ಬೆಂಗಳೂರು
ದೇಶದಲ್ಲಿ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಜಾಲವಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ ತನ್ನ ಗ್ರಾಹಕರಿಗಾಗಿ #PromiseToProtect ಅಭಿಯಾನಕ್ಕೆ ಚಾಲನೆ ನೀಡಿದೆ.
ಗ್ರಾಹಕರು ಮನೆಯಲ್ಲಿಯೇ ಕುಳಿತು ಚಿನ್ನವನ್ನು ಖರೀದಿಸಲು ಅನುಕೂಲ ಮಾಡಿಕೊಡುವುದು ಈ ಅಭಿಯಾನದ ಉದ್ದೇಶವಾಗಿದೆ.ಅಲ್ಲದೇ, ಗ್ರಾಹಕರು ಚಿನ್ನದ ಬೆಲೆಯ ರಕ್ಷಣೆ ಮತ್ತು ವಿಶೇಷ ಕೊಡುಗೆಗಳನ್ನೂ ಪಡೆಯಲಿದ್ದಾರೆ.
ಕೊವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಗ್ರಾಹಕರುಮನೆಯಲ್ಲೇ ಸುರಕ್ಷಿತವಾಗಿದ್ದಾರೆ. ಅವರಿಗೆ ಹೊರ ಬಂದು ಚಿನ್ನಾಭರಣಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಬಾರಿಯ ಅಕ್ಷಯ ತೃತೀಯ ಶುಭ ಸಂದರ್ಭವನ್ನು ಮನೆಯಲ್ಲೇ ಕುಳಿತುಸಂತಸದಿಂದ ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಈ
ಅಭಿಯಾನವನ್ನು ಆರಂಭಿಸಿದೆ.
ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದು ಮತ್ತು ಅಕ್ಷಯ ತೃತೀಯದ ಮಹತ್ವವನ್ನು ಸಾರುವ ಉದ್ದೇಶದಿಂದ ಮಲಬಾರ್ ಗೋಲ್ಡ್ & ಡೈಮಂಡ್ ಈ (#PromiseToProtect) ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಆರಂಭಿಸಿದೆ. ಸಾಮಾಜಿಕ ಮಾಧ್ಯಮ ಮತ್ತು ಗೂಗಲ್ ನೆಟ್‌ವರ್ಕ್ ಮೂಲಕ ಪ್ರಚಾರ ಮಾಡುತ್ತಿದೆ. ಈ ಅಭಿಯಾನದಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಚಿನ್ನಾಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಶೇ.30 ಕಡಿತ, ವಜದ ಮೌಲ್ಯದ ಮೇಲೆ ಶೇ.20 ರವರಗೆ ಕಡಿತ ಇರಲಿದೆ ಆದಲ್ಲದ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ 15,000 ರೂಪಾಯಿಗಿಂತ ಹೆಚ್ಚು ಮೌಲ್ಯದ ಆಭರಣ ಖರೀದಿಸಿದರೆ ಶೇ.5 ರಷ್ಟು
ಕ್ಯಾಶ್‌ಬ್ಯಾಕ್ ಸೌಲಭ್ಯ ಇರಲಿದೆ.
ಗ್ರಾಹಕರು ಈ ಅಕ್ಷಯ ತೃತೀಯ ಆಫರ್‌ಗಳನ್ನು ಏಪ್ರಿಲ್ 26, 2020 ರವರೆಗೆ ಪಡೆಯಬಹುದು. ಗ್ರಾಹಕರು ಈ ಅಭಿಯಾನದಡಿ ಆನ್‌ಲೈನ್‌ನಲ್ಲಿ ಚಿನ್ನಾಭರಣವನ್ನು ಖರೀದಿ ಮಾಡಬಹುದು ಮತ್ತು ಲಾಕ್‌ಡನ ಆವಧಿ ಮುಗಿದ ನಂತರ ತಮ್ಮ ಹತ್ತಿರದ ಮಲಬಾರ್ ಗೋಲ್ಡ್ & ಡೈಮಂಡ್‌ನ ಸ್ಟೋರ್‌ಗೆ ಭೇಟಿ ನೀಡಿ ಆಭರಣವನ್ನು ಪಡೆದುಕೊಳ್ಳಬಹುದಾಗಿದೆ. ಈ ಆನ್‌ಲೈನ್ ಚಿನ್ನಾಭರಣ ಖರೀದಿ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಬೆಲೆ ರಕ್ಷಣೆ ಪ್ರಯೋಜನ ದೊರೆಯಲಿದೆ. ಅಂದರೆ, ಗ್ರಾಹಕರು ಕಾಯ್ದಿರಿಸಿದ ಬೆಲೆಯಲ್ಲಿ ಅಥವಾ ಯಾವುದು ಕಡಿಮೆ ಇರುತ್ತದೋ ಆ ಬೆಲೆಗೆ ಖರೀದಿಸಬಹುದಾಗಿದೆ.
ಗ್ರಾಹಕರು ತಮ್ಮ ಹತ್ತಿರದ ಸ್ಟೋರ್‌ಗೆ ಕರೆ ಮಾಡಿದರೆ ಈ ವಿಶೇಷ ಉಡುಗೊರೆಯನ್ನು ನೇರವಾಗಿ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಖರೀದಿ ಮಾಡಲು ನಮ್ಮ ಸಿಬ್ಬಂದಿ ಅವರಿಗೆ ನೆರವಾಗಲಿದ್ದಾರೆ. ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, “ಇಂತಹ ಕಠಿಣ ಸಮಯಗಳಲ್ಲಿ ನಾವು ನಿರಂತರವಾಗಿ ಭರವಸೆ ಮತ್ತು ಅದೃಷ್ಟದ ಸೂಚಕವನ್ನು ಎದುರು ನೋಡುತ್ತಿರುತ್ತೇವೆ. ಅಕ್ಷಯ ತೃತೀಯವು ಒಂದು ಅತ್ಯಂತ ಶ್ರೇಷ್ಠವಾದ ಸಮಯವಾಗಿದೆ. ಈ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆ ಮಾಡಲು ಇಷ್ಟಪಡುವವರಿಗೆ ಚಿನ್ನಾಭರಣದ ಕೊಡುಗೆ ಚಿನ್ನಾಭರಣ ಖರೀದಿಗೆ ಸೂಕ್ತವಾಗಿದೆ. ನಾವು ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಸುರಕ್ಷತೆಗೆ ಅತ್ಯಧಿಕ ಬೆಲೆ ಕೊಡುತ್ತೇವೆ” ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ