ಹಗರಿಬೊಮ್ಮನಹಳ್ಳಿ
ಮಲೇಶಿಯಾದಲ್ಲಿ ನಡೆದ 16ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪದಕಗಳೊಂದಿಗೆ ಆಗಮಿಸಿದ ಟ್ರಡೀಷನಲ್ ಶೋಟೋಕಾನ್ ಕರಾಟೆ ಅಕಾಡಮಿಯ ಐದುಜನ ಕರಾಟೆ ಪಟ್ಟುಗಳನ್ನು ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಜಿಲ್ಲಾ ಮುಖ್ಯ ಕರಾಟೆ ಮುಖ್ಯಸ್ಥ ಎಚ್.ಕಟ್ಟೆಸ್ವಾಮಿ ಮಾತನಾಡಿ, ಸುಭಾಷ್ಚಂದ್ರ ನೇತೃತ್ವದ ತಂಡವು ಮಲೇಶಿಯಾದ ಐಪಿಒಹೆಚ್ ನಗರದಲ್ಲಿ ನಡೆದ ಕರಾಟೆ ಪಂದ್ಯಾವಳಿಯಲ್ಲಿ ಬಿ.ನಭಿ ಸಾಹೇಬ್ ಕುಮುತೆ (30 ಕೆಜಿ ತೂಕ) ವಿಭಾಗದಲ್ಲಿ ಬಂಗಾರದ ಪದಕ, ಸಿ.ಎನ್.ದೊಡ್ಡಬಸವರಾಜ (65-70 ಕೆಜಿ ತೂಕ) ಕುಮುತೆ ವಿಭಾಗದಲ್ಲಿ ಬಂಗಾರದ ಪದಕ, ಜೆ.ಎಂ.ರವಿತೇಜ್ (25-30 ಕೆಜಿ ತೂಕ) ಕುಮುತೆ ವಿಭಾಗದಲ್ಲಿ ಕಂಚಿನ ಪದಕ, ಸಾನಿಯಾ ಹಸ್ಮಿ 6 ವರ್ಷದೊಳಗಿನ ಕುಮುತೆ ಮತ್ತು ಕಾತ ವಿಭಾಗದಲ್ಲಿ ಕಂಚಿನ ಪದಕ, ಎಂ.ಸುಭಾಷ್ಚಂದ್ರ 40 ವರ್ಷದೊಳಗಿನ ಕಾತ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡು ಹಗರಿಬೊಮ್ಮನಹಳ್ಳಿಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದಾರೆ ಎಂದು ಹೇಳಿದರು.
ಟ್ರಡೀಷನಲ್ ಶೋಟೋಕಾನ್ ಕರಾಟೆ ಅಕಾಡಮಿಯ ಅಧ್ಯಕ್ಷ ಗುಂಡ್ರು ಹನುಮಂತಪ್ಪ ವಿಜೇತರನ್ನುದ್ದೇಶಿಸಿ ಮಾತನಾಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಬಾಬುವಲಿ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿದರು. ತಕ್ಷಶಿಲಾ ಹೆಲ್ತ್ ಅಂಡ್ ಸ್ಪೋಟ್ಸ್ ಕ್ಲಬ್‍ನ ಅಧ್ಯಕ್ಷ ಪರಮೇಶ್ವರಯ್ಯ ಸೊಪ್ಪಿಮಠ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಹಂಚಿನಮನೆ ಹನುಮಂತಪ್ಪ, ಬಿಜಿವಿಎಸ್ ಅಧ್ಯಕ್ಷ ಮುಸ್ತಾಕ್ ಅಹಮದ್, ಎಣ್ಣಿ ಬಾಷಾ, ಸಣ್ಣ ಬುಡೇನ್ ಸಾಬ್, ಕರವೇ ಅಧ್ಯಕ್ಷ ಭರಮಜ್ಜ ನಾಯಕ, ಕೆ.ವಾಸು, ಆತೀಪ್, ನೀಲ್ ಕುಮಾರ್, ಎಂ.ಸೋಮಣ್ಣ, ಗಣೇಶ್ ರಾಥೋಡ್, ಕೆ.ಎಂ.ಶಿವಶಂಕ್ರಯ್ಯ ಇದ್ದರು.