರಾದ ಶ್ರೀಮತಿ. ಶಲವಡಿಮಠ ಅವರ ಸಾಹಿತ್ಯ ಪರಿಶ್ರಮಕ್ಕೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದರು. ಪ್ರಶಸ್ತಿ ಪ್ರಧಾನ ಮಾಡಿದ ಸದಾಶಿವ ಸ್ವಾಮಿಗಳು, ಸಾಹಿತ್ಯ ಲೋಕದಲ್ಲಿ ಗಟ್ಟಿ ಹೆಜ್ಜೆಗಳನ್ನು ಇಡುತ್ತಿರುವ ಶಲವಡಿಮಠ ಅವರ ಸಾಧನೆಗೆ ಡಾಕ್ಟರೇಟ ಜೊತೆಗೆ ಮಕನಾದಾರ ಪ್ರಶಸ್ತಿ ಹೊಸಗರಿಮೆ ನೀಡದೆ ಎಂದರು. ಸರ್ವಶ್ರೀ. ಗಂಗಾಧರ ನಂದಿ, ಶಿವಬಸಪ್ಪ ಮುಷ್ಠಿ, ಬಿ. ಬಸವರಾಜ, ಪಿ. ಡಿ. ಶಿರೂರ, ಈರಣ್ಣ ಅಂಗಡಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link