ಮಕ್ಕಳ ವಿಜ್ಞಾನ ಹಬ್ಬ ಸಮಾರೋಪ

ಹಾವೇರಿ :

        ಎರಡು ದಿನಗಳ ಕಾಲ ನಂ 02 ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿಯ ತಾಲ್ಲೂಕಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಮುಕ್ತಾಯಗೊಂಡಿತು

        ಮಕ್ಕಳಿಗೆ ಪಠ್ಯದ ಜೊತೆಗೆ ಅವರ ಜ್ಞಾನ ವಿಕಾಸವನ್ನು ಮಾಡುವ ಸಾಂಸ್ಕತಿಕ ಮನಸ್ಸನ್ನು ರೂಪಿಸುವ ಪಠ್ಯೇತರ ಚಟುವಟಿಕೆಗಳು ಕೂಡಾ ಅವಶ್ಯಕವೆಂದು ಶ್ರೀಮತಿ ಶಕುಂತಲಾ ಗುಡುಗುರಮಠ ಸಮಾರೋಪ ಮಾಡುತ್ತ ನುಡಿದರು.

        ಮುಖ್ಯ ಆತಿಥಿಯಾಗಿ ಆಗಮಿಸಿದ್ದ ಬಸವೇಶ್ವರದ ನಗರದ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಅನುಪಮಾ ಹಿರೇಮಠರವರು ಮಾತನಾಡಿ ಮಕ್ಕಳ ಹಬ್ಬವು ಕೇವಲ ಮಕ್ಕಳದ್ದಾಗದೆ ಹಿರಿಯರಿಗೂ ಮಕ್ಕಳ ಮನಸ್ಸನ್ನು ತಿಳಸುವ ಹಬ್ಬವಾಗಬೇಕೆಂದರು.

        ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಸದಸ್ಯರಾದ ಶ್ರೀಮತಿ ರೇಣುಕಾ ಗುಡಿಮನಿಯವರು ‘ ರಾಜ್ಯಾದ್ಯಂತ ಡಿಸೆಂಬರ್ 31 ರವರೆಗೆ ಹಮ್ಮಿಕೊಳ್ಳಲಾದ ಮಕ್ಕಳ ಹಬ್ಬ ಅತ್ಯಂತ ಯಶಸ್ವಿಯಾಗಿ ಜರುಗುತ್ತಿದಗ್ದು ಹಾವೇರಿ ಜಿಲ್ಲೆ ಪ್ರಥಮವಾಗಿ ಇದಕ್ಕೆ ಚಾಲನೆ ನೀಡಿ ರಾಜ್ಯದ ಗಮನ ಸೆಳೆದಿದೆ’ ಎಂದರು.

          ಈ ಸಂದರ್ಭದಲ್ಲಿ ಬಯಲಾಟ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕತರಾದ ಶಂಕರ ಅರ್ಕಸಾಲಿ ಮತ್ತು ರಂಗಶಂಕರ ಪ್ರಶಸ್ತಿ ಪುರಸ್ಕತರಾದ ಜಮೀರ ರಿತ್ತ, ವಸಂತ ಕಡತಿ ಅವರುಗಳನ್ನು ಸನ್ಮಾನಿಸಲಾಯಿತು.

           ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸರ್ವಶ್ರೀ ಹನುಮಂತಗೌಡ ಗೊಲ್ಲರ, ಎಂ. ಜಿ ಹಿರೇಮಠ, ರವೀಂದ್ರ ಮಳಿಗಿ, ಶ್ರೀಮತಿ ಬಿ. ವ್ಹಿ ಕ ನವಳ್ಳಿ, ವನಮಾಲಾ ಕಿತ್ತೂರಮಠ. ಸುಮಿತ್ರಾ ಉಪಾಸಿ, ಆರ್. ಸಿ ನಂದೀಹಳ್ಳಿ, ಎಸ್. ಆರ್. ಹಿರೇಮಠ, ಜಿ. ಎಂ. ಓಂಕಾರಣ್ಣನವರ, ಪರಮೇಶ ಕಳಸಣ್ಣನವರ, ಶ್ರೀಮತಿ ಅಕ್ಕಮಹಾದೇವಿ ಹಾನಗಲ್ಲ. ಆರಂಭದಲ್ಲಿ ತಾಲ್ಲೂಕಾ ಅಧ್ಯಕ್ಷರಾದ ಮಾಲತೇಶ ಕರ್ಜಗಿ ಕುಮಾರ ಶಿವಸಿಂಪಿ ಪೃಥ್ವಿರಾಜ ಬೆಟಗೇರಿ ಅನೇಕರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link