ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ಭವಿಷ್ಯಕ್ಕೆ ಸಹಕರಿಸಿ

ದಾವಣಗೆರೆ:

     ಮಕ್ಕಳಲ್ಲಿ ಉತ್ತಮ ಗುಣಗಳನ್ನು ತುಂಬಿದರೆ, ಸಜ್ಜನರಾಗಿ ಮುಂದೆ ಅವರೇ ಭವಿಷ್ಯ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ, ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಏರ್ಪಡಿಸಿದ್ದ ಅಕ್ಷರಾಭ್ಯಾಸ, ವಿದ್ಯಾರಂಭಂ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಅವರು ಮಾತನಾಡಿದರು.

       ಮಕಳೇ ದೇಶದ ನಿಜವಾದ ಸಂಪತ್ತು ಆಗಿದ್ದಾರೆ. ಅವರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕøತಿ ಕಲಿಸುವ ಮೂಲಕ ಉತ್ತಮ ಗುಣಗಳನ್ನು ತುಂಬಿದರೆ, ಸಜ್ಜನರಾಗಿ ಅವರೇ ಮುಂದೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಹಾಸ್ಟೆಲ್‍ಗಳಲ್ಲಿ ಓದಿಸಬೇಡಿ, ಬದಲಿಗೆ ಮನೆಯಲ್ಲಿಯೇ ಇಟ್ಟುಕೊಂಡು ಓದಿಸುವ ಮೂಲಕ ಕಷ್ಟ-ಸುಖಗಳ ಅರಿವು ಮೂಡಿಸಬೇಕೆಂದು ಕಿವಿಮಾತು ಹೇಳಿದರು.

        ಸ್ವರಗಳಲ್ಲಿಯೇ ಭಾರತೀಯ ಭಾಷೆಗಳ ಸತ್ವ ಅಡಗಿದೆ. ಹೀಗಾಗಿ ಬಾಲ್ಯದಲ್ಲಿ ಸ್ವರಗಳನ್ನು ಜೋರಾಗಿ ಹೇಳಿದರೆ, ಶರೀರದ ನರನಾಡಿಗಳು ಸಕ್ರಿಯವಾಗುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢವಾಗಿರಲಿದೆ. ಆ ಕಾರಣಕ್ಕಾಗಿಯೇ ಹಿಂದೆ ಶಾಲೆಗಳಲ್ಲಿ ನಾಲ್ಕು ಬಾರಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಆದರೆ, ಇತ್ತೀಚೆಗೆ ಅಕ್ಷರಭ್ಯಾಸ ಮಾಡುವುದೇ ವಿರಳವಾಗಿದೆ ಎಂದರು.
ದೇಶದಲ್ಲಿ ಒಬ್ಬ ಉತ್ತಮ ನಾಯಕ ಬಂದಿದ್ದು, ನರೇಂದ್ರ ಮೋದಿ ಒಬ್ಬ ಪರಿಪೂರ್ಣ ಪ್ರಧಾನಿಯಾಗಿದ್ದಾರೆ. ಈ ದೇಶದ ಸಂಸ್ಕತಿ, ಸಂಸ್ಕಾರ ಉತ್ತುಂಗಕ್ಕೆ ಏರಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಭಾರತ ವಿಶ್ವಗುರುವಾಗಿ ಜಗತ್ತಿನ ಗಮನ ಸೆಳೆಯಲಿದೆ ಎಂದರು.

          ಆರ್‍ಎಸ್‍ಎಸ್‍ನ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಎ.ಆರ್.ದ್ವಾರಕನಾಥ್ ಮಾತನಾಡಿ, ಅಕ್ಷರಾಭ್ಯಾಸ ಪದ್ಧತಿಯು ನಮ್ಮ ಪರಂಪರೆಯ ಷೋಡಸ ಸಂಸ್ಕಾರಗಳಲ್ಲಿ ಒಂದಾಗಿದ್ದು, ಇದನ್ನು ಎಲ್ಲಾ ಶಾಲೆಗಳು ಅಳವಡಿಸಿಕೊಂಡರೆ ಒಳ್ಳೆಯದು. ನಮ್ಮ ಶಾಲೆಯಲ್ಲಿ ಶಿಕ್ಷಣದ ಜತೆ, ಜತೆಗೆ ಸಂಸ್ಕಾರವನ್ನು ಸಹ ಬಿತ್ತಲಾಗುತ್ತಿದೆ ಎಂದರು.

          ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲೆಯಿಂದ ಪುರಸ್ಕಾರ ನೀಡಲಾಗುತ್ತಿದೆ. 40 ವಿದ್ಯಾರ್ಥಿಗಳಿಗೆ ಐಐಟಿಗೆ, 50 ವಿದ್ಯಾರ್ಥಿನಿಯರಿಗೆ ವೈದ್ಯಪದವಿ ಪ್ರವೇಶಕ್ಕೆ ಪಡೆಯಲು ತರಬೇತಿ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇವೆಲ್ಲದರ ಸದುಪಯೋಗ ಪಡೆದುಕೊಳ್ಳಬಬೇಕೆಂದು ಕಿವಿಮಾತು ಹೇಳಿದರು.ಆರಂಭದಲ್ಲಿ ಗಣಪತಿ ಹೋಮ ನಡೆಸಲಾಯುತು.ಶಾಲೆಯ ಕಾರ್ಯದರ್ಶಿ ಜಯಣ್ಣ, ಸದಸ್ಯರಾದ ವಿನಾಯಕ ರಾನಡೆ, ಗಿರೀಶ್, ಪ್ರಾಚಾರ್ಯ ಮಂಜುನಾಥ್, ಶಂಭುಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap