ಮನ್ ಕಿಬಾತ್ ಜನರಿಗೆ ಹತ್ತಿರ ವಾಗುವ ಕಾರ್ಯಕ್ರಮ : ಕರುಣಾಕರರೆಡ್ಡಿ

ಹರಪನಹಳ್ಳಿ,

         ಪ್ರದಾನಿ ನರೇದ್ರ ಮೋದಿಯವರ ನೆಚ್ಚಿನ ಮನ್ ಕಿಬಾತ್ ಕಾರ್ಯಕ್ರಮ ಜನರಿಗೆ ಹತ್ತಿರ ವಾಗುವ ಕಾರ್ಯಕ್ರಮ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಅವರು ತಿಳಿಸಿದ್ದಾರೆ.

      ಅವರು ಪಟ್ಟಣದ ನಟರಾಜ ಕಲಾಭವನದಲ್ಲಿ ಆಯೋಜಿಸಿದ್ದ ಮನ್ ಕಿಬಾತ್ (ಮನದ ಮಾತು) ಕಾರ್ಯಕ್ರಮವನ್ನು ಶ್ರವಣ ಮಾಡಿ, ಪರದೆ ಮೇಲೆ ವೀಕ್ಷಿಸಿದ ನಂತರ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕಾರ್ಯಕ್ರಮದಿಂದ ಯುವಕರಲ್ಲಿ ಪ್ರಶ್ನೆ ಕೇಳುವ ಪ್ರವೃತ್ತಿ ಬೆಳೆಯುತ್ತದೆ, ಎಂದರು.

        ವಾಜಪೇಯಿ ಅವರ ಪೋಕ್ರಾನ್ ಕುರಿತು, ಸಂವಿಧಾನ ಶಿಲ್ಪಿ ಬಿ.ಆರ್ .ಅಂಬೇಡ್ಕರ ಅವರ ಬಗ್ಗೆ ವiನ್ ಕಿಬಾತ್ ದಲ್ಲಿ ಮಾಹಿತಿ ನೀಡಲಾಯಿತು. ದೇಶದ 50 ಕಡೆ ಈ ರೀತಿ 50ನೇ ಕಂತಿನ ಮನ್ ಕಿಬಾತ್ ಕಾರ್ಯಕ್ರಮವನ್ನು ಬಹಿರಂಗವಾಗಿ ಪರದಿ ಮೂಲಕ ಕಾರ್ಯಕ್ರರ್ತರೊಂದಿಗೆ ವೀಕ್ಷಿಸಲು ಕೇಂದ್ರ ಬಿಜೆಪಿ ಮುಖಂಡ ಸೂಚನೆ ಮೇರೇಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

          ಬೆಳಿಗ್ಗೆ 11 ಗಂಟೆಗೆ ಹಿಂದಿಯಲ್ಲಿ ಮನ್ ಕಿಬಾತ್ ಕಾರ್ಯಕ್ರಮ ನಂತರ 11.30 ರಿಂದ ಬಾನುಲಿ ಭಾಷಣದ ಕನ್ನಡ ಅನುವಾದ ಪ್ರಸಾರ ವಾಯಿತು.  

     ಶೇ.70 ರಷ್ಟು ಜನರು ಮನ್ ಕಿಬಾತ್ ಕೇಳುತ್ತಾರೆ, ಇದರಿಂದ ದೊಡ್ಡ ಪ್ರಮಾಣದಲ್ಲಿ ಜನಾಂದೋಲನಕ್ಕೆ ಉತ್ತೇಜನ ಸಿಗುತ್ತದೆ, ಸ್ವಇಚ್ಚೆಯಿಂದ ಕೆಲಸ ಮಾಡುವ ಭಾವನೆ ಹೆಚ್ಚಲಿದೆ ಎಂದು ಮನ್ ಕಿಬಾತ್ ನಲ್ಲಿ ಮೋದಿಯವರು ಹೇಳಿದರು.ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ, ಪುರಸಭಾ ಅಧ್ಯಕ್ಷ ಎಚ್ .ಕೆ. ಹಾಲೇಶ, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಸಣ್ಣ ಹಾಲಪ್ಪ, ವೈಕೆಬಿ ದುರುಗಪ್ಪ, ರಾಘವೇಂದ್ರಶೆಟ್ಟಿ, ಲಿಂಬ್ಯಾನಾಯ್ಕ,, ಸಂತೋಷ, ತಾ.ಪಂ ಅದ್ಯಕ್ಷೆ ಅನ್ನಪೂರ್ಣಮ್ಮ, ಉಪಾದ್ಯಕ್ಷ ಮಂಜನಾಯ್ಕ, ಲೋಕೇಶ, ಸಿಸಿ ರಾಮಚಂದ್ರನಾಯ್ಕ, ಮಲ್ಲೇಶ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap