ಸ್ನೇಹಿತನನ್ನು ಅಡ್ಡಗಟ್ಟಿ ಲಾಠಿಯಿಂದ ಥಳಿಸಿದ ಭೂಪ

ಬೆಂಗಳೂರು

       ಕೆಆರ್‍ಪುರಂ ಪೊಲೀಸರು ಅತಿ ವೇಗವಾಗಿ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕ ಹಾಗೂ ಆತನ ಸ್ನೇಹಿತನನ್ನು ಅಡ್ಡಗಟ್ಟಿ ಲಾಠಿಯಿಂದ ಥಳಿಸಿ ಅಮಾನವೀಯವಾಗಿ ವರ್ತಿಸಿರುವುದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ..

      ಕೆಆರ್‍ಪುರಂನ ಟಿಸಿ ಪಾಳ್ಯದಲ್ಲಿ ರೋಹನ್ ಹಾಗೂ ಆತನ ಸ್ನೇಹಿತನಿಗೆ ಕಾರಣವಿಲ್ಲದೆ ಲಾಠಿಯಲ್ಲಿ ಥಳಿಸಿದ್ದಾರೆ. ಮಂಗಳವಾರ ಕೆಲಸ ಮುಗಿಸಿ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದಿದ್ದು ಅವುಗಳಿಂದ ತಪ್ಪಿಸಿಕೊಳ್ಳಲು ರೋಹನ್ ವೇಗವಾಗಿ ಬೈಕ್ ಚಲಾಯಿಸಿದ್ದಾನೆ.

        ಅತಿವೇಗವಾಗಿ ಹೋಗುತ್ತಿದ್ದಕ್ಕೆ ಅನುಮಾನಗೊಂಡು ಅಡ್ಡಗಟ್ಟಿದ ಕೆ.ಆರ್.ಪುರಂ ಠಾಣೆಯ ಪೊಲೀಸರು ತಮ್ಮ ಲಾಠಿ ರುಚಿ ತೋರಿಸಿದ್ದಾರೆ . ಇನ್ನು ಘಟನೆಯ ದೃಶ್ಯಗಳನ್ನ ಚಿತ್ರೀಕರಿಸಲು ಮುಂದಾದ ರೋಹನ್‍ನ ಮೊಬೈಲ್ ಕೀಳಲು ಮುಂದಾಗಿದ್ದಾರೆ ಎನ್ನಲಾಗಿದೆ.

          ಪೊಲೀಸರ ಈ ನಡೆಯನ್ನು ರೋಹನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಅಲ್ಲದೆ ಖುದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪೇಜ್‍ಗೆ ಶೇರ್ ಮಾಡಿ ನಮಗೆ ನ್ಯಾಯ ಕೊಡಿ. ಇನ್ನೆಷ್ಟು ದರ್ಪ ನೋಡಬೇಕು ಎಂದು ಮನವಿ ಮಾಡಿದ್ದಾನೆ. ಕೂಡಲೇ ರೋಹನ್‍ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ