ಮಲ್ಲಮ್ಮನವರ ಬದುಕೇ ಒಂದು ಬೃಹತ್ ವಚನ ಸಂಪುಟ : ಶಶಿಕಲಾರವಿಶಂಕರ್

ಹಿರಿಯೂರು :

      ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವವನ್ನಾಗಿ ಆರಾಧಿಸಿ ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದರು ಎಂಬುದಾಗಿ ಶ್ರೀಮತಿ ಶಶಿಕಲಾ ರವಿಶಂಕರ್ ಹೇಳಿದರು.

      ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಹಾಶಿವಶರಣೆಯಾಗಿ ಬೆಳಗಿದ ಹೇಮರೆಡ್ಡಿ ಮಲ್ಲಮ್ಮ 12ನೇ ಶತಮಾನದ ಶಿವಶರಣೆಯಂತೆ ವಚನಗಳನ್ನು ರಚಿಸಲಿಲ್ಲವಾದರೂ ಅವರ ಬದುಕೇ ಒಂದು ಬೃಹತ್ ವಚನ ಸಂಪುಟದಂತಿದೆ. ಅವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ ಎಂಬುದಾಗಿ ಹೇಳಿದರು.

     ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರ್‍ರಾದ ನಫೀಜಾ ಬೇಗಂ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರುಗಳಾದ ಜಗದೀಶ್‍ದರೇದಾರ್, ವಕೀಲರಾದ ಚಿದಾನಂದಪ್ಪ, ವಾಣಿಕಾಲೇಜು ಪ್ರಾಂಶುಪಾಲರಾದ ಧರಣೇಂದ್ರಯ್ಯ, ವೀಣಾ ಉಮಾಶಂಕರ್, ಶ್ರೀಮತಿ ರುದ್ರಮ್ಮ, ಶ್ರೀನಿವಾಸ್‍ರೆಡ್ಡಿ, ಸೇರಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap