ಮಾಸಿಕ ಶರಣ ಸಂಗಮ ಕಾರ್ಯಕ್ರಮ

ಹಾನಗಲ್ಲ :

       ಮಾನವಂತ ಸಮಾಜದ ಉಳಿವಿಗಾಗಿ ವಚನ ಸಾಹಿತ್ಯ ನಿಜ ಸ್ವರೂಪದ ಅರಿವು ಮೂಡಿಸುವ ಮೂಲಕ ನಾಡಿದ ಭವಿಷ್ಯದ ಬದುಕನ್ನು ಹಸನುಗೊಳಿಸಲು ಈಗ ಸನ್ನದ್ಧವಾಗಬೇಕಾಗಿದೆ ಎಂದು ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ.ಮಂಜುನಾಥ ಕರೆ ನೀಡಿದರು.

        ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಮಾಸಿಕ ಶರಣ ಸಂಗಮ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಚನಗಳ ಸಾರ ಜಾತ್ಯಾತೀತವಾದುದು, ಮಾನವೀಯತೆಯ ಮೇರು ಸದೃಶ್ಯ ಜೀವನವನ್ನು ಜಾಗೃತಗೊಳಿಸುವ ಶಕ್ತಿ ವಚನಗಳಿಗಿದೆ. ಶರಣರ ನಡೆ ನುಡಿಗಳು ಅನುಭವ ಹಾಗೂ ಅನುಭಾವದ ಅಂತಃಕರಣವುಳ್ಳ ಸಾತ್ವಿಕ ಸಂದೇಶಗಳು.

         ಆದರೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಬೇಕಾಗುವ ಇಂಥ ಸಾಹಿತ್ಯ ಮಾತ್ರ ಜನರಿಂದ ದೂರ ಉಳಿಯುತ್ತಿರುವುದೇ ವಿಷಾದದ ಸಂಗತಿ. ಈಗ ಮನೆ ಮನಗಳಿಗೆ ವಚನ ಸಂಸ್ಕಾರ ನೀಡುವಲ್ಲಿ ಸ್ವಯಂ ಸ್ಪೂರ್ತಿಯಿಂದ ಮುಂದಾಗಬೇಕಾಗಿದೆ. ಬದುಕಿನ ಸತ್ಯಗಳನ್ನು ಅರಿಯಬೇಕಾಗಿದೆ. ಇದಕ್ಕಾಗಿ ಒಗ್ಗೂಡು ಸೇವೆ ಸಲ್ಲಿಸೋಣ ಎಂದರು.

          ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಶರಣರ ಸಂದೇಶಗಳು ಇಂದಿನ ಮಕ್ಕಳ ಮನಸ್ಸಿಗೆ ಮೊದಲು ತಲುಪಬೇಕಾಗಿದೆ. ಶಾಲೆ ಕಾಲೇಜುಗಳಲ್ಲಿ ವಚನಗಳ ಅರ್ಥ ಬಿಡಿಸಿ ಅರುಹುವ ಕೆಲಸವಾಗಬೇಕು. ಪಠ್ಯದೊಂದಿಗೆ ಬದುಕಿನ ಸತ್ಯಗಳನ್ನು ತಿಳಿಸುವ ವಚನಗಳು ನಮ್ಮೊಳಗೆ ಮೊಳೆಕಯೊಡೆದು ಮರವಾಗಬೇಕಾಗಿದೆ. ಇದಕ್ಕಾಗಿ ಈಗ ಒಂದಷ್ಟು ಶ್ರಮಿಸಿದರೆ ನಾಳೆ ಸಮಾಜಕ್ಕೆ ಒಳ್ಳೆಯ ಫಲ ಸಿಗಲು ಸಾಧ್ಯ ಎಂದರು.

        ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅಕ್ಕಮ್ಮ ಕುಂಬಾರಿ ಅಧ್ಯಕ್ಷತೆವಹಿಸಿದ್ದರು. ಗೌರವಾಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಉಪಾಧ್ಯಕ್ಷೆ ಮಧುಮತಿ ಪೂಜಾರ, ವಿಜಯಾ ಕಬ್ಬೂರ, ಸವಿತಾ ಉದಾಸಿ, ಕಾರ್ಯದರ್ಶಿ ರೇಖಾ ಶೆಟ್ಟರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ನಿರಂಜನ ಗುಡಿ, ತಾಲೂಕು ಕಾರ್ಯದರ್ಶಿ ಪ್ರವೀಣ ಬ್ಯಾತನಾಳ, ಕೋಶಾಧ್ಯಕ್ಷ ಎಸ್.ವಿ.ಹೊಸಮನಿ, ಆರ್.ಬಿ.ರೆಡ್ಡಿ, ವಿ.ಬಿ.ಸಿಗ್ಗಾವಿ, ಎಸ್.ವಿ.ಮಠದ, ರಾಜು ಉಕ್ಕುಂದ, ಸುಮಂಗಲಮ್ಮ, ರತ್ನಕ್ಕ ಡೂಗೂರಮಠ, ಆಶ್ವಿನಿ ರೋಣದ, ಚೈತ್ರಾ ಕಂಬಾಳಿಮಠ, ಜಯಣ್ಣ ಉಪ್ಪಿನ, ಪ್ರೇಮಾ ಮುದಿಗೌಡರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಚನ ಪಠಣ :

          ಸರೋಜಾ ಹಿರೇಮಠ, ಮಾಧವಿ ವರ್ಧಿ, ಪಂಕಜಾ ಅರಳೆಲಿಮಠ, ಸುನಿತಾ ಉಪ್ಪಿನ, ಸುವರ್ಣಾ ಅರಳೆಇಮಠ, ಕಾವ್ಯಾ ಹಿರೇಮಠ, ನಾಗಶ್ರೀ ಗುಂಡೇಗೌಳಿ, ವನಘಾ ಹಿರೇಮಠ, ಗೀತಾ ಚಕ್ರಸಾಲಿ, ಭುವನೇಶ್ವರಿ ಚೊಗಚಿಕೊಪ್ಪ, ಸುಭಾಸ ಚೊಗಚಿಕೊಪ್ಪ, ಶಂಬು ಹೇರೂರ, ವಿಜಕ್ಕ ಕಬ್ಬೂರ ಶರಣರ ವಚನ ಪಠಣ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link